India vs Pakistan, T20 World Cup: ಪಾಕಿಸ್ತಾನ ವಿರುದ್ಧ ಭಾರತದ ಸೋಲಿಗೆ ಕಾರಣವಾಗಿದ್ದು ಇದೇ ತಪ್ಪುಗಳು ನೋಡಿ

Reasons India Lost Match to Pakistan: ವಿರಾಟ್ ಕೊಹ್ಲಿ ಪಡೆಯು ಮಾಡಿದ ಈ ಐದು ತಪ್ಪುಗಳು, ಪಾಕಿಸ್ತಾನ ಆಟಗಾರರಿಗೆ ಇತಿಹಾಸ ಬದಲಿಸಲು ಅವಕಾಶ ಮಾಡಿಕೊಟ್ಟಿದೆ.

India vs Pakistan, T20 World Cup: ಪಾಕಿಸ್ತಾನ ವಿರುದ್ಧ ಭಾರತದ ಸೋಲಿಗೆ ಕಾರಣವಾಗಿದ್ದು ಇದೇ ತಪ್ಪುಗಳು ನೋಡಿ
ಟೀಂ ಇಂಡಿಯಾ
Follow us
TV9 Web
| Updated By: Vinay Bhat

Updated on: Oct 25, 2021 | 9:00 AM

ಐಸಿಸಿ ವಿಶ್ವಕಪ್ (T20 World Cup 2021) ಟೂರ್ನಿಯ ಇತಿಹಾಸದಲ್ಲಿ ಒಮ್ಮೆಯೂ ಭಾರತ, ಬದ್ಧ ವೈರಿ ಪಾಕಿಸ್ತಾನ (India vs Pakistan) ವಿರುದ್ಧ ತಲೆ ಬಾಗಿರಲಿಲ್ಲ. ಪಾಕಿಸ್ತಾನ ವಿರುದ್ಧದ ಹೈವೊಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋಲುತ್ತೆ ಅಂತಾ, ಯಾರೋಬ್ಬರು ನಿರೀಕ್ಷಿಸಿರಲಿಲ್ಲ. ಸ್ವತಃ ಪಾಕ್ ಕ್ರಿಕೆಟಿಗರೇ ಇಂತಹದ್ದೊಂದು ಅದ್ದೂರಿ ವಿಜಯೋತ್ಸವ ಆಚರಿಸುತ್ತೇವೆ ಎಂಬ ಕನಸು ಕಂಡಿರಲಿಲ್ಲವೇನೊ. ಎದುರಾಳಿಯ ಒಂದು ವಿಕೆಟ್ ಕೂಡ ಕೀಳಲು ಸಾಧ್ಯವಾಗದ ಕೊಹ್ಲಿ ಪಡೆ (Virat Kohli) ಅಷ್ಟರ ಮಟ್ಟಿಗೆ ನೀರಸ ಪ್ರದರ್ಶನ ತೋರಿದೆ. ಇದರಿಂದ ಭಾರತದ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಿದೆ. ವಿರಾಟ್ ಕೊಹ್ಲಿ ಪಡೆಯು ಮಾಡಿದ ಈ ಐದು ತಪ್ಪುಗಳು, ಪಾಕ್ ಆಟಗಾರರಿಗೆ ಇತಿಹಾಸ ಬದಲಿಸಲು ಅವಕಾಶ ಮಾಡಿಕೊಟ್ಟಿದೆ.

ಟಾಸ್ ಸೋತ ಭಾರತ: ಹೌದು, ದುಬೈ ಮೈದಾನದಲ್ಲಿ ಟಾಸ್ ಸೋತಿದ್ದೇ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು. ದುಬೈ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಬಹುತೇಕ ಸೋಲು ಕಟ್ಟಿಟ್ಟ ಬುತ್ತಿ. ದುಬೈನಲ್ಲಿ ನಡೆದ ಕಳೆದ ಎರಡು ಐಪಿಎಲ್ ಸೀಸನ್​ಗಳಲ್ಲಿ ಆಡಿದ 20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮುಗ್ಗರಿಸಿದೆ. ಹೀಗಾಗಿ ಟಾಸ್ ಕೂಡ ಭಾರತದ ಸೋಲಿಗೆ ಮೊದಲ ಮುನ್ನುಡಿ ಬರೆದಿತ್ತು.

ಡ್ಯೂ ಪ್ಯಾಕ್ಟರ್ ಮತ್ತು ಪಿಚ್: ದುಬೈನ ಪಿಚ್ ಮತ್ತು ಡ್ಯೂ ಫ್ಯಾಕ್ಟರ್ ಭಾರತದ ಅರ್ಧ ಅದೃಷ್ಟವನ್ನ ಕಸಿದುಕೊಂಡಿತ್ತು. ದುಬೈನ ಸ್ಲೋ ಪಿಚ್​ನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದವರಿಗೆ, ಎದುರಾಳಿ ತಂಡದ ಬೌಲರ್​ಗಳಿಂದ ಕರಾರುವಾಕ್ ಬೌಲಿಂಗ್ ಮಾಡಲು ಸಾಧ್ಯ. ಅದೇ ನಂತರ ಬೌಲಿಂಗ್ ಮಾಡುವವರಿಗೆ ದುಬೈನಲ್ಲಿ ಚೆಂಡಿನ ಮೇಲಿನ ಹಿಡಿತ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ.

ಆರಂಭಿಕರ ವೈಫಲ್ಯ: ಎಲ್ಲಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ. ಎಲ್ ರಾಹುಲ್, ಮೊದಲ ಮೂರು ಓವರ್​ನಲ್ಲೇ ವಿಕೆಟ್ ಒಪ್ಪಿಸಿದ್ದು, ಭಾರತಕ್ಕೆ ಭಾರಿ ಆಘಾತ ನೀಡಿತ್ತು. ಈ ಆರಂಭಿಕ ಆಘಾತದಿಂದ ಕೊಹ್ಲಿ ಪಡೆಗೆ ಕೊನೆವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಗಾಯಾಳು ಹಾರ್ದಿಕ್ ಪಾಂಡ್ಯಾ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಫಿಟ್ನೆಸ್ ವಿಚಾರದಲ್ಲಿ ಅನುಮಾನಗಳಿದ್ದವು. ಈ ಅನುಮಾನ ಪಾಂಡ್ಯಾ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಾಗ ನಿಜವಾಗಿತ್ತು. ಬ್ಯಾಟಿಂಗ್ ಮಾಡುವಾಗ ಪಾಂಡ್ಯಾ ಬಲಭುಜಕ್ಕೆ ನೋವಾಗಿದೆ. 11 ರನ್​ಗಳಿಸಿ ಔಟಾದ ಪಾಂಡ್ಯಾ ಫೀಲ್ಡಿಂಗ್ ಮಾಡಲು ಬರಲಿಲ್ಲ. ಪಾಂಡ್ಯಾ ಬದಲು ಫಾರ್ಮ್ನಲ್ಲಿದ್ದ ಶಾರ್ದೂಲ್ ಠಾಕೂರ್​ಗೆ ಅವಕಾಶ ನೀಡಿದರೆ, ಕತೆಯೇ ಬೇರೆಯಾಗುತ್ತಿತ್ತು.

ಬೌಲರ್​ಗಳ ನೀರಸ ಪ್ರದರ್ಶನ: ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ವಿಕೆಟ್​ಗಳ ಸುರಿಮಳೆಗೈಯುತ್ತಿದ್ದ ಭಾರತೀಯ ಬೌಲರ್​ಗಳ ಆರ್ಭಟ, ಪಾಕ್ ಬ್ಯಾಟರ್​ಗಳ ಮುಂದೆ ನಡೆಯಲೇ ಇಲ್ಲ. ರಿಝ್ವಾನ್ ಮತ್ತು ಬಾಬರ್ ಜುಗಲ್ಬಂಧಿಗೆ ಕೊಹ್ಲಿ ಬೌಲರ್​ಗಳು ಸುಸ್ತಾದರು. ಯಾವ ಸ್ಪಿನ್ನರ್​ ಕೈಚಳಕವೂ ನಡೆಯಲಿಲ್ಲ.

ವರದಿ: ಸಂಜಯ್.

Virat Kohli: ಪಾಕಿಸ್ತಾನ ಪತ್ರಕರ್ತನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ಖಡಕ್ ಪ್ರಶ್ನೆಗೆ ನಾಯಕ ಉತ್ತರ ಹೇಗಿತ್ತು ಗೊತ್ತಾ?

KL Rahul: ನೋಬಾಲ್​ಗೆ ಔಟಾದ ಕೆ.ಎಲ್. ರಾಹುಲ್; ಅಂಪೈರ್ ತಪ್ಪಿನಿಂದ ಭಾರತಕ್ಕೆ ದೊಡ್ಡ ಮೋಸ

(India vs Pakistan Here is the Five Reasons Why Virat Kohli Team India Lost Match to Pakistan)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ