AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Pakistan: ಸೋಲಿನೊಂದಿಗೆ ಟಿ20 ವಿಶ್ವಕಪ್ ಯಾತ್ರೆ ಆರಂಭಿಸಿದ ಭಾರತ: ಮುಂದಿದೆ ಇನ್ನಷ್ಟು ಕಠಿಣ ಹಾದಿ

Pakistan crushed India, T20 World Cup: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್​ನಲ್ಲೇ ಸಿಡಿಲು ಬಂದು ಅಪ್ಪಿಳಿಸಿತು. ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಕೆ. ಎಲ್ ರಾಹುಲ್ 8 ಎಸೆತಗಳಲ್ಲಿ 3 ರನ್​ಗೆ ಬೌಲ್ಡ್ ಆದರು.

India vs Pakistan: ಸೋಲಿನೊಂದಿಗೆ ಟಿ20 ವಿಶ್ವಕಪ್ ಯಾತ್ರೆ ಆರಂಭಿಸಿದ ಭಾರತ: ಮುಂದಿದೆ ಇನ್ನಷ್ಟು ಕಠಿಣ ಹಾದಿ
India vs Pakistan
TV9 Web
| Edited By: |

Updated on:Oct 25, 2021 | 8:39 AM

Share

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಇಡೀ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದುವಾಗಿತ್ತು. ಗೆಲ್ಲುವ ಫೆವರಿಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಪ್ರಚಂಡ ಪ್ರದರ್ಶನ ನೀಡಿದ ಪಾಕಿಸ್ತಾನ ಕೊನೆಗೂ ವಿಶ್ವಕಪ್‌ ಇತಿಹಾಸದಲ್ಲಿ ಭಾರತದ ಎದುರು ಸೋಲಿನ ಸರಪಣಿಯನ್ನು ಕಡಿದುಕೊಂಡಿತು. ಈ ಮೂಲಕ 29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಎದುರು ಅಜೇಯ ಗೆಲುವಿನ ಸಾಧನೆ ಮಾಡಿದ್ದ ಭಾರತದ ಓಟಕ್ಕೆ ಕೊನೆಗೂ ಬ್ರೇಕ್ ಬಿದ್ದಿತು. ಬಾಬರ್ ಅಜಾಮ್ (Babar Azam) ಹಾಗೂ ಮೊಹಮ್ಮದ್ ರಿಝ್ವಾನ್ (Mohammad Rizwan) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಸೂಪರ್-12ರ ಮೊದಲ ಪಂದ್ಯದಲ್ಲಿ 10 ವಿಕೆಟ್​ಗಳ ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಟಿ20 ವಿಶ್ವಕಪ್​ನಲ್ಲಿ ಭಾರತದ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್​ನಲ್ಲೇ ಸಿಡಿಲು ಬಂದು ಅಪ್ಪಿಳಿಸಿತು. ರೋಹಿತ್ ಶರ್ಮಾ ತಾವು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಕೆ. ಎಲ್ ರಾಹುಲ್ 8 ಎಸೆತಗಳಲ್ಲಿ 3 ರನ್​ಗೆ ಬೌಲ್ಡ್ ಆದರು. ತನ್ನ ಕಳಪೆ ಆಟವನ್ನು ಮುಂದುವರೆಸಿದ ಸೂರ್ಯಕುಮರ್ ಯಾದವ್ 11 ರನ್​ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಭಾರತ 31 ರನ್​ಗೆ 3 ವಿಕೆಟ್ ಕಳೆದುಕೊಂಡಿತು.

ಆದರೆ, ಇತ್ತ ನಾಯಕ ವಿರಾಟ್ ಕೊಹ್ಲಿ ಒಳ್ಳೆ ಟಚ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಭಾರತಕ್ಕೆ ಚೇತರಿಕೆಯ ಭರವಸೆ ಇತ್ತು. ಇವರಿಗೆ ರಿಷಭ್‌ ಪಂತ್‌ ಬೆಂಬಲವಿತ್ತರು. 10 ಓವರ್‌ ಮುಕ್ತಾಯಕ್ಕೆ ಹೆಚ್ಚಿನ ಆಘಾತಕ್ಕೆ ಸಿಲುಕದ ಭಾರತ ತನ್ನ ಮೊತ್ತವನ್ನು 60 ರನ್ನಿಗೆ ಏರಿಸಿತು. ಪಂತ್ ತಮ್ಮದೆ ಶೈಲಿಯ ಆಕ್ರಮಣ ಆಟಕ್ಕೆ ಕೈ ಹಾಕಿ ಹಸನ್‌ ಅಲಿ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿ ಪಂದ್ಯದ ಕಾವು ಏರಿಸಿದರು. ಈ ಎರಡೂ ಸಿಕ್ಸರ್‌ಗಳನ್ನು ಒಂದೇ ಕೈಯಲ್ಲಿ ಬಾರಿಸುವ ಮೂಲಕ ಪಂತ್‌ ಬ್ಯಾಟಿಂಗ್‌ ಆಕರ್ಷಣೆ ಹೆಚ್ಚಿಸಿದರು.

ಈ ಜೋಡಿ ತಂಡದ ಮೊತ್ತವನ್ನು ಇನ್ನಷ್ಟಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಶದಾಬ್‌ ಖಾನ್‌ ಓವರ್‌ನಲ್ಲೇ ಪಂತ್ ವಿಕೆಟ್‌ ಕೈಚೆಲ್ಲಿದರು. ಭರ್ಜರಿ ಹೊಡೆತಕ್ಕೆ ಮುಂದಾದಾಗ ಚೆಂಡು ಆಗಸಕ್ಕೆ ಚಿಮ್ಮಿತು. ಶದಾಬ್‌ ರಿಟರ್ನ್ ಕ್ಯಾಚ್‌ ಪಡೆದರು. ಪಂತ್‌ ಕೊಡುಗೆ 30 ಎಸೆತಗಳಿಂದ 39 ರನ್‌ (2 ಬೌಂಡರಿ, 2 ಸಿಕ್ಸರ್‌). ಈ ಜೋಡಿ 53 ರನ್​ಗಳ ಕಾಣಿಕೆ ನೀಡಿತು.

ಡೆತ್‌ ಓವರ್‌ ವೇಳೆ ಕ್ರೀಸಿನಲ್ಲಿದ್ದ ಜೋಡಿ ಕೊಹ್ಲಿ-ಜಡೇಜ. 45 ಎಸೆತಗಳಿಂದ ಕಪ್ತಾನನ ಅರ್ಧ ಶತಕ ಪೂರ್ತಿಗೊಂಡಿತು. ಆದರೆ, 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ಕೊಹ್ಲಿ 57 ರನ್​ಗೆ ಬ್ಯಾಟ್ ಕೆಳಗಿಟ್ಟರೆ, ಜಡೇಜಾ ಆಟ 13 ರನ್​ಗೆ ಅಂತ್ಯವಾಯಿತು. ಹಾರ್ದಿಕ್ ಪಾಂಡ್ಯ(11) ಮತ್ತೆ ವಿಫಲರಾದರು. ಅಂತಿಮವಾಗಿ ಭಾರತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿತು.

ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿದೆ. ಬಾಬರ್ ಅಜಾಮ್ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಆಝಂ 40 ಎಸೆತಗಳಲ್ಲಿ(4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.) ಅರ್ಧಶತಕಗಳನ್ನು ಪೂರೈಸಿದರು.

KL Rahul: ಕೆಎಲ್ ರಾಹುಲ್ ಐಪಿಎಲ್​ನಲ್ಲಿ ಹಿಟ್: ಟೀಮ್ ಇಂಡಿಯಾ ಪರ ಫ್ಲಾಪ್

(Pakistan crushed India by 10 wickets to register their first win over their arch-rivals in Twenty20 World Cup)

Published On - 7:18 am, Mon, 25 October 21

Follow Us
Web contact
Web contact

TV9 Kannada

Read More
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು