ಲೋಕಾಯುಕ್ತ ಮತ್ತೊಂದು ACB ಆಗಬಾರದು; ಪ್ರಾಮಾಣಿಕ ಅಧಿಕಾರಿಗಳು ಬೇಕು: ಉಪಲೋಕಾಯಕ್ತ ಕೆ.ಎನ್ ಫಣೀಂದ್ರ

| Updated By: ವಿವೇಕ ಬಿರಾದಾರ

Updated on: Jan 22, 2023 | 4:52 PM

ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ನಿಜ, ಆದರೆ ಭ್ರಷ್ಟ ಅಧಿಕಾರಿಗಳು ಈಗ ಪೊಲಿಸರಿಗಿಂತ ಜಾಣರಿದ್ದಾರೆ. ಭ್ರಷ್ಟಾಚಾರ ಕಂಟ್ರೋಲ್ ಮಾಡುವುದಕ್ಕೆ ಪ್ರಾಮಾಣಿಕ ಅಧಿಕಾರಿಗಳು ಬೇಕು ಎಂದು ಉಪ ಲೋಕಾಯಕ್ತ ಕೆ.ಎನ್ ಫಣೀಂದ್ರ ಹೇಳಿದ್ದಾರೆ.

ಲೋಕಾಯುಕ್ತ ಮತ್ತೊಂದು ACB ಆಗಬಾರದು; ಪ್ರಾಮಾಣಿಕ ಅಧಿಕಾರಿಗಳು ಬೇಕು: ಉಪಲೋಕಾಯಕ್ತ ಕೆ.ಎನ್ ಫಣೀಂದ್ರ
ಉಪಲೋಕಾಯಕ್ತ ಕೆ.ಎನ್ ಫಣೀಂದ್ರ
Follow us on

ಕೊಡಗು: ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ನಿಜ, ಆದರೆ ಭ್ರಷ್ಟ ಅಧಿಕಾರಿಗಳು ಈಗ ಪೊಲಿಸರಿಗಿಂತ ಜಾಣರಿದ್ದಾರೆ. ಭ್ರಷ್ಟಾಚಾರ ಕಂಟ್ರೋಲ್ ಮಾಡುವುದಕ್ಕೆ ಪ್ರಾಮಾಣಿಕ ಅಧಿಕಾರಿಗಳು ಬೇಕು ಎಂದು ಉಪ ಲೋಕಾಯಕ್ತ ಕೆ.ಎನ್ ಫಣೀಂದ್ರ ಹೇಳಿದ್ದಾರೆ. ಲೋಕಾಯುಕ್ತಕ್ಕೆ ಎಲ್ಲರೂ ದೂರು ನೀಡುತ್ತಾರೆ. ಆದರೆ ಆ ಪ್ರಕರಣ ನ್ಯಾಯಾಲಯಕ್ಕೆ ಬರುವ ವೇಳೆಗೆ ದೂರು ನೀಡಿದವರೇ ಉಲ್ಟಾ ಹೊಡೆಯುತ್ತಾರೆ. ಈಗಿನ ಅಧಿಕಾರಿಗಳು ಪೊಲೀಸರಿಗಿಂತ ಹುಷಾರಾಗಿದ್ದು, ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುವುದನ್ನು ಚೆನ್ನಾಗಿ ಅರಿತಿದ್ದಾರೆ ಎಂದು ವಾಸ್ತವ ಬಿಚ್ಚಿಟ್ಟರು.

ಕೊಡಗಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲೋಕಾಯುಕ್ತ ಮತ್ತೊಂದು ಎಸಿಬಿ ಆಗಬಾರದು. ಭ್ರಷ್ಟಾಚಾರ ಸುಧಾರಿಸಬೇಕಾದರೆ ಲೋಕಾಯುಕ್ತಕ್ಕೆ ಪ್ರಾಮಾಣಿಕ ಅಧಿಕಾರಿಗಳು ಬರಬೇಕು. ಅಷ್ಟೇ ಅಲ್ಲದೆ, ಲೋಕಾಯುಕ್ತಕ್ಕೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಅಧಿಕಾರವಿಲ್ಲ, ಬದಲಿಗೆ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಮಾತ್ರ ಇದೆ. ಹೀಗಾಗಿ ಲೋಕಾಯುಕ್ತ ಶಿಫಾರಸ್ಸು ಮಾಡುವುದನ್ನು ಸರ್ಕಾರ ಸಂಪೂರ್ಣ ಪಾಲಿಸಿದರೆ ಭ್ರಷ್ಟಾಚಾರ ತಡೆಗಟ್ಟಬಹುದು ಎಂದು ಅಸಹಾಯಕತೆ ತೋಡಿಕೊಂಡರು.

ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಜನರ ಪಾತ್ರವೂ ಬಹಳ ಮುಖ್ಯ ಇದೆ. ಸಾಕ್ಷ್ಯಗಳ ಸಮೇತ ದೂರು ನೀಡಿದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ ಲೋಕಾಯುಕ್ತ ನ್ಯಾಯಮೂರ್ತಿಗಳೇ ಭ್ರಷ್ಟ ವ್ಯವಸ್ಥೆ ಮತ್ತು ಅದನ್ನು ನಿಯಂತ್ರಿಸುವಲ್ಲಿ ಲೋಕಾಯುಕ್ತದ ಅಸಮರ್ಥತೆಯನ್ನು ಬಿಚ್ಚಿಟ್ಟಿರುವುದು ನಿಜಕ್ಕೂ ಸಮಾಜ ಚಿಂತಿಸುವಂತೆ ಮಾಡಿದೆ.

ಗೋಪಾಲ್ ಸೋಮಯ್ಯ, ಟಿವಿ9 ಕೊಡಗು

Published On - 4:52 pm, Sun, 22 January 23