AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಭಾವನೆಯ ಜೊತೆ ಆಡುವರು..

Horoscope Today 20 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಗುರುವಾರದಂದು ಖಿನ್ನತೆಯಿಂದ ಆಪತ್ತು, ಸಮಾಲೋಚನೆ, ವ್ರತಭಂಗ, ನಿರ್ಮಾಣಕ್ಕೆ ಕುತ್ತು, ಸಂಶಯಕ್ಕೆ ಪುಷ್ಟಿ ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಭಾವನೆಯ ಜೊತೆ ಆಡುವರು..
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Aug 20, 2026 | 12:26 AM

Share

ಮೇಷ ರಾಶಿ :

ಅತಿಯಾದ ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು. ಹೇಳಾಬಾರದೆಂದು ಮುಚ್ಚಿಟ್ಟಿದ್ದನ್ನು ಸಂಗಾತಿಗೆ ತಿಳಿಸುವಿರಿ. ಉದ್ಯೋಗ ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಹಗುರವಾದಷ್ಟು ಬೆಲೆ ಹೆಚ್ಚು ಎಂದು ಮನವರಿಕೆಯಾಗಬಹುದು. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಿ.

ವೃಷಭ ರಾಶಿ:

ಎದುರು ಮಾತನಾಡುವುದು ನಿಮಗೆ ಇಂದು ಸರಿ‌ಕಾಣದು. ವ್ಯರ್ಥವಾದ ಕಾಲಹರಣದ ಬದಲು ಏನಾದರೂ ಯೋಗ್ಯವಾದುದನ್ನು ಮಾಡಬಹುದು. ಸೋಮಾರಿತನ ಅಧಿಕವಾಗಿ ಇರಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಬೇಕಾಗುವುದು. ಸಮಯದ ವ್ಯತ್ಯಾಸದಿಂದ ಇಂದಿನ ಜೀವನ ಅಸ್ತವ್ಯಸ್ತವಾಗುತ್ತದೆ. ಕೆಲವು ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ.

ಮಿಥುನ ರಾಶಿ:

ಹೊಸ ಸುದ್ದಿಯು ನಿರೀಕ್ಷೆಯಲ್ಲಿ ನೀವು ಇರುವುದು ಬೇಡ. ಎಲ್ಲರ‌ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಭೌತಿಕ ಸುಖಗಳು ಹೆಚ್ಚಾಗುತ್ತವೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಅಲಭ್ಯ ವಸ್ತುವಿಗೆ ದುಃಖಿಸುವ ಅವಶ್ಯಕತೆ ಇಲ್ಲ. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.

ಕರ್ಕಾಟಕ ರಾಶಿ:

ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು. ನಿಮ್ಮ ಪರಿಶ್ರಮದ್ದು ಮಾತ್ರ ನಿಮಗೆ ಸಿಗುವುದು. ಸಮಾಧಾನದ ಕ್ಷಣಗಳು ಎರಡೂ ಇರುತ್ತವೆ. ಇಂದು ನಿಮ್ಮ ನಿರ್ಧಾರಗಳಿಗೆ ತಂದೆಯ ಸಹಕಾರ ಸಿಗಲಿದೆ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲಿ ನಿರತತೆ ಹೆಚ್ಚಾಗಬಹುದು. ನಿಮ್ಮ ಮಾತುಗಳು ಇತರರಿಗೆ ಸುಳ್ಳೆನಿಸುವುದು. ಕೆಲವು ವಿಚಾರಗಳು ಬಹಳ ವಿಳಂಬವಾಗಿ ನಿಮ್ಮ ಗಮನಕ್ಕೆ ಬರಬಹುದು. ಯಾರನ್ನೂ ನಿಮ್ಮವರನ್ನಾಗಿ ಮನಸ್ಸಿನಿಂದ ಭಾವಿಸಲಾರಿರಿ.

ಸಿಂಹ ರಾಶಿ:

ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಹೊರೆ ಹೆಚ್ಚಾಗಲಿದೆ. ನೀವು ಬೌದ್ಧಿಕ ಕೆಲಸದಿಂದ ಹಣವನ್ನು ಪಡೆಯುತ್ತೀರಿ. ಬಟ್ಟೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ವ್ಯಾವಹಾರಿಕವಸದ ಅಪವಾದಗಳು ಬರಬಹುದು.

ಕನ್ಯಾ ರಾಶಿ:

ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ‌ ಮನಸ್ಸಿನಿಂದ ಎದುರಿಸುವಿರಿ. ವಾಹನ ಸವಾರಿ ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ನಿಮ್ಮ ಒಳ ಮನಸ್ಸು ಹೇಳಿದಂತೆ ಕೇಳಿ.‌ ನೆಮ್ಮದಿಗೆ ಅದೇ ದಾರಿ.

ತುಲಾ ರಾಶಿ:

ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳವ ಸಾಧ್ಯತೆ ಇದೆ. ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಪೂರ್ಣ ವಿಶ್ವಾಸ ಇರುತ್ತದೆ. ಮನಸ್ಸು ವಿಚಲಿತವಾಗಬಹುದು. ಪೋಷಕರಿಗೆ ನೀವು ಸಹಾಯವನ್ನು ಮಾಡಲು ಬಯಸುವಿರಿ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ.

ವೃಶ್ಚಿಕ ರಾಶಿ:

ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಸ್ವತಂತ್ರದ ಕಾರ್ಯದಿಂದ ನಿಮಗೆ ಶ್ರೇಯಸ್ಸು ಸಿಗುವುದು. ಕುಟುಂಬದಲ್ಲಿ ಪರಸ್ಪರ ವಿವಾದಗಳ ಸಂದರ್ಭಗಳು ಉಂಟಾಗಬಹುದು. ಉದ್ಯೋಗದಲ್ಲಿ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಸಮಸ್ಯೆಗಳು ಮುಂದುವರಿಯುತ್ತವೆ. ದೇವತಾ ಕಾರ್ಯಕ್ಕೆ ಬೇಕಾದ ತಯಾರಿಯಲ್ಲಿ ಇರುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ.

ಧನು ರಾಶಿ:

ಉನ್ನತ ಶಿಕ್ಷಣದಲ್ಲಿ ಕೆಲವು ಕಟ್ಟುಪಾಡುಗಳಿಗೆ ತಯಾರಿರಬೇಕಾದೀತು. ನಿಮ್ಮ ಉದ್ಯಮಕ್ಷೇತ್ರವನ್ನು ವಿಸ್ತರಿಸಲು ಇಷ್ಟಪಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡುವಿರಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಆಸ್ತಿ ಆದಾಯದ ಮೂಲವಾಗಬಹುದು. ಸ್ವಯಂ ನಿಯಂತ್ರಣದಲ್ಲಿರಿ. ದೇವಾಲಯದಲ್ಲಿ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಸರ್ಜನಶೀಲ ವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ.

ಇದನ್ನೂ ಓದಿ: ಬುಧ ಸಂಚಾರ ಫಲ: ಈ ರಾಶಿಯವರಿಗೆ ಒಲಿಯಲಿದೆ ದಿಢೀರ್ ಧನಯೋಗ ಹಾಗೂ ವೃತ್ತಿ ಪ್ರಗತಿ

ಮಕರ ರಾಶಿ:

ನಿಮಗೆ ಸಿಗುವುದಿಲ್ಲ ಎಂದುಕೊಂಡ ಸ್ಥಾನವು ನಿಮಗೆ ಸಿಗಬಹುದು. ಅದೃಷ್ಟ ನಿಮ್ಮ‌ ಕಡೆಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ವಿದೇಶಕ್ಕೆ ಹೋಗುವ ಸಂಭವವಿದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅನಗತ್ಯ ಚರ್ಚೆಗಳನ್ನು ತಪ್ಪಿಸಲು ಪ್ರಯತ್ನಿಸಿ. ನಿಮ್ಮ ಬಗ್ಗೆ ಸುಳ್ಳು ಪ್ರಚಾರವನ್ನೂ ಮಾಡಬಹುದು. ಕೋಪದಿಂದ ಕೆಲವನ್ನು ಕಳೆದುಕೊಳ್ಳಬೇಕಾಗಬಹುದು.

ಕುಂಭ ರಾಶಿ:

ಅನೇಕ ದಿನಗಳಿಂದ ಮಾಡುತ್ತಿದ್ದ ಕೆಲಸವನ್ನು ಇಂದು ಬಹಳ ವೇಗವಾಗಿ ಮುಗಿಸಿ ನಿರಾಳವಾಗುವಿರಿ. ಕೋಪದ ಕ್ಷಣಗಳು ಮತ್ತು ಸಮಾಧಾನದ ಕ್ಷಣಗಳು ಎರಡು ಇರುತ್ತವೆ. ವಾಹನ ಆನಂದದ ಲಾಭವನ್ನು ಪಡೆಯುತ್ತೀರಿ. ಸ್ನೇಹಿತರ ಬೆಂಬಲ ಇರುತ್ತದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ನಿರ್ಮೋಹವೇ ನಿಮಗೆ ಸಂಪತ್ತನ್ನು ದೊರಕಿಸಿಕೊಡಬಲ್ಲದು. ಮಿಶ್ರಫಲವನ್ನು ಪಡೆಯುವಿರಿ.

ಮೀನ ರಾಶಿ:

ಇಂದಿನ ವ್ಯಾಪರವು ಸ್ವಲ್ಪಮಟ್ಟಿಗೆ ಸುಧಾರಿಸುವುದು. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಿದ್ಧಾಂತದಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಇಂದು ನಿಮ್ಮ ವಸ್ತುವು ಬದಲಾವಣೆಯಾಗುವ ಸಾಧ್ಯತೆ ಇದೆ. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ದಾಂಪತ್ಯವನ್ನು ಸುಖವಾಗಿಡಲು ಉಡುಗೊರೆಯನ್ನು ಕೊಡಬೇಕಾಗಬಹದು. ದಿನದಲ್ಲಿ ಶುಭವು ಹೆಚ್ಚಿರಲಿದೆ. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಶುಕ್ಲ, ಕರಣ : ತೈತಿಲ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:30, ಯಮಗಂಡ ಕಾಲ 06:09 – 07:42, ಗುಳಿಕ ಕಾಲ 09:16 – 10:49

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 am, Thu, 20 August 26

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?