Talacauvery Theerthodbhava: ಮಡಿಕೇರಿ -ಈ ಬಾರಿ ತಲಕಾವೇರಿ ತೀರ್ಥೋದ್ಭವಕ್ಕೆ‌ ಸುಮುಹೂರ್ತ ನಿಗದಿಯಾಯ್ತು

| Updated By: ಸಾಧು ಶ್ರೀನಾಥ್​

Updated on: Sep 16, 2022 | 6:17 PM

Bhagamandala: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕಾರ್ಯದಲ್ಲಿ ಈ ಸುಮುಹೂರ್ತ ನಿಗದಿಯಾಗಿದೆ.

Talacauvery Theerthodbhava: ಮಡಿಕೇರಿ -ಈ ಬಾರಿ ತಲಕಾವೇರಿ ತೀರ್ಥೋದ್ಭವಕ್ಕೆ‌ ಸುಮುಹೂರ್ತ ನಿಗದಿಯಾಯ್ತು
ಮಡಿಕೇರಿ -ಈ ಬಾರಿ ತಲಕಾವೇರಿ ತೀರ್ಥೋದ್ಭವಕ್ಕೆ‌ ಸುಮುಹೂರ್ತ ನಿಗದಿಯಾಯ್ತು
Follow us on

ಮಡಿಕೇರಿ: ಕಾವೇರಿ… ಇದೊಂದು ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಗೆ ತಾಯಿ. ಜೀವನದಿ. ದೈವೀ ಸ್ವರೂಪಿಣಿ. ಹೀಗಾಗಿಯೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ.

ಈ ಬಾರಿ ತಲಕಾವೇರಿ (Talacauvery) ತೀರ್ಥೋದ್ಭವಕ್ಕೆ (talacauvery theerthodbhava)‌ ಮುಹೂರ್ತ ನಿಗಧಿಯಾಗಿದೆ. ಅಕ್ಟೋಬರ್ 17ರ ಸಂಜೆ 7.21 ಕ್ಕೆ ತೀರ್ಥೋದ್ಭವವಾಗಲಿದೆ. ಅಂದು ಸೋಮವಾರ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ. ಕೊಡಗು ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭಾಗಮಂಡಲ (Bhagamandala) ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕಾರ್ಯದಲ್ಲಿ ಈ ಸುಮುಹೂರ್ತ ನಿಗದಿಯಾಗಿದೆ.

ಕೊರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಈ ಪವಿತ್ರ ತೀರ್ಥೋದ್ಭವದ ಜಾತ್ರೆ ಸರಳವಾಗಿ ಆಚರಣೆಗೊಂಡಿತ್ತು. ಹೀಗಾಗಿ ಬೇಸರಗೊಂಡಿದ್ದ ಭಕ್ತರಿಗೆ, ಈ ಬಾರಿ ತೀರ್ಥೋದ್ಭವ ಕಣ್ತುಂಬಿಕೊಳ್ಳೋ ಅವಕಾಶ ಸಿಕ್ಕಿದೆ.  ತೀರ್ಥ ರೂಪದಲ್ಲಿ ದರ್ಶನ ನೀಡುವ ಜೀವನದಿಯನ್ನು ನೋಡಿ ಪುನೀತರಾಗಲು ಯಾವುದೇ ಅಡೆತಡೆ ಇರಲ್ಲ.

Published On - 6:09 pm, Fri, 16 September 22