Pakistan T20 World cup: ಐತಿಹಾಸಿಕ ಗೆಲುವು ಕಂಡರೂ ಸಂಭ್ರಮಿಸಲೇ ಇಲ್ಲ ಪಾಕ್ ಆಟಗಾರರು: ಇಲ್ಲಿದೆ ಅಚ್ಚರಿ ಕಾರಣ
India vs Pakistan, T20 World Cup: ಭಾರತ ವಿರುದ್ಧ ಐತಿಹಾಸಿಕ ಗೆಲುವು ಕಂಡಂತೆ ಅತ್ತ ಪಾಕಿಸ್ತಾನ ಅಭಿಮಾನಿಗಳು ಖುಷಿಯಲ್ಲಿದ್ದರೆ ಇತ್ತ ಪಾಕ್ ಆಟಗಾರರು ಮಾತ್ರ ಡ್ರೆಸ್ಸಿಂಗ್ ರೂಮ್ನಲ್ಲಿ ಯಾವುದೇ ಸಂಭ್ರಮಾಚರಣೆ ಮಾಡಲಿಲ್ಲ. ಯಾಕೆ ಎಂಬುದಕ್ಕೆ ಇಲ್ಲಿದೆ ನೋಡಿ ಕಾರಣ.
ಟಿ20 ವಿಶ್ವಕಪ್ 2021ರ (T20 World Cup 2021) ಮೊದಲ ಹೈವೋಲ್ಟೇಜ್ ಪಂದ್ಯ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಕದನ ಏಕಪಕ್ಷೀಯವಾಗಿ ಸಾಗಿತು. ಯಾವ ಹಂತದಲ್ಲೂ ಭಾರತಕ್ಕೆ ಬ್ಯಾಟಿಂಗ್ನಲ್ಲಿ ಕಮ್ಬ್ಯಾಕ್ ಮಾಡಲು ಬೌಲಿಂಗ್ ವಿಕೆಟ್ ಕೀಳಲು ಸಾಧ್ಯವಾಗಲೇಯಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ (Pakistan T20 World cup) ಮಾಡಿಕೊಂಡ ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬಂತು. ಈ ಬಗ್ಗೆ ಸ್ವತಃ ಪಾಕ್ ನಾಯಕ ಬಾಬರ್ ಅಜಾಮ್ (Babar Azam) ಕೂಡ ಹೇಳಿದ್ದಾರೆ. ಇದು ಪಾಕಿಸ್ತಾನಕ್ಕೆ ಭಾರತ ವಿರುದ್ಧ ಸಿಕ್ಕ ಸಾಮಾನ್ಯ ಗೆಲುವಲ್ಲ. ಬರೋಬ್ಬರಿ 29 ವರ್ಷಗಳ ನಂತರ ದಕ್ಕಿದ ಐತಿಹಾಸಿಕ ಜಯ. ಭಾರತದ (Team India) ಗರಿಮೆಯಲ್ಲಿದ್ದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ ಬಾಬರ್ ಪಡೆ ಶಾಕ್ ನೀಡಿತು. ಆದರೆ, ಈ ಅಮೋಘ ಗೆಲುವನ್ನು ಪಾಕಿಸ್ತಾನ ತಂಡದ ಆಟಗಾರರು ಸಂಭ್ರಮಿಸಲೇಯಿಲ್ಲ. ಇದಕ್ಕೆ ಕಾರಣ ಕೂಡ ಇದೆ.
ಹೌದು, ಅತ್ತ ಪಾಕಿಸ್ತಾನ ಅಭಿಮಾನಿಗಳು ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್ಗಳ ಐತಿಹಾಸಿಕ ಗೆಲುವಿನ ಖುಷಿಯಲ್ಲಿದ್ದರೆ ಇತ್ತ ಪಾಕ್ ಆಟಗಾರರು ಮಾತ್ರ ಡ್ರೆಸ್ಸಿಂಗ್ ರೂಮ್ನಲ್ಲಿ ಯಾವುದೇ ಸಂಭ್ರಮಾಚರಣೆ ಮಾಡಲಿಲ್ಲ. ಕ್ಯಾಪ್ಟನ್ ಬಾಬರ್ ಅಜಾಮ್ ತಂಡದ ಆಟಗಾರರಿಗೆ ಈ ಹಿಂದೆ ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಬೇಕು ಎಂಬ ಮಾತನ್ನು ಹೇಳಿದ್ದಾರೆ.
ಭಾರತ ವಿರುದ್ಧ ಗೆದ್ದ ಬಳಿಕ ಪಾಕ್ ಕ್ರಿಕೆಟ್ ಮಂಡಳಿ, ಆಟಗಾರರ ಜೊತೆ ನಾಯಕ ಬಾಬರ್ ಮಾತನಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಬಾಬರ್ ಆಟಗಾರರನ್ನು ಕೂರಿಸಿ ಅಮೂಲ್ಯ ಮಾತುಗಳನ್ನಾಡಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ ನಾಯಕ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಮರೆಯಬೇಡಿ ಇದು ಕೇವಲ ಆರಂಭವಷ್ಟೆ, ನಮ್ಮ ಗುರಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದು ಎಂದರು.
ಇದರ ಜೊತೆಗೆ ಆಟಗಾರರಲ್ಲಿ ವಿಶೇಷ ಮನವಿ ಮಾಡಿದ ಬಾಬರ್, ‘ಈ ಗೆಲುವಿನಿಂದ ಬೀಗಬೇಡಿ, ಮುಂದಿನ ಪಂದ್ಯಗಳಿಗೆ ಸಜ್ಜಾಗಿ. ನಾವು ಈ ಹಿಂದೆ ಒಂದು ತಪ್ಪು ಮಾಡಿದ್ದೆವು. ಒಂದು ಪಂದ್ಯ ಗೆದ್ದ ಬಳಿಕ ದೊಡ್ಡ ರೀತಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದೆವು. ಬಳಿಕ ಮುಂದಿನ ಪಂದ್ಯ ಸೋತೆವು. ಈ ಬಾರಿ ಆ ರೀತಿ ಆಗಬಾರದು. ಸಂಭ್ರಮ ಕಡಿಮೆ ಮಾಡಿ ಮುಂದಿನ ಪಂದ್ಯದ ಬಗ್ಗೆ ಗಮನ ಹರಿಸಬೇಕು’ ಎಂದು ಆಟಗಾರರಲ್ಲಿ ಮನವಿ ಮಾಡಿದ್ದಾರೆ.
The captain and head coach address the players after Pakistan’s historic win over India. #WeHaveWeWill pic.twitter.com/Laww5iTMzX
— Pakistan Cricket (@TheRealPCB) October 24, 2021
ಭಾನುವಾರ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಭಾರತ ನೀಡಿದ 152 ರನ್ಗಳ ಗುರಿಯನ್ನು ಬೆನ್ನು ಹತ್ತಿದ ನಾಯಕ ಬಾಬರ್ ಅಜಾಮ್ ಹಾಗೂ ಮೊಹಮ್ಮದ್ ರಿಝ್ವಾನ್ ಅಜೇಯ ಆಟವಾಡಿದರು. ನಾಯಕ ಬಾಬರ್ 52 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೆ, ರಿಝ್ವಾನ್ 55 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದರು. ಆ ಮೂಲಕ ಈ ಜೋಡಿ ಬರೊಬ್ಬರಿ 152 ರನ್ ಗಳ ಬೃಹತ್ ಜೊತೆಯಾಟವಾಡಿ ದಾಖಲೆ ಬರೆದು ತಂಡಕ್ಕೆ ಗೆಲುವು ತಂದಿಟ್ಟಿತು. ಪಾಕಿಸ್ತಾನದ ಪರ ಟಿ20ಯಲ್ಲಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟರ್ ಜೋಡಿ ಗಳಿಸಿದ ಗರಿಷ್ಟ ರನ್ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಯಿತು.
Babar Azam: ಭಾರತ ವಿರುದ್ಧ ಗೆದ್ದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ ನಾಯಕ ಬಾಬರ್ ಅಜಾಮ್: ಏನು ಗೊತ್ತೇ?
Hardik Pandya: ಕೊಹ್ಲಿ ಪಡೆಗೆ ಶಾಕ್ ಮೇಲೆ ಶಾಕ್: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ
India vs Pakistan, T20 World Cup: ಪಾಕಿಸ್ತಾನ ವಿರುದ್ಧ ಭಾರತದ ಸೋಲಿಗೆ ಕಾರಣವಾಗಿದ್ದು ಇದೇ ತಪ್ಪುಗಳು ನೋಡಿ
(Pakistan players didnt celebrate the victory after win against India in T20 world cup here is the reason)