Babar Azam: ಭಾರತ ವಿರುದ್ಧ ಗೆದ್ದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ ನಾಯಕ ಬಾಬರ್​ ಅಜಾಮ್​: ಏನು ಗೊತ್ತೇ?

Pakistan Captain Babar Azam Talking after win against India: ಪಂದ್ಯ ಮುಗಿದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಮುಖವಾಗಿ ಭಾರತ ವಿರುದ್ಧ ಗೆಲ್ಲಲು ಮಾಡಿದ ಮಾಸ್ಟರ್ ಪ್ಲಾನ್ ಬಹಿರಂಗ ಪಡಿಸಿದ್ದಾರೆ.

Babar Azam: ಭಾರತ ವಿರುದ್ಧ ಗೆದ್ದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ ನಾಯಕ ಬಾಬರ್​ ಅಜಾಮ್​: ಏನು ಗೊತ್ತೇ?
Babar Azam India vs Pakistan
Follow us
TV9 Web
| Updated By: Vinay Bhat

Updated on: Oct 25, 2021 | 11:13 AM

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್​ನ (T20 World Cup) ಮೊದಲ ಪಂದ್ಯದಲ್ಲೇ ಪಾಕಿಸ್ತಾನ (Pakistan T20 World cup) ಏಕಪಕ್ಷೀಯವಾಗಿ ಸಾಗಿ ಇದೇ ಮೊದಲ ಬಾರಿಗೆ ಭಾರತ ವಿರುದ್ಧ 10 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತು. ವಿಶ್ವಕಪ್ ಕ್ರೀಡಾಕೂಟದಲ್ಲಿ ಟೀಮ್ ಇಂಡಿಯಾ (Team India) ವಿರುದ್ಧ ಕೆಟ್ಟ ದಾಖಲೆ ಹೊಂದಿದ್ದ ಪಾಕಿಸ್ತಾನ ಈ ಗೆಲುವಿನ ಮೂಲಕ ಐತಿಹಾಸಿಕ ಸಾಧನೆ ಮಾಡಿತು. 1992 ರಿಂದ ನಿರಂತರವಾಗಿ 12 ಸೋಲುಗಳನ್ನು ಅನುಭವಿಸುತ್ತಾ ಬರುತ್ತಿದ್ದ ಪಾಕಿಸ್ತಾನ ನಿನ್ನೆ ಗೆಲುವು ರುಚಿ ಕಂಡಿದೆ. ಕಳೆದ 29 ವರ್ಷಗಳಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ (India vs Pakistan) ಸೋಲು ಕಾಣುವಂತೆ ಮಾಡಿತು. ನಾಯಕ ಬಾಬರ್ ಅಜಾಮ್ (Babar Azam) ಹಾಗೂ ಮೊಹಮ್ಮದ್ ರಿಝ್ವಾನ್ (Mohammad Rizwan) ಅವರ ಬೊಂಬಾಟ್ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು.

ಪಂದ್ಯ ಮುಗಿದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಮುಖವಾಗಿ ಭಾರತ ವಿರುದ್ಧ ಗೆಲ್ಲಲು ಮಾಡಿದ ಮಾಸ್ಟರ್ ಪ್ಲಾನ್ ಬಹಿರಂಗ ಪಡಿಸಿದ್ದಾರೆ. ‘ನಾವು ಭಾರತ ಓಪನರ್​ಗಳನ್ನು ಆರಂಭದಲ್ಲೇ ಔಟ್ ಮಾಡಿದ್ದು ತುಂಬಾನೆ ಸಹಕಾರಿ ಆಯಿತು. ಭಾರತ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸ ಬೇಕೆಂದು ನಾವು ಆಡಲಿಲ್ಲ. ಆ ಭಾವನೆಯನ್ನು ನಮ್ಮ ಮನಸ್ಸಿನಿಂದ ತೆಗೆದು ಹಾಕಿದ್ದೆವು’ ಎಂದು ಬಾಬರ್ ಹೇಳಿದ್ದಾರೆ.

‘ಈ ಗೆಲುವು ತಂಡದ ಎಲ್ಲ ಆಟಗಾರರ ಪರಿಶ್ರಮದಿಂದ ಸಿಕ್ಕಿದೆ. ಆರಂಭದಲ್ಲೇ ನಾವು ಎದುರಾಳಿಯ ವಿಕೆಟ್ ಕೀಳಿದ್ದು ಉಪಯೋಗವಾಯಿತು. ನಮ್ಮ ಸ್ಪಿನ್ನರ್​ಗಳು ಪ್ರಮುಖವಾಗಿ ಪವರ್ ಪ್ಲೇನಲ್ಲಿ ಅದ್ಭುತ ಪ್ರದರ್ಶನ ತೋರಿದರು. ಇದು ನಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ನಾವು ಅಂದುಕೊಂಡ ಯೋಜನೆಯನ್ನು ಜಾರಿಗೆ ತಂದೆವು ಮತ್ತು ಅದು ಫಲಿತಾಂಶವನ್ನು ತಂದುಕೊಟ್ಟಿತು.’

‘ನಮ್ಮ ತಂಡದ ಓಪನರ್​​ಗಳಾದ ನಾನು ಮತ್ತು ರಿಝ್ವಾನ್ ಜೊತೆಯಾಟ ಆಡಲು ನಿರ್ಧಾರ ಮಾಡಿದೆವು. ಯಾಕಂದ್ರೆ ವಿಕೆಟ್ ತುಂಬಾನೆ ಚೆನ್ನಾಗಿತ್ತು. ಹೀಗಾಗಿ ಕೊನೆಯ ವರೆಗೆ ಬ್ಯಾಟಿಂಗ್ ಮಾಡುವ ಬಗ್ಗೆ ಮಾತನಾಡಿಕೊಂಡೆವು. ಅದರಂತೆ ನಾವು ಮಾಡಿದೆವು ಕೂಡ. ನಾವೀಗ ಭಾರತವನ್ನು ಸೋಲಿಸಿದ ಮಾತ್ರಕ್ಕೆ ಇದು ನಮಗೆ ಸುಲಭವಾಗುವುದಿಲ್ಲ. ಆತ್ಮವಿಶ್ವಾಸ ಹೆಚ್ಚಿದೆ ನಿಜ. ಆದರೆ, ಇದೊಂದು ಪಂದ್ಯ ನಿರ್ಧಾರವಾಗುದಿಲ್ಲ. ಟೂರ್ನಿಯಲ್ಲಿ ಇನ್ನೂ ತುಂಬಾ ಮುನ್ನಡೆ ಸಾಧಿಸುವುದಿದೆ’ ಎಂದು ಹೇಳಿದ್ದಾರೆ.

ಇನ್ನು ತಂಡ ಯಾವರೀತಿ ಸಿದ್ಧತೆ ಮಾಡಿತು ಎಂಬ ಬಗ್ಗೆ ಮಾತನಾಡಿದ ಬಾಬರ್, ‘ನಾವು ಈ ಪಂದ್ಯಕ್ಕೆ ಅತ್ಯುತ್ತಮ ಸಿದ್ಧತೆ ನಡೆಸಿದ್ದೆವು. ಹಾಗಂತ ಭಾರತ ವಿರುದ್ಧ ಗೆದ್ದು ಇತಿಹಾಸ ನಿರ್ಮಿಸ ಬೇಕೆಂದು ನಾವು ಆಡಲಿಲ್ಲ. ಆ ಭಾವನೆಯನ್ನು ನಮ್ಮ ಮನಸ್ಸಿನಿಂದ ತೆಗೆದು ಹಾಕಿ ಕಣಕ್ಕಿಳಿದೆವು. ನೆಟ್​ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೆವು. ವಾರ್ಮ್​- ಅಪ್ ಪಂದ್ಯ ಉಪಯೋಗವಾಯಿತು’ ಎಂದು ಬಾಬರ್ ಪಂದ್ಯ ಮುಗಿದ ಬಳಿಕ ಮಾತನಾಡಿದರು.

Hardik Pandya: ಕೊಹ್ಲಿ ಪಡೆಗೆ ಶಾಕ್ ಮೇಲೆ ಶಾಕ್: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ

India vs Pakistan, T20 World Cup: ಪಾಕಿಸ್ತಾನ ವಿರುದ್ಧ ಭಾರತದ ಸೋಲಿಗೆ ಕಾರಣವಾಗಿದ್ದು ಇದೇ ತಪ್ಪುಗಳು ನೋಡಿ

Virat Kohli: ಪಾಕಿಸ್ತಾನ ಪತ್ರಕರ್ತನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ಖಡಕ್ ಪ್ರಶ್ನೆಗೆ ನಾಯಕ ಉತ್ತರ ಹೇಗಿತ್ತು ಗೊತ್ತಾ?

(Babar Azam Pakistan skipper Big Statement after win against India in T20 World Cup 2021)

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು