ಕರ್ನಾಟಕದಲ್ಲಿ ಬಡಾ ಗೌಡ, ಚೋಟಾ ಗೌಡ, ಪೋತಾಗೌಡ ಇದ್ದಾರೆ; ಕುಟುಂಬ ರಾಜಕೀಯದಿಂದ ಸಂವಿಧಾನಕ್ಕೆ ಅಪಾಯ: ಸಿಟಿ ರವಿ

Constitution Day 2021: ಎಸ್​ಸಿ- ಎಸ್​ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದಾರೆ. ಭಾಷಣದಲ್ಲಿ ಕುಟುಂಬ ರಾಜಕಾರಣ ವಿಚಾರವನ್ನು ಗುರಿಯಾಗಿಸಿ ಅವರು ಮಾತನಾಡಿದ್ದಾರೆ.

ಕರ್ನಾಟಕದಲ್ಲಿ ಬಡಾ ಗೌಡ, ಚೋಟಾ ಗೌಡ, ಪೋತಾಗೌಡ ಇದ್ದಾರೆ; ಕುಟುಂಬ ರಾಜಕೀಯದಿಂದ ಸಂವಿಧಾನಕ್ಕೆ ಅಪಾಯ: ಸಿಟಿ ರವಿ
ಸಿ.ಟಿ ರವಿ
Follow us
TV9 Web
| Updated By: ganapathi bhat

Updated on: Nov 26, 2021 | 9:22 PM

ದೆಹಲಿ: ಭಾರತ ದೇಶದಲ್ಲಿ ವಂಶವಾರು ಆಧಾರದಲ್ಲಿ ರಾಜಕೀಯ ನಡೀತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜಕೀಯ ಇದೆ. ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಕುಟುಂಬ ರಾಜಕಾರಣ ಇದೆ. ಮಹಾರಾಷ್ಟ್ರದಲ್ಲಿ ಪವಾರ್ ಕುಟುಂಬದಿಂದ ರಾಜಕಾರಣ ಇದೆ. ಕರ್ನಾಟಕದಲ್ಲಿ ಬಡಾ ಗೌಡ, ಚೋಟಾ ಗೌಡ, ಪೋತಾಗೌಡ ಇದ್ದಾರೆ. ಈ ಕುಟುಂಬಗಳ ರಾಜಕೀಯದಿಂದ ಸಂವಿಧಾನಕ್ಕೆ ಅಪಾಯ ಎಂದು ದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಬೇಡ್ಕರ್ ಆಶಯ ಈಡೇರಿಸುತ್ತಿದ್ದಾರೆ. ಕಡೆಯ ವ್ಯಕ್ತಿಯನ್ನು ಸಹ ಬಲಿಷ್ಠ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಎಸ್​ಸಿ- ಎಸ್​ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದಾರೆ. ಭಾಷಣದಲ್ಲಿ ಕುಟುಂಬ ರಾಜಕಾರಣ ವಿಚಾರವನ್ನು ಗುರಿಯಾಗಿಸಿ ಅವರು ಮಾತನಾಡಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶದಲ್ಲಿ ವಂಶವಾರು ಆಧಾರದಲ್ಲಿ ರಾಜಕೀಯ ನಡೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜಕೀಯ ನಡೆಯುತ್ತಿದೆ ಎಂದು ವಿಪಕ್ಷಗಳ ವಿರುದ್ಧ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಬಡಾ ಗೌಡ, ಚೋಟಾ ಗೌಡ, ಪೋತಾ ಗೌಡ ರಾಜಕೀಯ ನಡೆಯುತ್ತಿದೆ ಎಂದು ದೇವೆಗೌಡರ ಕುಟುಂಬವನ್ನು ಸಿ.ಟಿ ರವಿ ಪರೋಕ್ಷವಾಗಿ ಟಾರ್ಗೆಟ್ ಮಾಡಿದ್ದಾರೆ.

ಪರಿವಾರಕ್ಕಾಗಿ ಸಂವಿಧಾನ ಇಲ್ಲ, ಈ ಕುಟುಂಬಗಳಿಂದ ರಾಜಕೀಯದಿಂದ ಸಂವಿಧಾನ ಅಪಾಯದಲ್ಲಿದೆ. ದೇಶವನ್ನು ಒಂದುಗೂಡಿಸುವ ಕೆಲಸ ಅಂಬೇಡ್ಕರ್ ಮಾಡಿದರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮಾಡಿದರು. ಸಮಾನ ಅವಕಾಶಕ್ಕಾಗಿ ಸಂವಿಧಾನವಿದೆ. ನರೇಂದ್ರ ಮೋದಿ, ಅಂಬೇಡ್ಕರ್ ಆಶಯ ಈಡೇರಿಸುತ್ತಿದ್ದಾರೆ. ಕಡೆಯ ವ್ಯಕ್ತಿಯನ್ನು ಬಲಿಷ್ಠ ಮಾಡುವ ಪ್ರಯತ್ನದಲ್ಲಿದ್ದಾರೆ. ದೇಶವನ್ನು ಅಖಂಡವಾಗಿ ಇಡಲು ಸಂವಿಧಾನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Constitution Day 2021: ಸಂವಿಧಾನ ದಿನದ ವಿಶೇಷ ಹಾಗೂ ಆಚರಣೆಯ ಉದ್ದೇಶವೇನು?; ಇಲ್ಲಿದೆ ಮಾಹಿತಿ

ಇದನ್ನೂ ಓದಿ: Constitution Day 2021: ಸಂವಿಧಾನ ಥೀಮ್​ನೊಂದಿಗೆ ವಕೀಲರ ವಿಶಿಷ್ಟ ವೆಡ್ಡಿಂಗ್ ಕಾರ್ಡ್​​; ಅಪರೂಪದ ಲಗ್ನ ಪತ್ರಿಕೆ ಇಲ್ಲಿದೆ ನೋಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM