ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್​ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ​ ಪತ್ರ, ಎಲ್​ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ. ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್​ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ. ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. […]

ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!
ಸಾಧು ಶ್ರೀನಾಥ್​

Updated on: Apr 25, 2020 | 1:18 PM

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್​ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ​ ಪತ್ರ, ಎಲ್​ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ.

ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್​ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ.

ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. ಕೊಡಗು ಡಿಸಿ, ಎಸ್​ಪಿಗೆ ಸೇವಾ ಕೇಂದ್ರದಿಂದ ದೂರು ಸಲ್ಲಿಕೆಯಾಗಿದೆ. ಪೋಸ್ಟ್ ಮ್ಯಾನ್​ ಮಹೇಶ್​ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಕೇಸ್​ ದಾಖಲು ಮಾಡಲಾಗಿದೆ.

Published On - 1:12 pm, Sat, 25 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us