3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ. ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ. ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ […]

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ
ಸಾಧು ಶ್ರೀನಾಥ್​

Updated on: Dec 24, 2019 | 8:36 AM

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ.

ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ.

ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ ಮೂರು ದಿನ, ನಾಗರಿಕ ಸಮಾಜದಿಂದ ದೂರ ಉಳಿಯುವ ಈ ಜನಾಗಂದವ್ರು ತಮ್ಮ ಸಂಸ್ಕೃತಿಯನ್ನ ಆಚರಿಸ್ತಾರೆ. ವಾಲಗ, ಬೊಳಕಾಟ್, ಕೊಲಾಟ್, ಉಮ್ಮತಾಟ್ ಆಚರಿಸಿ ಎಂಜಾಯ್​​ ಮಾಡ್ತಾರೆ.

ಮಡಿಕೇರಿಯಿಂದ 40 ಕಿಮೀ ದೂರದ ತಡಿಯಂಡಮೋಳ್ ಬೆಟ್ಟದ ಸಮೀಪ ಎಲ್ರೂ ಆಗಮಿಸ್ತಾರೆ. ವಾಹನ ತಲುಪದ ದುರ್ಗಮ ಕಾಡಿನಲ್ಲಿಯೇ 15 ಕಿಲೋಮೀಟರ್​ಗೂ‌ ಹೆಚ್ಚು ನಡೆದು ಹೋಗಿ ಹಬ್ಬ ಆಚರಿಸ್ತಾರೆ. ಮೂರು ದಿನ ಕಾಡಿನಲ್ಲೇ ವಾಸಿಸುವ ಜನರೆಲ್ಲ, ಅಲ್ಲೇ ಚಪ್ಪರ ನಿರ್ಮಿಸಿ ಮನೆ ದೇವರಿಗೆ ಪೂಜೆ ಸಲ್ಲಿಸ್ತಾರೆ. ಭರ್ಜರಿ ಬಾಡೂಟ ಸವಿದು, ರಾತ್ರಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ.




Published On - 8:35 am, Tue, 24 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us