Virat Kohli: ಪಾಕಿಸ್ತಾನ ಪತ್ರಕರ್ತನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ಖಡಕ್ ಪ್ರಶ್ನೆಗೆ ನಾಯಕ ಉತ್ತರ ಹೇಗಿತ್ತು ಗೊತ್ತಾ?

Press Conference After India vs Pakistan T20 World Cup Match: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಬದಲು ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸುತ್ತೀರಾ ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಹೀಗೆ ಹೇಳಿದ್ದಾರೆ.

Virat Kohli: ಪಾಕಿಸ್ತಾನ ಪತ್ರಕರ್ತನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ಖಡಕ್ ಪ್ರಶ್ನೆಗೆ ನಾಯಕ ಉತ್ತರ ಹೇಗಿತ್ತು ಗೊತ್ತಾ?
Virat Kohli India vs Pakistan

ಪಾಕಿಸ್ತಾನ ವಿರುದ್ಧ ಭಾರತ (India vs Pakistan) ಸೋಲಿನ ನಿರಾಸೆ ಅನುಭವಿಸುತ್ತಿದೆ. ಆರನೇ ಆವೃತ್ತಿಯ ಟಿ20 ವಿಶ್ವಕಪ್ (ICC T20 World Cup 2021) ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಪಡೆ ಬಾಬಲ್ ಅಜಮ್ (Babar Azam) ವಿರುದ್ಧ ಸೋಲು ಕಾಣುವ ಮೂಲಕ ಕೆಟ್ಟದಾಗಿ ಅಭಿಯಾನವನ್ನು ಆರಂಭಿಸಿದೆ. ವಿಶ್ವಕಪ್ ಮಹಾಸಮರದಲ್ಲಿ ಪಾಕ್ ವಿರುದ್ಧ ಸದಾ ಯಶಸ್ಸು ಸಾಧಿಸುತ್ತಿದ್ದ ಭಾರತ (Team India) ಗೆಲುವಿನ ಓಟಕ್ಕೆ ಈ ಮೂಲಕ ಬ್ರೇಕ್ ಬಿದ್ದಿತು. ಬರೋಬ್ಬರಿ 29 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ವಿರುದ್ಧ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ನಾಯಕರು ಮಾತನಾಡುವುದು ವಾಡಿಕೆ. ಗೆಲುವಿಗೆ ಬಗ್ಗೆ, ಸೋಲಲು ಕಾರಣ ಏನು? ಹೀಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದು ಭಾರತ-ಪಾಕ್ (Indo-Pak) ಪಂದ್ಯ ಮುಗಿದ ಬಳಿಕವೂ ನಡಯಿತು. ಅದರಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಪಾಕಿಸ್ತಾನ ಪತ್ರಕರ್ತ (Pakistan Journalist) ಒಂದು ಪ್ರಶ್ನೆ ಕೇಳಿದರು. ಇದಕ್ಕೆ ಕಿಂಗ್ ಕೊಹ್ಲಿ ಸರಿಯಾಗಿಯೇ ಖಡಿಕ್ ಆಗಿ ಉತ್ತರ ನೀಡಿದ್ದಾರೆ.

ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಮೊದಲ ಓವರ್​ನಲ್ಲೇ ಡಕ್​ಗೆ ಬಲಿಯಾದರು. ಶಾಹಿನ್ ಅಫ್ರಿದಿ ಯಾರ್ಕರ್ ಎಸೆತವನ್ನು ಅರಿಯಲು ವಿಫಲವಾದ ಹಿಟ್​ಮ್ಯಾನ್ ಎಲ್​ಬಿಗೆ ಔಟ್ ಆಗಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಈ ಬಗ್ಗೆ ಪಾಕ್ ಪತ್ರಕರ್ತ ಕೊಹ್ಲಿ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ‘ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಬದಲು ಮುಂದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸುತ್ತೀರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೊಹ್ಲಿ ಹೀಗೆ ಹೇಳಿದ್ದಾರೆ.

‘ಟಿ20 ತಂಡದಿಂದ ರೋಹಿತ್ ಶರ್ಮಾ ಅವರನ್ನು ಹೊರಗಿಡಲು ಸಾಧ್ಯವಿದಯೇ? ಕಳೆದ ಪಂದ್ಯದಲ್ಲಿ ತಂಡಕ್ಕೆ ರೋಹಿತ್ ನೀಡಿದ ಕೊಡುಗೆ ಏನೆಂಬುದನ್ನು ತಿಳಿದಿದ್ದರೂ ಸಹ ಈ ರೀತಿಯ ನಿರ್ಧಾರ ಕೈಗೊಳ್ಳಲು ಆಗುತ್ತಾ. ಈ ವಿಷಯದ ಕುರಿತಾಗಿ ನೀವು ವಿವಾದ ಸೃಷ್ಟಿಸುವ ಇಚ್ಛೆ ಇದ್ದರೆ ಮೊದಲೇ ಹೇಳಿ’ ನೇರವಾಗಿ ಮುಖಕ್ಕೆ ಬಡಿದಂತೆ ಹೇಳಿದ್ದಾರೆ.

 

ಇನ್ನು ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ, ‘ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಾಗ ನಾವು ಅಂದುಕೊಂಡಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. 20 ರನ್‌ ಆಗುವ ಹೊತ್ತಿಗೆನೆ ರೋಹಿತ್, ರಾಹುಲ್, ಸೂರ್ಯಕುಮಾರ್ ಹೀಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡೆವು. ಆರಂಭದಲ್ಲೇ ಮುಖ್ಯ ವಿಕೆಟ್ ಪತನಗೊಂಡಾಗ ಮುಂದಿನ ಬ್ಯಾಟರ್​ಗಳಿಗೆ ದೊಡ್ಡ ಹೊಡೆತಗಳನ್ನು ಬಾರಿಸಲಾಗಲಿಲ್ಲ. 10 ಓವರ್ ನಂತರ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ನಮಗೆ ಬೇಕಾಗಿದ್ದ 15ರಿಂದ 20 ಅಧಿಕ ರನ್ ಪಡೆದುಕೊಳ್ಳಲಾಗಲಿಲ್ಲ. ಪಾಕ್ ಬ್ಯಾಟಿಂಗ್ ವೇಳೆ ಅವರ ಮೊದಲ 3 ವಿಕೆಟ್‍ ನಮಗೆ ಬೇಕಾಗಿತ್ತು. ಆದರೆ ಆ ಅವಕಾಶವನ್ನು ಬಾಬರ್ ಟೀಮ್ ನಮಗೆ ನೀಡಲೇ ಇಲ್ಲ’

‘ಶಾಹಿನ್ ಅಫ್ರಿದಿ ಅವರು ಹೊಸ ಚೆಂಡನ್ನು ಟಿ20 ಕ್ರಿಕೆಟ್​ನಲ್ಲಿ ಯಾವ ರೀತಿ ಬಳಸಬೇಕು ಎಂಬುದನ್ನು ಅರಿತಿದ್ದು ಯಶಸ್ವಿಯಾಗಿ ಬೌಲಿಂಗ್ ಮಾಡಿದರು. ಹೊಸ ಚೆಂಡನ್ನು ಬಳಸಿ ಚಾಣಾಕ್ಷತನದಿಂದ ವಿಕೆಟ್ ಕಬಳಿಸಿದರು, ಹೀಗಾಗಿ ಆತನಿಗೆ ಕ್ರೆಡಿಟ್ ಸಲ್ಲಬೇಕು. ನಮ್ಮ ತಂಡದ ಬೌಲಿಂಗ್ ವೇಳೆ ಇಬ್ಬನಿಯ ತೊಂದರೆ ಇದ್ದ ಕಾರಣ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ, ಪಾಕಿಸ್ತಾನ ತಂಡ ನಮಗಿಂತ ಉತ್ತಮ ಆಟವನ್ನು ಆಡಿತು ಎಂಬ ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ಯಾವುದೇ ನಾಚಿಕೆ ಇರಬಾರದು. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ಸರಿಪಡಿಸಿ ಕಮ್​ಬ್ಯಾಕ್ ಮಾಡುತ್ತೇವೆ” ಎಂದು ವಿರಾಟ್ ಕೊಹ್ಲಿ ಹೇಳಿದರು.

India vs Pakistan: ಸೋಲಿನೊಂದಿಗೆ ಟಿ20 ವಿಶ್ವಕಪ್ ಯಾತ್ರೆ ಆರಂಭಿಸಿದ ಭಾರತ: ಮುಂದಿದೆ ಇನ್ನಷ್ಟು ಕಠಿಣ ಹಾದಿ

(Virat Kohli give perfect answer to Pakistani journalist when he asked Ishan Kishan in place of Rohit Sharma)

Click on your DTH Provider to Add TV9 Kannada