Biodiversity Medicinal Park: ರಾಜ್ಯದ ಮೊದಲ ಜೀವವೈವಿಧ್ಯ ಔಷಧ ಉದ್ಯಾನ ಕೊಡಗಿನಲ್ಲಿ ಆರಂಭ

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯ ಹಾರಂಗಿಯಲ್ಲಿ ರಾಜ್ಯದ ಮೊದಲ ಜೀವವೈವಿಧ್ಯ ಔಷಧ ಉದ್ಯಾನ ನಿರ್ಮಾಣವಾಗುತ್ತಿದೆ. ಶುಕ್ರವಾರ ಉದ್ಯಾನ ಕಾಮಗಾರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಶಂಕುಸ್ಥಾಪನೆ ನೆರವೇರಿಸಿದರು.

Biodiversity Medicinal Park: ರಾಜ್ಯದ ಮೊದಲ ಜೀವವೈವಿಧ್ಯ ಔಷಧ ಉದ್ಯಾನ ಕೊಡಗಿನಲ್ಲಿ ಆರಂಭ
ರಾಜ್ಯದ ಮೊದಲ ಜೀವವೈವಿಧ್ಯ ಔಷಧ ಉದ್ಯಾನ
Follow us
ವಿವೇಕ ಬಿರಾದಾರ
|

Updated on:Mar 18, 2023 | 7:16 AM

ಮಡಿಕೇರಿ: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಕೊಡಗು (Kodagu) ಜಿಲ್ಲೆಯ ಹಾರಂಗಿಯಲ್ಲಿ ರಾಜ್ಯದ ಮೊದಲ ಜೀವವೈವಿಧ್ಯ ಔಷಧ ಉದ್ಯಾನ (Biodiversity Medicinal Park) ನಿರ್ಮಾಣವಾಗುತ್ತಿದೆ. ನಿನ್ನೆ (ಮಾ.17) ಉದ್ಯಾನ ಕಾಮಗಾರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಶಂಕುಸ್ಥಾಪನೆ ನೆರವೇರಿಸಿದರು. ಔಷಧೀಯ ಸಸ್ಯಗಳನ್ನು ಬೆಳೆಸಿ, ಅವುಗಳ ಮಹತ್ವವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ 2.5 ಹೆಕ್ಟೇರ್ ಪ್ರದೇಶದಲ್ಲಿ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಿಸಲು ಮಂಡಳಿ ಮುಂದಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ (MLA Appachu Ranja) ಉದ್ಯಾನವನ ನಿರ್ಮಾಣಕ್ಕೆ ಹಾರಂಗಿ ಉತ್ತಮವಾದ ಜಾಗವಾಗಿದೆ. ಭಾರತ ವಿವಿಧ ಔಷಧೀಯ ಗಿಡಮೂಲಿಕೆಗಳ ರಫ್ತು ಮಾಡುವ ದೇಶ. ಹೊಸ ಜೀವವೈವಿಧ್ಯ ಉದ್ಯಾನವನಿಂದ ಸಾಕಷ್ಟು ಅನುಕೂಲವಾಗಲಿದೆ. ಶೀಘ್ರದಲ್ಲೇ ಭಾಗಮಂಡಲದಲ್ಲಿಯೂ ಔಷಧೀಯ ಗಿಡಮೂಲಿಕೆಗಳ ಉದ್ಯಾನವನವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಮಾನವನಿಗೆ ಕಾಡುತ್ತಿರುವ ರೋಗಗಳನ್ನು ಗುಣಪಡಿಸಲು ಔಷಧೀಯ ಸಸ್ಯಗಳ ಬಳಕೆ ಅವಶ್ಯವಾಗಿದೆ. ಪ್ರತಿಯೊಬ್ಬರೂ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು. ಭಾರತೀಯರು ಪ್ರಕೃತಿ ಆರಾಧಕರು. ಈ ಮೊದಲೆಲ್ಲ ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಲೇವಡಿ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಪ್ರಕೃತಿ ಆರಾಧನೆಯ ಮಹತ್ವ ವಿದೇಶಿಗರಿಗೆ ಅರಿವಾಗಿದೆ. ಕೊಡಗಿನಲ್ಲಿ ಪ್ರತಿ ಊರಿನಲ್ಲೂ ದೇವರ ಕಾಡುಗಳು ಇವೆ. ಹಿಂದಿನಿಂದಲೂ ಆ ಕಾಡುಗಳನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಈ ಕಾಡುಗಳಲ್ಲೂ ಅಪಾರ ಔಷಧೀಯ ಗಿಡಗಳು, ಜೀವ ವೈವಿಧ್ಯಗಳಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಇನ್ನು ಮನೆ ಬಾಗಿಲಿಗೇ ಬರಲಿದೆ ಭಗಂಡೇಶ್ವರ, ತಲಕಾವೇರಿ ದೇಗುಲಗಳ ಪ್ರಸಾದ

ಕೊಡಗಿನಲ್ಲಿ ಮಾದರಿ ಔಷಧ ಉದ್ಯಾನ ನಿರ್ಮಿಸಲು ಮಂಡಳಿ ಮಾಸ್ಟರ್ ಪ್ಲಾನ್ ಮಾಡಿದೆ. ಜಿಲ್ಲೆಯಲ್ಲಿ ಕಂಡುಬರುವ ಸಮೃದ್ಧ ಸಸ್ಯ ಸಂಕುಲವನ್ನು ಸಂರಕ್ಷಿಸಲು ಜಿಲ್ಲೆಯಲ್ಲಿ ಉದ್ಯಾನವನ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.

ಜಿಲ್ಲೆಯ ಪ್ರತಿ ಪಂಚಾಯಿತಿಗಳಲ್ಲಿ ಜೈವಿಕ ವೈವಿಧ್ಯ ಉದ್ಯಾನವನಗಳನ್ನು ಸ್ಥಾಪಿಸಲು ಮಂಡಳಿ ಉದ್ದೇಶಿಸಿದೆ. ಕೂರ್ಗ್ ಮ್ಯಾಂಡರಿನ್ ಒಂದು ಕಾಲದಲ್ಲಿ ಜಿಲ್ಲೆಯ ವಿಶೇಷ ಸಸ್ಯವಾಗಿತ್ತು. ಆದರೆ, ಅಸ್ತಿತ್ವ ಕಳೆದುಕೊಂಡಿದ್ದು, ಈ ತಳಿಯನ್ನು ಉತ್ತೇಜಿಸಲು ಸಂಶೋಧನೆ ನಡೆಸಲಾಗುತ್ತಿದೆ ಎಂದರು.

ವಿಶ್ವದ ಹನ್ನೆರಡು ಜೀವವೈವಿಧ್ಯ ತಾಣಗಳಲ್ಲಿ ಪಶ್ಚಿಮಘಟ್ಟ ಪ್ರದೇಶವು ಪ್ರಮುಖ ಸ್ಥಳವಾಗಿದೆ. “ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಶೇ.70 ರಷ್ಟು ಔಷಧೀಯ ಸಸ್ಯಗಳಿವೆ. ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಇಲ್ಲದಿದ್ದರೆ ಭಾರತ ಮರುಭೂಮಿಯಾಗುತ್ತಿತ್ತು. ಅಲ್ಲದೇ ಪಶ್ಚಿಮಘಟ್ಟದಲ್ಲಿ ಹಲವು ನದಿಗಳು ಹುಟ್ಟಿಕೊಂಡಿವೆ” ಎಂದು ಕೊಡಗು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ ಮೂರ್ತಿ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 am, Sat, 18 March 23

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ