ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿ ಘೋಷಣೆ; ಕಾಂಗ್ರೆಸ್, ಬಿಜೆಪಿ ವಿರುದ್ಧ ಹರಿಹಾಯ್ದ ಹೆಚ್​ಡಿ ಕುಮಾರಸ್ವಾಮಿ

2 ಸದಸ್ಯ ಸ್ಥಾನಗಳಲ್ಲಿ ಒಂದು ಅಭ್ಯರ್ಥಿ ಏಕೆ ಹಾಕಿದ್ದಾರೆ? ಒಂದೊಂದೇ ಅಭ್ಯರ್ಥಿ ಹಾಕುವುದರ ಹಿಂದೆ ಒಳಒಪ್ಪಂದ ಇದೆಯಾ? ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಇದೆಯಾ? ಎಂದು ಕಾಂಗ್ರೆಸ್​​, ಬಿಜೆಪಿ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿ ಘೋಷಣೆ; ಕಾಂಗ್ರೆಸ್, ಬಿಜೆಪಿ ವಿರುದ್ಧ ಹರಿಹಾಯ್ದ ಹೆಚ್​ಡಿ ಕುಮಾರಸ್ವಾಮಿ
ಹೆಚ್‌.ಡಿ.ಕುಮಾರಸ್ವಾಮಿ

ಚಿಕ್ಕಬಳ್ಳಾಪುರ: ಡಿಸೆಂಬರ್ 10 ರಂದು ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಜೆಡಿಎಸ್​ ಅಭ್ಯರ್ಥಿಗಳನ್ನು ನಿಲ್ಲಿಸಿದರೂ ಕಷ್ಟ ಬಿಟ್ಟರೂ ಕಷ್ಟ. ಏನೇ ಮಾಡಿದ್ರೂ ಬಿಜೆಪಿ ಜತೆ ಶಾಮೀಲಾಗಿದ್ದಾರೆ ಅಂತಾರೆ. ನಮ್ಮಿಂದಲೇ ಬೆಳೆದು ಹೋದ ಕೆಲವರು ಟೀಕೆ ಮಾಡುತ್ತಾರೆ. ಕೆಲವು ಜಿಲ್ಲೆಗಳಲ್ಲಿ 2 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 2 ಸದಸ್ಯ ಸ್ಥಾನಗಳಲ್ಲಿ ಒಂದು ಅಭ್ಯರ್ಥಿ ಏಕೆ ಹಾಕಿದ್ದಾರೆ? ಒಂದೊಂದೇ ಅಭ್ಯರ್ಥಿ ಹಾಕುವುದರ ಹಿಂದೆ ಒಳಒಪ್ಪಂದ ಇದೆಯಾ? ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಇದೆಯಾ? ಎಂದು ಕಾಂಗ್ರೆಸ್​​, ಬಿಜೆಪಿ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ನಾವು ಯಾರ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರಕ್ಕೆ ಜೆಡಿಎಸ್​ ಅಭ್ಯರ್ಥಿ ಘೋಷಣೆ ಆಗಿದೆ. ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡರೇ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಮಳೆ ಹಾನಿ ಪರಿಹಾರ ನೀಡಲು ಇನ್ನೂ ಎಷ್ಟುದಿನ ಬೇಕು. ಪರಿಹಾರ ನೀಡಲು ಸರ್ಕಾರಕ್ಕೆ ಎಷ್ಟು ದಿನಗಳು ಬೇಕು? ಮಳೆ ಹಾನಿ ವಿಚಾರದಲ್ಲಿ ಹೇಳಿಕೆಗಳು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವರ ಹೇಳಿಕೆ ಗೊಂದಲಮಯವಾಗಿದೆ. ಸಿಎಂ, ಸಚಿವರದ್ದು ಒಂದೊಂದು ಅಂಕಿ ಸಂಖ್ಯೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ಮಕ್ಕಳ ಶಿಷ್ಯವೇತನ ವಿಚಾರದಲ್ಲಿ ಸರ್ಕಾರ ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪನವರು ನಮ್ಮ ಬೆಂಬಲವನ್ನ ಕೋರಿದ್ರು. ಕೆಲವು ಚುನಾವಣೆಯಲ್ಲಿ ನೇರವಾಗಿ ಬೆಂಬಲ ಕೋರಿದ್ದರು. ಇವತ್ತು ಬಿಎಸ್​​ವೈರನ್ನ ಅಧಿಕಾರದಿಂದ ಇಳಿಸಲಾಗಿದೆ. ಬಿಜೆಪಿ ಜೊತೆಗೆ ಕಾಂಗ್ರೆಸ್​ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​​ನ ಮಹಾನ್ ನಾಯಕರಿಂದ ಒಳ ಒಪ್ಪಂದ ಆಗಿದೆ. ಆದರೆ ಕಾಂಗ್ರೆಸ್​ ನಮ್ಮ ವಿರುದ್ಧ ಆರೋಪ ಮಾಡುತ್ತಿದೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಎಸಿಬಿ ದಾಳಿ ಕುರಿತು ಹೆಚ್​ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆಯಲ್ಲಿ 9 ಕೆಜಿ ಚಿನ್ನ ಪತ್ತೆ ಆಗಿದೆ. ಆ ಅಧಿಕಾರಿ ಬೆಳೆ ಬದಲು ಚಿನ್ನವನ್ನೇ ಬೆಳೆದನಾ? ರಾಜ್ಯದಲ್ಲಿ ಪರಿಸ್ಥಿತಿ ಬೇರೆ ಆಗಿದೆ. 2 ರೂಪಾಯಿ 3 ರೂಪಾಯಿ ಲಂಚ ಪಡೆದವರಿಗೆ ಶಿಕ್ಷೆ ಆಗಿದೆ. ಕೋಟ್ಯಾಂತರ ರೂ. ಲಂಚ ಹೊಡೆದವರು ಆರಾಮಾಗಿದ್ದಾರೆ ಎಂದು ಟೀಕಿಸಿದ್ದಾರೆ.

ವೀರಪ್ಪ ಮೊಯ್ಲಿ ಮಹಾನ್​ ಸುಳ್ಳುಗಾರ
ಎಂ. ವೀರಪ್ಪ ಮೊಯ್ಲಿಯನ್ನ ಮಹಾನ್​ ಸುಳ್ಳುಗಾರ ಅಂತಾರೆ. ಕಾಂಗ್ರೆಸ್​ ನಾಯಕರೇ ಮೊಯ್ಲಿ ಸುಳ್ಳುಗಾರ ಅಂತಾರೆ. ದೇಶದ ಸುಳ್ಳುಗಾರ ಪ್ರಶಸ್ತಿ ವೀರಪ್ಪ ಮೊಯ್ಲಿಗೆ ನೀಡಬೇಕು. ನನ್ನ ಬದ್ಧತೆ ಪ್ರಶ್ನಿಸುವ ಮೊಯ್ಲಿಗೆ ಯಾವ ಬದ್ಧತೆಯಿದೆ. ಎತ್ತಿನಹೊಳೆ ಯೋಜನೆಗೆ ಸ್ಪಷ್ಟ ಡಿಪಿಆರ್​ ಸಿದ್ಧಪಡಿಸಿಲ್ಲ. ಗುತ್ತಿಗೆದಾರರ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಬೆಳಗ್ಗೆ ನಾನು ತೋಟದಲ್ಲಿದ್ದಾಗ ಸ್ಫೋಟದ ಅನುಭವ ಆಗಿದೆ. ಅದು ಯಾವ ಶಬ್ದ ಎಂದು ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಭಾರೀ ಸದ್ದು ಕೇಳಿ ಬಂದ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.

ರಾಜಕೀಯ ವ್ಯವಸ್ಥೆ ಹಾಳಾಗಲು 2 ಪಕ್ಷಗಳೇ ಕಾರಣ: ಹೆಚ್​.ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಗೆ ಗುತ್ತಿಗೆದಾರರು ಪತ್ರ ಬರೆದ ವಿಚಾರವಾಗಿ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿಕೆ ನೀಡಿದ್ದಾರೆ. ರಾಜಕೀಯ ವ್ಯವಸ್ಥೆ ಹಾಳಾಗಲು 2 ಪಕ್ಷಗಳೇ ಕಾರಣ. ರಾಜಕೀಯ ವ್ಯವಸ್ಥೆ ಈ ಮಟ್ಟಿಗೆ ಬರಲು 2 ಪಕ್ಷ ಕಾರಣ. ಈ ವ್ಯವಸ್ಥೆಯಲ್ಲಿ ಎಲ್ಲರೂ ಸೇರಿದ್ದಾರೆ. ನಾನು ಯಾವುದೇ ವೈಯಕ್ತಿಕ ವಿಚಾರ ಮಾತನಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ ಹೇಳಿದ್ಧಾರೆ.

ಇದನ್ನೂ ಓದಿ: ಸಂಕಷ್ಟ ಎದುರಿಸುತ್ತಿದೆ ಜೆಡಿಎಸ್: ತುಮಕೂರು ಸಮಾವೇಶದಲ್ಲಿ ಎಚ್​ಡಿ ಕುಮಾರಸ್ವಾಮಿ

ಇದನ್ನೂ ಓದಿ: ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಟೀಕೆ

Click on your DTH Provider to Add TV9 Kannada