ಶಾಸಕ ಅವಧಿ ಮುಗಿಯುವ ಹಂತದಲ್ಲೇ ಸಂಕಷ್ಟ ತಂದಿಟ್ಟ ವಯಸ್ಸು: ಕೆಜಿ ಬೋಪಯ್ಯ ವಿರುದ್ಧ ದೂರು ದಾಖಲು

ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಚುನಾವಣಾ ಆಯೋಗಕ್ಕೆ ತಮ್ಮ ಜನ್ಮದಿನಾಂಕವನ್ನು ತಪ್ಪಾಗಿ ನೀಡಿದ್ದಾರೆಂದು ಪಿಬಿ ತಿಮ್ಮಯ್ಯ ಎಂಬುವುವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಸಕ ಅವಧಿ ಮುಗಿಯುವ ಹಂತದಲ್ಲೇ ಸಂಕಷ್ಟ ತಂದಿಟ್ಟ ವಯಸ್ಸು: ಕೆಜಿ ಬೋಪಯ್ಯ ವಿರುದ್ಧ ದೂರು ದಾಖಲು
ಶಾಸಕ ಕೆಜಿ ಬೋಪಯ್ಯ
Follow us
ವಿವೇಕ ಬಿರಾದಾರ
|

Updated on:Mar 10, 2023 | 8:45 AM

ಬೆಂಗಳೂರು:  2018ರ ವಿಧಾನಸಭೆ ಚುನಾವಣೆಯಲ್ಲಿ (Assembly Election 2018) ಬಿಜೆಪಿಯಿಂದ ಸ್ಪರ್ಧಿಸಿ ವಿರಾಜಪೇಟೆ ಕ್ಷೇತ್ರದಿಂದ ಗೆದ್ದಿರುವ ಕೆಜಿ ಬೋಪಯ್ಯಗೆ (KG Bopaiah) ಸಂಕಷ್ಟ ಎದುರಾಗಿದೆ. ಇನ್ನೇನು ಶಾಸಕರ ಅವಧಿ ಮುಗಿದು 16ನೇ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಂದರ್ಭದಲ್ಲೇ ಬಿಜೆಪಿ ಕೆಜಿ ಬೋಪಯ್ಯ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನಿಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ  ಚುನಾವಣಾ ಆಯೋಗಕ್ಕೆ ತಮ್ಮ ಜನ್ಮದಿನಾಂಕವನ್ನು ತಪ್ಪಾಗಿ ನೀಡಿದ್ದಾರೆಂದು ಪಿಬಿ ತಿಮ್ಮಯ್ಯ ಎಂಬುವುವರು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ (Virajpete Police Station) ದೂರು ದಾಖಖಲಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಜಿ ಬೋಪಯ್ಯ ಚುನಾವಣಾ ಆಯೋಗದ ನಾಮಪತ್ರದಲ್ಲಿ ತಮ್ಮ ವಯಸ್ಸು 65 ಎಂದು ದಾಖಲಿಸಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪ್ರತಾಪ್ ಸಿಂಹ ಮಿನಿಸ್ಟ್ರೇನ್ರೀ? ಕೇವಲ ಸಂಸದ ಅಷ್ಟೇ: ಸಿದ್ದರಾಮಯ್ಯ

26-10-1979 ರಲ್ಲಿ ವಕೀಲರ ಕರ್ನಾಟಕ ಬಾರ್ ಕೌನ್ಸಿಲ್​ನ​ ಸದಸ್ಯರಾಗಿದ್ದರು. ಈ ವೇಳೆ ಬಾರ್​ ಕೌನ್ಸಿಲ್​ನಲ್ಲಿ ತಮ್ಮ ಜನ್ಮ ದಿನಾಂಕ 17-10-1951 ಎಂದು ದಾಖಲಿಸಿದ್ದರು. ಈ ಪ್ರಕಾರ 2018ರಲ್ಲಿ ಕೆ ಜಿ ಬೋಪಯ್ಯ ಅವರ ನೈಜ ವಯಸ್ಸು 67. ಆದರೆ ಬೋಪಯ್ಯ ನಾಮಪತ್ರದಲ್ಲಿ 65 ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಬೋಪಯ್ಯ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

2004 ಮತ್ತು 2013ರಲ್ಲೂ ತಪ್ಪು ಮಾಹಿತಿ ನೀಡಿದ್ದ ಬೋಪಯ್ಯ

2004ರಲ್ಲಿ ಬೋಪಯ್ಯ ವಯಸ್ಸು 53 ಇದ್ದು, ಚುನಾವಣಾ ಆಯೋಗಕ್ಕೆ 49 ವರ್ಷ ಎಂದು ನೀಡಿದ್ದರು. ನಂತರ 2013ರ ಚುನಾವಣೆಯ ಸಮಯದಲ್ಲೂ ಅವರ ವಯಸ್ಸು 61 ಇದ್ದು, 58 ವರ್ಷ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಮ್ಮಯ್ಯ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 am, Fri, 10 March 23

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್