Afghanistan vs Scotland: ಟಿ20 ವಿಶ್ವಕಪ್​ನಲ್ಲಿಂದು ಏಕೈಕ ಪಂದ್ಯ: ಸ್ಕಾಟ್ಲೆಂಡ್​ಗೆ ಅಫ್ಘಾನಿಸ್ತಾನ ಸವಾಲು

T20 World Cup: ಸ್ಕಾಟ್ಲೆಂಡ್ ಕೆಲವು ಏರುಪೇರಿನ ಫ‌ಲಿತಾಂಶ ದಾಖಲಿಸಿ ಗ್ರೂಪ್‌ ವಿಭಾಗದ ಲೆಕ್ಕಾಚಾರವನ್ನು ತಲೆ ಕೆಳಗು ಮಾಡುವುದನ್ನು ಅಲ್ಲಗಳೆಯುವಂತಿಲ್ಲ.

Afghanistan vs Scotland: ಟಿ20 ವಿಶ್ವಕಪ್​ನಲ್ಲಿಂದು ಏಕೈಕ ಪಂದ್ಯ: ಸ್ಕಾಟ್ಲೆಂಡ್​ಗೆ ಅಫ್ಘಾನಿಸ್ತಾನ ಸವಾಲು
Afghanistan vs Scotland

ಐಸಿಸಿ ಟಿ20 ವಿಶ್ವಕಪ್​ನಲ್ಲಿಂದು (T20 World Cup) ಒಂದು ಪಂದ್ಯ ನಡೆಯಲಿದೆ. ಸೂಪರ್ 12 ಆಯ್ಕೆಯ ಪಂದ್ಯದಲ್ಲಿ ಗೆದ್ದು ಪ್ರವೇಶ ಪಡೆದಿರುವ ಸ್ಕಾಟ್ಲೆಂಡ್ ತಂಡ ಆಫ್ಘಾನಿಸ್ತಾನ್​ ಟೀಮ್​ಗೆ (Afghanistan vs Scotland) ಸವಾಲಾಕಲು ಸಜ್ಜಾಗಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಈ ಕದನಕ್ಕೆ ಸಾಕ್ಷಿಯಾಗಲಿದೆ. ಅರ್ಹತಾ ಸುತ್ತಿನಲ್ಲಿ ಸ್ಪಿರಿಟೆಡ್‌ ಪ್ರದರ್ಶನ ನೀಡಿದ ಸ್ಕಾಟ್ಲೆಂಡ್‌ ತಂಡ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿತ್ತು.

ಸ್ಕಾಟ್ಲೆಂಡ್ ತಂಡದ ನಾಯಕ ಕೈಲ್ ಕೋಟ್ಜರ್‌ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಕ್ರಿಸ್ ಗ್ರೀಸ್ ಆಲ್ರೌಂಡರ್ ಪ್ರದರ್ಶನ ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಮುನ್ಸೆ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ. ಸ್ಕಾಟ್ಲೆಂಡ್ ಕೆಲವು ಏರುಪೇರಿನ ಫ‌ಲಿತಾಂಶ ದಾಖಲಿಸಿ ಗ್ರೂಪ್‌ ವಿಭಾಗದ ಲೆಕ್ಕಾಚಾರವನ್ನು ತಲೆ ಕೆಳಗು ಮಾಡುವುದನ್ನು ಅಲ್ಲಗಳೆಯುವಂತಿಲ್ಲ.

‘ನಮ್ಮನ್ನು ಯಾರೂ ಲಘುವಾಗಿ ಪರಿಗಣಿಸುವುದು ಬೇಡ. ನಾವೀಗ ಅತ್ಯುತ್ತಮ ಫಾರ್ಮ್ ನಲ್ಲಿದ್ದೇವೆ. ಹಿಂದೆಯೂ ನಾವು ಸಾಕಷ್ಟು ಏರುಪೇರಿನ ಫ‌ಲಿತಾಂಶ ದಾಖಲಿಸಿದ್ದೇವೆ. ಇಂಗ್ಲೆಂಡನ್ನೂ ಮಣಿಸಿದ ದಾಖಲೆ ಇದೆ. ಎದುರಾಳಿಗಳು ಭೀತಿಪಡುವ ರೀತಿಯಲ್ಲಿ ನಮ್ಮ ಪ್ರದರ್ಶನ ಸಾಗಲಿದೆ’ ಎಂದು ಸ್ಕಾಟ್ಲೆಂಡ್ ನಾಯಕ ಕೋಟ್ಜರ್‌ ಹೇಳಿದ್ದಾರೆ.

ಇನ್ನು ಅಫ್ಘಾನಿಸ್ತಾನ ತಂಡದ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ತಾಲಿಬಾನ್‌ ಆಡಳಿತಕ್ಕೆ ಬಂದ ಬಳಿಕ ಅಲ್ಲಿನ ಕ್ರಿಕೆಟ್‌ ಕೂಡ ಸಾಕಷ್ಟು ಬದಲಾಗಿದೆ. ವಿಶ್ವಕಪ್‌ ತಂಡ ಆಯ್ಕೆಗೊಂಡ ಬಳಿಕ ಸಾಕಷ್ಟು ಅನಿರೀಕ್ಷಿತ ವಿದ್ಯಮಾನಗಳು ಘಟಿಸಿದವು. ರಶೀದ್‌ ಖಾನ್‌ ನಾಯಕತ್ವದಿಂದ ಕೆಳಗಿಳಿದರು. ಈ ಸ್ಥಾನಕ್ಕೆ ಹಿರಿಯ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅವರನ್ನು ಮರಳಿ ನೇಮಿಸಲಾಯಿತು.

ಅನುಭವಿ ಶ್ರೀಲಂಕಾ, ಬಾಂಗ್ಲಾದೇಶ ತಂಡ ಗಳನ್ನು ಹಿಂದಿಕ್ಕಿ ವಿಶ್ವಕಪ್‌ ಪಂದ್ಯಾವಳಿಗೆ ನೇರ ಪ್ರವೇಶ ಪಡೆದದ್ದು ಅಫ್ಘಾನ್‌ ತಂಡದ ಹೆಗ್ಗಳಿಕೆ. ಅಭ್ಯಾಸ ಪಂದ್ಯದಲ್ಲಿ ತಂಡದ್ದು ಮಿಶ್ರ ಸಾಧನೆ. ದ.ಆಫ್ರಿಕಾ ವಿರುದ್ಧ ಎಡವಿದರೆ, ಹಾಲಿ ಚಾಂಪಿ ಯನ್‌ ವೆಸ್ಟ್‌ ಇಂಡೀಸನ್ನು ಮಗುಚಿ ಹಾಕಿತು. ಅಫ್ಘಾನಿಸ್ಥಾನ ತಂಡದಲ್ಲಿ ರಶೀದ್ ಖಾನ್, ಮುಜೀಬುರ್ ರೆಹಮಾನ್ ರಂತ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದು ಯಾವ ಸಮಯದಲ್ಲಾದರೂ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಜ್ರತುಲ್ಲ ಜಜಾಯ್‌, ಮೊಹಮ್ಮದ್‌ ಶಾಜಾದ್‌, ನಜಿಬುಲ್ಲ ಜದ್ರಾನ್‌, ನಾಯಕ ನಬಿ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

ಪಂದ್ಯ ಆರಂಭ: ಸಂಜೆ 7:30ಕ್ಕೆ.

ಸ್ಥಳ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ.

Pakistan T20 World cup: ಐತಿಹಾಸಿಕ ಗೆಲುವು ಕಂಡರೂ ಸಂಭ್ರಮಿಸಲೇ ಇಲ್ಲ ಪಾಕ್ ಆಟಗಾರರು: ಇಲ್ಲಿದೆ ಅಚ್ಚರಿ ಕಾರಣ

Babar Azam: ಭಾರತ ವಿರುದ್ಧ ಗೆದ್ದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ ನಾಯಕ ಬಾಬರ್​ ಅಜಾಮ್​: ಏನು ಗೊತ್ತೇ?

(Afghanistan cricket team begins its T20 World Cup campaign against a spirited Scotland)

Published On - 1:01 pm, Mon, 25 October 21

Click on your DTH Provider to Add TV9 Kannada