ಕೊಡಗು: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆ; ಗ್ರಾಹಕನಿಂದ ಆಹಾರ ಇಲಾಖೆಗೆ ದೂರು

| Updated By: preethi shettigar

Updated on: Oct 01, 2021 | 8:58 AM

ಮಂಡೀರ ಕಾರ್ಯಪ್ಪ ಎಂಬುವವರ ಮನೆಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಅಂಗಡಿಯಲ್ಲಿ ಖರೀದಿಸಿದ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆಯಾಗಿದೆ. ಸದ್ಯ ಮಂಡೀರ ಕಾರ್ಯಪ್ಪ ಆಹಾರ ಇಲಾಖೆಗೆ ಈ ಸಂಬಂಧ ದೂರು ನೀಡಿದ್ದಾರೆ.

ಕೊಡಗು: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆ; ಗ್ರಾಹಕನಿಂದ ಆಹಾರ ಇಲಾಖೆಗೆ ದೂರು
ಕೋಳಿ ಮೊಟ್ಟೆ
Follow us on

ಕೊಡಗು: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದ ಅಂಗಡಿಯಲ್ಲಿ ಖರೀದಿಸಿದ ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆಯಾಗಿದೆ.ಮಂಡೀರ ಕಾರ್ಯಪ್ಪ ಎಂಬುವವರ ಮನೆಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಅಂಗಡಿಯಲ್ಲಿ ಖರೀದಿಸಿದ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆಯಾಗಿದೆ. ಸದ್ಯ ಮಂಡೀರ ಕಾರ್ಯಪ್ಪ ಆಹಾರ ಇಲಾಖೆಗೆ ಈ ಸಂಬಂಧ ದೂರು ನೀಡಿದ್ದಾರೆ.

ಮಂಡೀರ ಕಾರ್ಯಪ್ಪ ಕಳೆದ ಶನಿವಾರ ಮಾದಾಪುರದ ಅಂಗಡಿಯಿಂದ 12 ಮೊಟ್ಟೆಗಳನ್ನು ಖರೀದಿಸಿ ಮನೆಗೆ ತಂದಿದ್ದಾರೆ. ಬುಧವಾರ (ಸೆಪ್ಟೆಂಬರ್ 27) ಈ ಮೊಟ್ಟೆಗಳನ್ನು ಬೇಯಿಸಿದ್ದು, ತಿನ್ನುವಾಗ ಬಾಯಲ್ಲಿ ಏನೋ ಸಿಕ್ಕಿದ ಹಾಗೆ ಆಗಿದೆ. ತೆಗೆದು ನೋಟಿದಾಗ ಕಬ್ಬಿಣದ ಚೂರು ಪತ್ತೆಯಾಗಿದೆ. ಬಳಿಕ ಗಾಬರಿಗೊಂಡ ಮಂಡೀರ ಕಾರ್ಯಪ್ಪ ಬೆಂಗಳೂರಿನಲ್ಲಿ ವಾಸವಾಗಿರುವ ತಮ್ಮ ಮಗಳಿಗೆ ವಿಷಯ ತಿಳಿಸಿದ್ದು, ಮೊಟ್ಟೆಯನ್ನು ಹಾಗೆ ತೆಗೆದಿಟ್ಟಿದ್ದಾರೆ.

ಇಷ್ಟೇ ಅಲ್ಲದೇ ಮಂಡೀರ ಕಾರ್ಯಪ್ಪ ಸಂಬಂಧಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಮತ್ತೆ ಗುರುವಾರ ಮೊಟ್ಟೆ ಬೇಯಿಸಿದ್ದಾರೆ. ಈ ಮೊಟ್ಟೆಗಳಲ್ಲಿ ಮೊದಲಿಗಿಂತ ದೊಡ್ಡ ಕಬ್ಬಿಣದ ಚೂರುಗಳು ಪತ್ತೆಯಾಗಿವೆ. ಈಗಾಗಲೇ ಆಹಾರ ಇಲಾಖೆಗೆ ದೂರು ನೀಡಿದ್ದು, ಇಲಾಖೆಯವರು ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:
ಕೊಡಗು: ಕೊರೊನಾ ವಾರಿಯರ್ಸ್​ಗೆ ಊಟ ಪೂರೈಸಿದ್ದ ಹೋಟೆಲ್ ಮಹಿಳೆಗೆ ಕಿರುಕುಳ; ಅಧಿಕಾರಿಗಳ ವಿರುದ್ಧ ಆರೋಪ

ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್

Published On - 7:23 am, Fri, 1 October 21