ಮಡಿಕೇರಿ: ಭಾರತ- ಪಾಕಿಸ್ತಾನ ಟಿ20 ಕ್ರಿಕೆಟ್ ನೋಡುವಾಗ ಹೃದಯಾಘಾತವಾಗಿ ವ್ಯಕ್ತಿ ನಿಧನ

| Updated By: ganapathi bhat

Updated on: Oct 25, 2021 | 3:45 PM

Kodagu News: ದೊಡ್ಡಮಳ್ತೆಯಲ್ಲಿ ಹೃದಯಾಘಾತದಿಂದ ಉದಯ್ (55) ಎಂಬವರು ಸಾವನ್ನಪ್ಪಿದ್ದಾರೆ. ನಿನ್ನೆ ಭಾರತ- ಪಾಕ್ ನಡುವೆ ವಿಶ್ವಕಪ್​ ಟಿ-20 ಪಂದ್ಯ ನಡೆದಿತ್ತು. ಈ ಪಂದ್ಯ ವೀಕ್ಷಣೆ ಸಮಯದಲ್ಲೇ ಉದಯ್ ಎಂಬವರು ಮೃತಪಟ್ಟಿದ್ದಾರೆ.

ಮಡಿಕೇರಿ: ಭಾರತ- ಪಾಕಿಸ್ತಾನ ಟಿ20 ಕ್ರಿಕೆಟ್ ನೋಡುವಾಗ ಹೃದಯಾಘಾತವಾಗಿ ವ್ಯಕ್ತಿ ನಿಧನ
ಕ್ರಿಕೆಟ್ ಪಂದ್ಯ ನೋಡುವಾಗ ಹೃದಯಾಘಾತವಾಗಿ ವ್ಯಕ್ತಿ ನಿಧನ
Follow us on

ಮಡಿಕೇರಿ: ಭಾರತ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯ​ ನೋಡುವಾಗ ಹೃದಯಾಘಾತವಾಗಿ ವ್ಯಕ್ತಿ ಮೃತಪಟ್ಟ ದುರ್ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ದೊಡ್ಡಮಳ್ತೆಯಲ್ಲಿ ಹೃದಯಾಘಾತದಿಂದ ಉದಯ್ (55) ಎಂಬವರು ಸಾವನ್ನಪ್ಪಿದ್ದಾರೆ. ನಿನ್ನೆ ಭಾರತ- ಪಾಕ್ ನಡುವೆ ವಿಶ್ವಕಪ್​ ಟಿ-20 ಪಂದ್ಯ ನಡೆದಿತ್ತು. ಈ ಪಂದ್ಯ ವೀಕ್ಷಣೆ ಸಮಯದಲ್ಲೇ ಉದಯ್ ಎಂಬವರು ಮೃತಪಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಇಡೀ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದುವಾಗಿತ್ತು. ಗೆಲ್ಲುವ ಫೆವರಿಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಪ್ರಚಂಡ ಪ್ರದರ್ಶನ ನೀಡಿದ ಪಾಕಿಸ್ತಾನ ಕೊನೆಗೂ ವಿಶ್ವಕಪ್‌ ಇತಿಹಾಸದಲ್ಲಿ ಭಾರತದ ಎದುರು ಸೋಲಿನ ಸರಪಣಿಯನ್ನು ಕಡಿದುಕೊಂಡಿತ್ತು.

ಕ್ರಿಕೆಟ್ ಅಭಿಮಾನಿಗಳ ಕ್ರಿಕೆಟ್ ವೀಕ್ಷಣೆಯ ಸಂಭ್ರಮದ ನಡುವೆ ದುರ್ಘಟನೆಯೊಂದು ಸಂಭವಿಸಿದೆ. ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಗ್ರಾಮದಲ್ಲಿ 55 ವರ್ಷದ ಉದಯ್ ಎಂಬವರು ಕ್ರಿಕೆಟ್ ನೋಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Babar Azam: ಭಾರತ ವಿರುದ್ಧ ಗೆದ್ದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ ನಾಯಕ ಬಾಬರ್​ ಅಜಾಮ್​: ಏನು ಗೊತ್ತೇ?

ಇದನ್ನೂ ಓದಿ: T20 World Cup: ಪಾಕ್ ಎದುರು 10 ವಿಕೆಟ್ ಸೋಲು! ಭಾರತದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣ

Published On - 3:29 pm, Mon, 25 October 21