ಸೆಮಿಫೈನಲ್ ತಲುಪಲು ಭಾರತ ಮಾಡಬೇಕಾದ ಮೊದಲ ಕೆಲಸವೆಂದರೆ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಭಾರತದ ಗುಂಪಿನಲ್ಲಿ ಪಾಕಿಸ್ತಾನದ ಹೊರತಾಗಿ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್, ನಮೀಬಿಯಾ ಮತ್ತು ಅಫ್ಘಾನಿಸ್ತಾನ ಇವೆ. ಇವುಗಳಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಭಾರತದ ಗೆಲುವು ನಿಶ್ಚಿತ ಎಂದು ಪರಿಗಣಿಸಬಹುದು. ಆದರೂ ಅದು ಸುಲಭವಲ್ಲ. ಇವುಗಳಲ್ಲಿಯೂ ಅಫ್ಘಾನಿಸ್ತಾನ ಅತ್ಯಂತ ಅಪಾಯಕಾರಿ ತಂಡವಾಗಿದೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ವಿಶ್ವಕಪ್‌ನಲ್ಲಿ ಗೆದ್ದಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಪಡೆ ಈ ಬಾರಿ ಹೊಸ ಇತಿಹಾಸ ನಿರ್ಮಿಸಿ ಕಿವೀಸ್ ತಂಡವನ್ನು ಸೋಲಿಸಬೇಕಿದೆ. ಇದು ಸಂಭವಿಸದಿದ್ದರೆ ಭಾರತದ ಪ್ರಯಾಣ ಮುಗಿದ ಅಧ್ಯಾಯವಾಗಲಿದೆ.