
ಕೊಡಗು, ಫೆ.05: ಎನರ್ಜಿ ಡ್ರಿಂಕ್ ರೆಡ್ ಬುಲ್ (Red Bull) ಕುಡಿದು ಯುವಕ ಅಸ್ವಸ್ಥಗೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ವಿನೋದ್(27)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿನೋದ್ ಎಂಬ ಯುವಕ ಮಡಿಕೇರಿಯ ಶಾಪ್ ಒಂದರಿಂದ ಎನರ್ಜಿ ಡ್ರಿಂಕ್ ಖರೀದಿಸಿ ಕುಡಿದಿದ್ದ. ರೆಡ್ ಬುಲ್ ಟಿನ್ ಒಳಗೆ ಲೋಳೆಯಂತ ವಸ್ತು ಪತ್ತೆಯಾಗಿದೆ. ಘಟನೆ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನರ್ಜಿ ಡ್ರಿಂಕ್ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. ವಿಶ್ವಾಸ್(27) ಮೃತ ದುರ್ದೈವಿ. ಬೆಂಗಳೂರಿನ ನಾಯಂಡಹಳ್ಳಿ ಮೂಲದ ವಿಶ್ವಾಸ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿಯ ಮುತ್ತೇತ್ತರಾಯನ ದರ್ಶನಕ್ಕೆ ಬಂದಿದ್ದ. ದೇವರ ದರ್ಶನಕ್ಕೂ ಮೊದಲು ಸ್ನೇಹಿತರೆಲ್ಲರು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಮುಳುಗಿ ವಿಶ್ವಾಸ್ ಮೃತಪಟ್ಟಿದ್ದಾನೆ. ವಿಶ್ವಾಸ್ ಮೃತ ದೇಹಕ್ಕಾಗಿ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Crime News: ಕುಡಿದ ನಶೆಯಲ್ಲಿ ತಾಯಿಯನ್ನೇ ಕೊಂದ ಮಗ
ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ಟೈರ್ ಬ್ಲಾಸ್ಟ್ ಆಗಿ ಕಾರೊಂದು ಬ್ಯಾರಿಕೇಡ್‌ಗೆ ಗುದ್ದಿದೆ. ಬ್ಯಾರಿಕೇಡ್ ಬಿದ್ದು ಮೂವರು ಟೋಲ್ ಸಿಬ್ಬಂದಿಗೆ ಗಾಯವಾಗಿದೆ. ಕಾರು ಚಾಲಕನನ್ನ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಕೊತ್ತನೂರು ಬಳಿ ಮಾಲ್‌ನಲ್ಲಿ ಸ್ನೇಹಿತನ ಜೊತೆ ಕಾಣಿಸಿಕೊಂಡಿದ್ದ ಮಹಿಳೆಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಫೆ.2ರಂದು ರಾತ್ರಿ 11.30ರ ಸುಮಾರಿಗೆ ಮೂವರಿಂದ ಕೃತ್ಯ ಎಸಗಿದ್ದಾರೆ. ಎರಡು ಕಾರಿನ ಗಾಜು ಮತ್ತು ಬೈಕ್ ಜಖಂ ಗೊಳಿಸಿದ್ದಾರೆ. ಮೂವರು ಅಟ್ಟಹಾಸ ಮೆರೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಂದಹಾಗೆ, ಶರಣ್ ಎಂಬಾತನ ಜೊತೆ ಮಹಿಳೆ ಆತ್ಮೀಯವಾಗಿದ್ಲು. ಇಬ್ಬರು ಮಾಲ್‌ಗೆ ಹೋಗಿದ್ರು. ಮನೆ ಕಟ್ಟಿಸುವಾಗ ಶರಣ್ ಪರಿಚಯವಾಗಿದ್ರು. ಮನೆ ಕಟ್ಟಿಸುವಾಗ ಮೆಟಿರಿಯಲ್ಸ್‌ಗೆ ಹಣ ಕೊಟ್ಟಿದ್ದರೂ, ಅವರ ಫ್ಯಾಮಿಲಯವರು ಹಣ ಕೊಟ್ಟಿಲ್ಲ ಅಂತಾ ಗಲಾಟೆ ಮಾಡಿದ್ದಾರೆ. ಸಂಬಂಧ ಇಟ್ಟುಕೊಂಡಿದ್ದೀರಾ ಅಂತಾ ದಾಳಿ ಮಾಡಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:40 pm, Mon, 5 February 24