Virat Kohli: ಟೀಂ ಇಂಡಿಯಾ ಸೋತ ಬೆನ್ನಲ್ಲೇ ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸಿದ ಪಾಕಿಸ್ತಾನ

India vs Pakistan: 29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋತಿರಲಿಲ್ಲ. ಆದರೆ, ಈ ಬಾರಿ ಟೀಂ ಇಂಡಿಯಾ ಸೋಲು ಕಂಡಿದೆ.

Virat Kohli: ಟೀಂ ಇಂಡಿಯಾ ಸೋತ ಬೆನ್ನಲ್ಲೇ  ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸಿದ ಪಾಕಿಸ್ತಾನ
ವಿರಾಟ್​ ಕೊಹ್ಲಿ

ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೋತಿದೆ. ಒಂದೂ ವಿಕೆಟ್​ ಕಳೆದುಕೊಳ್ಳದೆ ಭಾರತ ನೀಡಿದ್ದ 152 ರನ್​ಗಳ ಗುರಿಯನ್ನು ಪಾಕ್ ಸುಲಭವಾಗಿ ತಲುಪಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನು, ಭಾರತ ಸೋತ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಯನ್ನು ಹೀನಾಯವಾಗಿ ಹೀಯಾಳಿಸುವ ಕೆಲಸ ನಡೆದಿದೆ. ಕೀಳು ಮಟ್ಟದಲ್ಲಿ ಚಿತ್ರಗಳನ್ನು ಎಡಿಟ್​ ಮಾಡಿ ಪೋಸ್ಟ್​ ಮಾಡಲಾಗುತ್ತಿದೆ ಇದಕ್ಕೆ ಭಾರತೀಯರು ಕಠಿಣವಾಗಿಯೇ ತಿರುಗೇಟು ನೀಡಿದ್ದಾರೆ.

29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋತಿರಲಿಲ್ಲ. ಆದರೆ, ಈ ಬಾರಿ ಟೀಂ ಇಂಡಿಯಾ ಸೋಲು ಕಂಡಿದೆ. ಬಾಬರ್ ಆಜಮ್ ಹಾಗೂ ಮೊಹಮ್ಮದ್ ರಿಝ್ವಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಸೂಪರ್-12ರ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲು ಗೆಲುವು ಕಂಡಿದೆ.

ಭಾರತ ಗೆದ್ದ ಬೆನ್ನಲ್ಲೇ ಪಾಕಿಸ್ತಾನಿಗರು ಟ್ವಿಟರ್​ನಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿಯನ್ನು ಟೀಕಿಸುತ್ತಿದ್ದಾರೆ. ನಾನಾ ರೀತಿಯ ಟ್ವೀಟ್​ಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಭಾರತೀಯರು ಕೂಡ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: IND vs PAK Highlights, T20 World Cup 2021: ಭಾರತದ ಬ್ಯಾಟಿಂಗ್ ವೈಫಲ್ಯ; ಪಾಕ್​ಗೆ 10 ವಿಕೆಟ್ ಜಯ

 India vs Pakistan: ಸೋಲಿನೊಂದಿಗೆ ಟಿ20 ವಿಶ್ವಕಪ್ ಯಾತ್ರೆ ಆರಂಭಿಸಿದ ಭಾರತ: ಮುಂದಿದೆ ಇನ್ನಷ್ಟು ಕಠಿಣ ಹಾದಿ

Click on your DTH Provider to Add TV9 Kannada