ಕೊಡಗು: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ; ಆಶ್ಚರ್ಯ ಮೂಡಿಸಿದ ದಿಢೀರ್ ನಿರ್ಧಾರ

| Updated By: ganapathi bhat

Updated on: Nov 26, 2021 | 9:11 PM

JDS Karnataka: ತೆನೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಐಸಾಕ್ ಖಾನ್, ಇಂದು ಸ್ಪರ್ಧೆಯಿಂದ‌ ದಿಢೀರ್ ಹಿಂದೆ ಸರಿದುಕೊಂಡಿದ್ದಾರೆ. ವರಿಷ್ಠರ ಸೂಚನೆಯಂತೆ ಹಿಂದೆ ಸರಿದಿರುವುದಾಗಿ ಹೇಳಿಕೆ ನೀಡಿದ್ದಾರೆ.

ಕೊಡಗು: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ; ಆಶ್ಚರ್ಯ ಮೂಡಿಸಿದ ದಿಢೀರ್ ನಿರ್ಧಾರ
ಜೆಡಿಎಸ್
Follow us on

ಮಡಿಕೇರಿ: ಕರ್ನಾಟಕ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರುತ್ತಿರುವಂತೆ ಇದೀಗ ಹೊಸದೊಂದು, ಆಶ್ಚರ್ಯಕರ ವಿಚಾರ ತಿಳಿದುಬಂದಿದೆ. ಪರಿಷತ್ ಚುನಾವಣಾ ಕಣದಿಂದ ಜೆಡಿಎಸ್ ಅಭ್ಯರ್ಥಿ ಹಿಂದೆ ಸರಿದಿದ್ದಾರೆ. ಕೊಡಗು ಕ್ಷೇತ್ರದಿಂದ‌ ಜೆಡಿಎಸ್ ಅಭ್ಯರ್ಥಿ ಐಸಾಕ್ ಖಾನ್ ಹಿಂದೆ ಸರಿದಿದ್ದಾರೆ. ತೆನೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಐಸಾಕ್ ಖಾನ್, ಇಂದು ಸ್ಪರ್ಧೆಯಿಂದ‌ ದಿಢೀರ್ ಹಿಂದೆ ಸರಿದುಕೊಂಡಿದ್ದಾರೆ. ವರಿಷ್ಠರ ಸೂಚನೆಯಂತೆ ಹಿಂದೆ ಸರಿದಿರುವುದಾಗಿ ಹೇಳಿಕೆ ನೀಡಿದ್ದಾರೆ. ಚುನಾವಣೆಯಿಂದ‌ ಜೆಡಿಎಸ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಇದೀಗ ಕೊಡಗಿನಲ್ಲಿ ಕಾಂಗ್ರೆಸ್‌- ಬಿಜೆಪಿ ನೇರ ಫೈಟ್ ಶುರುವಾಗಿದೆ.

ಬಿಜೆಪಿ ಸ್ವಂತ ಬಲದ ಮೇಲೆ ಅಭ್ಯರ್ಥಿ ಹಾಕಿದ್ದು ಗೆಲ್ಲುತ್ತೇವೆ: ಸಿಎಂ ಬೊಮ್ಮಾಯಿ ವಿಶ್ವಾಸ
ಜೆಡಿಎಸ್ ಜತೆ ಒಪ್ಪಂದ ಎಂದು ಕಾಂಗ್ರೆಸ್​​ನವರ ಆರೋಪ ಇದೆ. ಕಾಂಗ್ರೆಸ್ ಜತೆ ಒಪ್ಪಂದ ಎಂದು ಜೆಡಿಎಸ್​ನವರು ಹೇಳ್ತಾರೆ. ಕಾಂಗ್ರೆಸ್, ಜೆಡಿಎಸ್​​ನವರು ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಸ್ವಂತ ಬಲದ ಮೇಲೆ ಅಭ್ಯರ್ಥಿ ಹಾಕಿದ್ದು ಗೆಲ್ಲುತ್ತೇವೆ ಎಂದು ಚಿತ್ರದುರ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಇಲ್ಲದ‌ ಕಡೆ ಬೆಂಬಲದ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಹೇಳಿಕೆ ಅರ್ಥ ಹೊಂದಾಣಿಕೆ ಎಂಬುದಲ್ಲ. ಚುನಾವಣೆಯಲ್ಲಿ ಯಾರೇ ಬೆಂಬಲ‌ ನೀಡಿದ್ರೂ ಪಡೀತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಾಂಗ್ರೆಸ್​​ಗೆ ನಮ್ಮ ಎದುರು ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲ
ಬಿಜೆಪಿ ಸರ್ಕಾರ ಬಂದಾಗಿನಿಂದ ಆಧಾರರಹಿತ ಆರೋಪಗಳನ್ನು ಮಾಡುವುದು ಕಾಂಗ್ರೆಸ್ ಹವ್ಯಾಸ. ರಾಜ್ಯಪಾಲರಿಗೆ ದೂರು ಕೊಡುವ ಮೊದಲೇ ಸಮಿತಿ ರಚನೆ ಮಾಡಿದ್ದಾರೆ. ಇದಕ್ಕಿಂತ ಬೇರೆ ಪುರಾವೆ ಕಾಂಗ್ರೆಸ್ ಪಕ್ಷಕ್ಕೆ ಏನು ಬೇಕು? ಗುತ್ತಿಗೆದಾರರ ಆರೋಪದ ಪ್ರತಿಯನ್ನು ನಾನು ನೋಡಿದ್ದೇನೆ. ಆದರೆ ಅದರಲ್ಲಿ ಯಾವುದೇ ಹೆಸರು ಉಲ್ಲೇಖ ಮಾಡಿಲ್ಲ. ಇದು ಯಾರದ್ದೋ ಷಡ್ಯಂತ್ರದ ಕೃತ್ಯ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​​ಗೆ ನಮ್ಮ ಎದುರು ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲ. ನಮ್ಮ ಸರ್ಕಾರ ಗ್ರಾ.ಪಂ.ಗಳಿಗೆ ಹೆಚ್ಚು ಅನುದಾನ ನೀಡಿದೆ. ಜಲ ಜೀವನ್​​ ಮಿಷನ್ ಅಡಿಯಲ್ಲಿ ನೀರೊದಗಿಸುವ ಕೆಲಸ ಮಾಡಿದೆ. ಪ್ರತಿ ಮನೆಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಗಳು ಜನರ ಮನಸ್ಸಿಗೆ ಮುಟ್ಟಿವೆ. ಕೊವಿಡ್ ಸಂದರ್ಭದಲ್ಲೂ ಕೇಂದ್ರ, ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಯಾದಗಿರಿಯಲ್ಲಿ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರ್ ಹೇಳಿಕೆ ನೀಡಿದ್ದಾರೆ.

ಧಾರವಾಡ, ವಿಜಯಪುರ-ಬಾಗಲಕೋಟೆ ಪರಿಷತ್ ಚುನಾವಣೆ ವಿವರ
ಧಾರವಾಡ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಸಂಬಂಧ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. 6 ಜನ ಪಕ್ಷೇತರರು ಸೇರಿದಂತೆ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ವಿಜಯಪುರ-ಬಾಗಲಕೋಟೆ ಕ್ಷೇತ್ರದ ಪರಿಷತ್​ ಚುನಾವಣೆಯ ಅಂತಿಮ ಕಣದಲ್ಲಿ 7 ಅಭ್ಯರ್ಥಿಗಳು ಉಳಿದಿದ್ದಾರೆ. ದ್ವಿಸದಸ್ಯ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 12 ಅಭ್ಯರ್ಥಿಗಳ ಪೈಕಿ ಐವರಿಂದ ನಾಮಪತ್ರ ವಾಪಸ್​ ಪಡೆಯಲಾಗಿದೆ. ಬಿಜೆಪಿಯ ಪಿ.ಹೆಚ್. ಪೂಜಾರ, ಕಾಂಗ್ರೆಸ್​ನ ಸುನಿಲ್​ಗೌಡ ಪಾಟೀಲ, ಪಕ್ಷೇತರರಾಗಿ ಕಾಂತಪ್ಪ ಇಂಚಗೇರಿ, ದುರುಗಪ್ಪ ಸಿದ್ದಾಪುರ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಲೋಣಿ, ಶ್ರೀಮಂತ ಬಾರಿಕಾರಿ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳು ಎಂದು ಮಾಹಿತಿ ಲಭಿಸಿದೆ. ಡಿಸೆಂಬರ್ 10 ರಂದು ಮತದಾನ, ಡಿಸೆಂಬರ್ 14 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿ ಘೋಷಣೆ; ಕಾಂಗ್ರೆಸ್, ಬಿಜೆಪಿ ವಿರುದ್ಧ ಹರಿಹಾಯ್ದ ಹೆಚ್​ಡಿ ಕುಮಾರಸ್ವಾಮಿ

ಇದನ್ನೂ ಓದಿ: ಪರಿಷತ್ ಚುನಾವಣೆ: ಜೆಡಿಎಸ್, ಬಿಜೆಪಿ ಹೊಂದಾಣಿಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ- ಬಿಎಸ್ ಯಡಿಯೂರಪ್ಪ ಹೇಳಿಕೆ

Published On - 8:25 pm, Fri, 26 November 21