ಭೂ ಕುಸಿತವಾಗಿ 4 ವರ್ಷವಾದರೂ ಪರಿಹಾರ ಸಿಕ್ಕಿಲ್ಲ, ಮುಂಗಾರು ಮಳೆ ಆರಂಭಕ್ಕೂ ಮುನ್ನ ಮತ್ತೆ ಕೊಡಗಿನಲ್ಲಿ ಟೆನ್ಷನ್
ಕೊಡಗಿನಲ್ಲಿ ಕಂಡು ಕೇಳರಿಯದ ಪ್ರವಾಹ, ಭೂ ಕುಸಿತದ ಕರಾಳ ನೆನಪು ಇನ್ನೂ ಮಾಸಿಲ್ಲ. ಈಗ ಮುಂಗಾರು ಮಳೆ ಆರಂಭಕ್ಕೂ ಮುನ್ನ ಕೊಡಗಿನಲ್ಲಿ ಮತ್ತೆ ಟೆನ್ಷನ್ ಶುರುವಾಗಿದೆ.
ಕೊಡಗು: ಪ್ರವಾಸಿಗರ ಸ್ವರ್ಗದಂತಿದ್ದ ಕೊಡಗಿನಲ್ಲಿ 3 ವರ್ಷಗಳ ಹಿಂದೆ ಮಳೆ ನರಕ ಸೃಷ್ಟಿಸಿದ್ದ. ಭೂಕುಸಿತ, ಪ್ರವಾಹದಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರಿ. ಆಗ ನೂರಾರು ಕೋಟಿ ರೂಪಾಯಿ ಅನುದಾನವೂ ಹರಿದು ಬಂದಿತ್ತು. ಇನ್ಫೋಸಿಸ್ ಫೌಂಡೇಷನ್ 250 ಮನೆಗಳನ್ನ ನಿರ್ಮಾಣ ಮಾಡಿತ್ತು. ಸಂತ್ರಸ್ತರಿಗೆ ಮಾತ್ರ ವಿತರಣೆಯಾಗಿಲ್ಲ. 2018-2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದ ಕಂಗೆಟ್ಟಿತ್ತು. ಪೃಕೃತಿ ವಿಕೋಪಕ್ಕೆ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಇವ್ರ ಜೊತೆ ಟಿವಿ9 ಸೇರಿದಂತೆ ಇಡೀ ಕರುನಾಡೇ ನಿಂತಿತ್ತು. ಆದ್ರೆ, ಘಟನೆ ನಡೆದು 4 ವರ್ಷ ಕಳೆದ್ರೂ ಪರಿಹಾರ ಮಾತ್ರ ಸಿಕ್ಕಿಲ್ಲ.
ಹೌದು.. ಕೊಡಗಿನಲ್ಲಿ ಕಂಡು ಕೇಳರಿಯದ ಪ್ರವಾಹ, ಭೂ ಕುಸಿತದ ಕರಾಳ ನೆನಪು ಇನ್ನೂ ಮಾಸಿಲ್ಲ.. ಇದರಲ್ಲಿ ಸಾವಿರಾರು ಮಂದಿ ಬೀದಿಗೆ ಬಿದ್ದಿದ್ದರು. ಈಗಾಗಲೇ750 ಮಂದಿ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ ಕೊಡಗಿನ ವಿವಿಧೆಡೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಇದರ ಜೊತೆಗೆ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 250 ಮನೆಗಳನ್ನು ನಿರ್ಮಿಸಲಾಗಿದೆ. ಮನೆ ಕಾಮಗಾರಿ ಬಹುತೇಕ ಸಂಪೂರ್ಣಗಿದೆ. ಒಂದೊಂದು ಮನೆಗೆ 11 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದಲ್ಲಿ ಈಗಾಗಲೇ ಸಂತ್ರಸ್ತರು ನೆಮ್ಮದಿಯಿಂದ ಹೊಸ ಮನೆ ಪ್ರವೇಶ ಮಾಡಬೇಕಾಗಿತ್ತು. ಆದ್ರೆ, ಐದು ವರ್ಷವಾದರೂ ಈ ಮನೆಗಳು ಇನ್ನೂ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿಲ್ಲ.
ಮಳೆಗಾಲ ಆರಂಭಕ್ಕೂ ಮುನ್ನ ಮನೆ ಕೊಡಿ ಎಂದ ಜನರು
ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆಗಾಲ ಆರಂಭವಾಗಲಿದೆ. ಜಿಲ್ಲೆಯ ಬಹಳಷ್ಟು ಪ್ರದೇಶವನ್ನ ಅಪಾಯಕಾರಿ ಅಂತ ಗುರುತಿಸಲಾಗಿದ್ದು, ಮಳೆಗಾಲದಲ್ಲಿ ಆ ಪ್ರದೇಶಗಳನ್ನ ತೊರೆಯಬೇಕಾಗಿದೆ. ಅದೂ ಅಲ್ಲದೆ ಇನ್ನೂ 400 ಕ್ಕೂ ಅಧಿಕ ಸಂತ್ರಸ್ತರಿಗೆ ಮನೆಗಳನ್ನು ವಿತರಿಸಬೇಕಾಗಿದೆ. ಕನಿಷ್ಠ ಇನ್ಫೋಸಿಸ್ ನಿರ್ಮಾಣದ ಮನೆಗಳನಾದ್ರೂ ಮಳೆಗಾಲ ಆರಂಭಕ್ಕೂ ಮುನ್ನ ವಿತರಿಸಿದ್ರೆ ಸುರಕ್ಷಿತವಾಗಿರುತ್ತೇವೆ ಎನ್ನುವುದು ಸಂತ್ರಸ್ತರ ಬೇಡಿಕೆಯಾಗಿದೆ..
ಮೇಲ್ನೋಟಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಇನ್ಪೋಸಿಸ್ ಮಧ್ಯೆ ಹೊಂದಾಣಿಕೆ ಇದ್ದಂತಿಲ್ಲ ಅಂತ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನ ಮನೆ ಕೊಡಿ ಅಂತ ಕೇಳ್ತೀದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಇನ್ಫೋಸಿಸ್ನಿಂದ ಮನೆ ಪಡೆದು ಸಂತ್ರಸ್ತರಿಗೆ ಹಸ್ತಾಂತರಿಸುತ್ತಾ ಕಾದುನೋಡಬೇಕಿದೆ.