ಪಂದ್ಯ ಸೋತರೂ ಪಾಕಿಸ್ತಾನ ಆಟಗಾರರ ಬೆನ್ನು ತಟ್ಟಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್
ಪಂದ್ಯ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು ಬಾಬರ್ ಹಾಗೂ ರಿಝ್ವಾನ್ ಅವರ ಆಟವನ್ನು ಶ್ಲಾಘಿಸಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನೇಕರಿಗೆ ಇಷ್ಟವಾಗುತ್ತಾರೆ. ವಿಶ್ವಾದ್ಯಂತ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಆಡುವ ಶೈಲಿ ಹಾಗೂ ಅವರ ಕ್ರೀಡಾಸ್ಫೂರ್ತಿ ಇದಕ್ಕೆ ಕಾರಣ. ವಿರಾಟ್ ಸಾಕಷ್ಟು ಕಡೆಗಳಲ್ಲಿ ಕ್ರೀಡಾಸ್ಫೂರ್ತಿ ಮೆರೆದು ಮಾದರಿ ಆಗಿದ್ದಾರೆ. ಇದು ಭಾರತ vs ಪಾಕಿಸ್ತಾನ ಪದ್ಯದಲ್ಲೂ ಮುಂದುವರಿದಿದೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್ನಲ್ಲೇ ಸಿಡಿಲು ಬಂದು ಅಪ್ಪಿಳಿಸಿತು. ರೋಹಿತ್ ಶರ್ಮಾ ತಾವು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ನಂತರ ಒಂದಾದಮೇಲೆ ಒಂದು ವಿಕೆಟ್ಗಳು ಪತನವಾಗಲು ಶುರುವಾದವು. ಆದರೆ, ಕೊಹ್ಲಿ ಒಂದು ಕಡೆ ನಿಂತು ರನ್ ಪೇರಿಸುತ್ತಿದ್ದರು. ಅಂತಿಮವಾಗಿ ಭಾರತ 151 ರನ್ ಪೇರಿಸಲಷ್ಟೇ ಶಕ್ತವಾಯಿತು. ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿತು. ಬಾಬರ್ ಅಜಾಮ್ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಅಜಾಮ್ 40 ಎಸೆತಗಳಲ್ಲಿ (4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.) ಅರ್ಧಶತಕಗಳನ್ನು ಪೂರೈಸಿದರು.
ಪಂದ್ಯ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು ಬಾಬರ್ ಹಾಗೂ ರಿಝ್ವಾನ್ ಅವರ ಆಟವನ್ನು ಶ್ಲಾಘಿಸಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
This. #INDvPAK #ViratKohli pic.twitter.com/tnjAYNO0BC
— Tavleen Singh Aroor (@Tavysingh) October 24, 2021
If grace has a face—#ViratKohli pic.twitter.com/7D2oxqOzKZ
— Rauf Klasra (@KlasraRauf) October 24, 2021
Picture of the day. Best picture on Internet right now.#PakvsIndia #ViratKohli #BabarAzam pic.twitter.com/WvVGnoLQAm
— Waqas Akhter ? (@waqasakhter077) October 24, 2021
In sports there is no place for enmity or hate. Sports must promote brotherhood and mutual love. #ViratKohli sets great example. #INDvPAK pic.twitter.com/gi7F4j87Rv
— Dr Gaurav Garg (@DrGauravGarg4) October 24, 2021
ಇದನ್ನೂ ಓದಿ: KL Rahul: ನೋಬಾಲ್ಗೆ ಔಟಾದ ಕೆ.ಎಲ್. ರಾಹುಲ್; ಅಂಪೈರ್ ತಪ್ಪಿನಿಂದ ಭಾರತಕ್ಕೆ ದೊಡ್ಡ ಮೋಸ
Virat Kohli: ಟೀಂ ಇಂಡಿಯಾ ಸೋತ ಬೆನ್ನಲ್ಲೇ ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸಿದ ಪಾಕಿಸ್ತಾನ
Published On - 9:31 am, Mon, 25 October 21