ಗೆದ್ದ ಪಾಕಿಸ್ತಾನದ ಜತೆ ಟೀಂ ಇಂಡಿಯಾ ಮೆಂಟರ್ ಧೋನಿ ಚರ್ಚೆ; ಫೋಟೋ ವೈರಲ್
ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಮೆಂಟರ್ ಎಂ.ಎಸ್. ಧೋನಿ ಪಾಕಿಸ್ತಾನದ ಆಟಗಾರರ ಜತೆ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ವಿರುದ್ಧ ಗೆದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಪಟಾಕಿ ಸಿಡಿಸಿ ಈ ಗೆಲುವನ್ನು ಸಂಭ್ರಿಮಿಸಲಾಗುತ್ತಿದೆ. ಮತ್ತೊಂದು ಕಡೆಗಳಲ್ಲಿ ಟೀಂ ಇಂಡಿಯಾವನ್ನು ಹೀಯಾಳಿಸುವ ಕೆಲಸವೂ ನಡೆದಿದೆ. ಆದರೆ, ಟೀಂ ಇಂಡಿಯಾ ಆಟಗಾರರು ಮಾತ್ರ ನಿಜವಾದ ಕ್ರೀಡಾಸ್ಫೂರ್ತಿ ಮೆರೆಯುತ್ತಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್ನಲ್ಲೇ ಸೋಲು ಉಂಟಾಗಿತ್ತು. ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಎಲ್ಬಿಗೆ ಔಟ್ ಆದರು. ನಂತರ ಒಂದಾದಮೇಲೆ ಒಂದು ವಿಕೆಟ್ಗಳು ಪತನವಾಗಲು ಶುರುವಾದವು. ಆದರೆ, ಕೊಹ್ಲಿ ಒಂದು ಕಡೆ ನಿಂತು ರನ್ ಪೇರಿಸುತ್ತಿದ್ದರು. ಅಂತಿಮವಾಗಿ ಭಾರತ 151 ರನ್ ಪೇರಿಸಲಷ್ಟೇ ಶಕ್ತವಾಯಿತು. ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿತು. ಬಾಬರ್ ಅಜಾಮ್ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಅಜಾಮ್ 40 ಎಸೆತಗಳಲ್ಲಿ (4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.) ಅರ್ಧಶತಕಗಳನ್ನು ಪೂರೈಸಿದರು.
ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಮೆಂಟರ್ ಎಂ.ಎಸ್. ಧೋನಿ ಪಾಕಿಸ್ತಾನದ ಆಟಗಾರರ ಜತೆ ಮಾತುಕತೆ ನಡೆಸಿದ್ದಾರೆ. ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಇನ್ನು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬಾಬರ್ ಹಾಗೂ ರಿಝ್ವಾನ್ ಅವರ ಆಟವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
It’s not only your batting who makes you the King ❤️#ViratKohli pic.twitter.com/uutbWIZ5D5
— Hammad ?? (@DaBiryaniGuy) October 24, 2021
Dhoni interacting with Pakistan Players.#TeamIndia | #INDvPAK | @MSDhoni pic.twitter.com/YkOZ3u38sQ
— Dhoni Army TN™ (@DhoniArmyTN) October 24, 2021
The beauty of sports ❤#INDvPAK pic.twitter.com/uXFWOQDfQE
— TC (@TrollCinemaOff) October 24, 2021
ಇದನ್ನೂ ಓದಿ: ಪಂದ್ಯ ಸೋತರೂ ಪಾಕಿಸ್ತಾನ ಆಟಗಾರರ ಬೆನ್ನು ತಟ್ಟಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
KL Rahul: ನೋಬಾಲ್ಗೆ ಔಟಾದ ಕೆ.ಎಲ್. ರಾಹುಲ್; ಅಂಪೈರ್ ತಪ್ಪಿನಿಂದ ಭಾರತಕ್ಕೆ ದೊಡ್ಡ ಮೋಸ
Published On - 9:59 am, Mon, 25 October 21