AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Biddings: ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭ: ಇಲ್ಲಿದೆ ನೋಡಿ ಮಾಹಿತಿ

New IPL teams: ಐಪಿಎಲ್ 2022ರ ಎರಡು ಹೊಸ ತಂಡಗಳ ಖರೀದಿಗೆ ಘಟಾನುಘಟಿ ಕಂಪೆನಿಗಳ ನಡುವೆ ಬಿಡ್ಡಿಂಗ್ ಶುರುವಾಗಿದೆ. ತಂಡ ಖರೀದಿಸಲು ಭಾರೀ ಸ್ಪರ್ಧೆ ಏರ್ಪಡಲಿದೆ. ಖ್ಯಾತ ಫುಟ್ಬಾಲ್​ ಕ್ಲಬ್​ ಮ್ಯಾಂಚೆಸ್ಟರ್​, ಬಾಲಿವುಡ್​ ಸ್ಟಾರ್​​ ರಣ್​ವೀರ್​ ಸಿಂಗ್​ ಹಾಗೂ ದೀಪಿಕಾ ಕೂಡ ತಂಡ ಖರೀದಿಸ್ತಾರೆ ಎನ್ನಲಾಗಿದೆ.

IPL Biddings: ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭ: ಇಲ್ಲಿದೆ ನೋಡಿ ಮಾಹಿತಿ
IPL Bidding
TV9 Web
| Updated By: Vinay Bhat|

Updated on: Oct 25, 2021 | 1:27 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 2022ರ (IPL 2022) ಎರಡು ಹೊಸ ತಂಡಗಳ ಖರೀದಿಗೆ ಘಟಾನುಘಟಿ ಕಂಪೆನಿಗಳ ನಡುವೆ ಹಣಾಹಣಿ ಆರಂಭವಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಂಚಿಕೊಂಡಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಡ್ಡಿಂಗ್ (IPL Bidding) ಶುರುವಾಗಲಿದೆ ಎಂದು ಹೇಳಿದೆ. ಈ ಮೂಲಕ ಐಪಿಎಲ್ 2022 ಆವೃತ್ತಿಗಾಗಿ ಇಂದು ಎರಡು ಹೊಸ ತಂಡಗಳು ಸೇರ್ಪಡೆಯಾಗಲಿದ್ದು, ಅವುಗಳ ಹೆಸರು ಕೂಡ ಇಂದೇ ಘೋಷಣೆಯಾಗಲಿದೆ. ಈ ಸ್ಪರ್ಧೆಯಲ್ಲಿ ಬಿಸಿಸಿಐ 7,000ದಿಂದ 10,000 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಒಟ್ಟು 22 ಕಂಪೆನಿಗಳು ಟೆಂಡರ್‌ ಪಡೆದಿವೆ. ಈ ಪೈಕಿ 6 ಬಿಡ್ಡರ್‌ಗಳು ಗಂಭೀರವಾಗಿ ತಂಡ ಖರೀದಿಗೆ ಯತ್ನಿಸುವ ನಿರೀಕ್ಷೆಯಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಹಮದಾಬಾದ್​, ಲಖನೌ ಹೊಸ ಫ್ರಾಂಚೈಸಿಗಳು ಎಂದು ಹೇಳಲಾಗಿದೆ.

ತಂಡ ಖರೀದಿಸಲು ಭಾರೀ ಸ್ಪರ್ಧೆ ಏರ್ಪಡಲಿದೆ. ಖ್ಯಾತ ಫುಟ್ಬಾಲ್​ ಕ್ಲಬ್​ ಮ್ಯಾಂಚೆಸ್ಟರ್​ ಕೂಡ ಐಪಿಎಲ್​ ತಂಡ ಖರೀದಿ ಮಾಡುತ್ತೆ ಎಂಬ ಗಾಸಿಪ್​ ಹರಿದಾಡುತ್ತಿದ್ದು, ಬಾಲಿವುಡ್​ ಸ್ಟಾರ್​​ ನಟರಾದ ರಣ್​ವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಕೂಡ ತಂಡ ಖರೀದಿಸ್ತಾರೆ ಎನ್ನಲಾಗಿದೆ. ಗೌತಮ್‌ ಅದಾನಿ ಮಾಲಕತ್ವದ ಅದಾನಿ ಸಮೂಹ ಮತ್ತು ಸಂಜೀವ್‌ ಗೊಯೆಂಕಾ ಮಾಲಕತ್ವದ ಆರ್‌ಪಿಎಸ್‌ಜಿ ಸಮೂಹ ಸದ್ಯದ ಬಿಡ್ಡರ್‌ಗಳ ಪೈಕಿ ದೊಡ್ಡ ಹೆಸರುಗಳು. ಇಬ್ಬರಿಗೂ ಹಣಕ್ಕಂತೂ ಯಾವುದೇ ಕೊರತೆಯಿಲ್ಲ. ಈ ಪೈಕಿ ಸಂಜೀವ್‌ ಗೊಯೆಂಕಾಗೆ ಕ್ರಿಕೆಟ್‌ ಬಗ್ಗೆ ವಿಪರೀತ ಪ್ರೀತಿಯಿದೆ.

ಬಿಸಿಸಿಐ ನಿಯಮಗಳ ಪ್ರಕಾರ ಒಂದು ಕಂಪೆನಿಯಾಗಲೀ, ವ್ಯಕ್ತಿಯಾಗಲೀ ವೈಯಕ್ತಿಕವಾಗಿ ಅಥವಾ ಗರಿಷ್ಠ ಮೂವರು ಒಗ್ಗೂಡಿ ಯಾವುದೇ ತಂಡದ ಮೇಲೆ ಹಕ್ಕು ಚಲಾಯಿಸಬಹುದು. ಒಂದು ವೇಳೆ ಒಬ್ಬ ವ್ಯಕ್ತಿ ಅಥವಾ ಒಂದು ಕಂಪೆನಿ ತಂಡದ ಖರೀದಿಗೆ ಮುಂದಾಗುವುದಾದರೆ ಅದರ ವಾರ್ಷಿಕ ವಹಿವಾಟು ಕನಿಷ್ಠ 3,000 ಕೋಟಿ ರೂ. ಇರಬೇಕು. ಮೂವರು ಒಗ್ಗೂಡಿ ಖರೀದಿಸುವುದಾದರೆ ಪ್ರತಿಯೊಬ್ಬರ ತಲಾ ವಾರ್ಷಿಕ ಆದಾಯ ಕನಿಷ್ಠ 2,500 ಕೋಟಿ ರೂ. ಇರಬೇಕಾಗುತ್ತದೆ.

3,000 ಕೋಟಿಗಿಂತ ಹೆಚ್ಚಿನ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ. ಒಟಿಟಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವುದು ಯುಎಸ್ ಮೂಲದ ಗ್ಲೇಜರ್ ಕುಟುಂಬವು ಫ್ರಾಂಚೈಸಿಗಾಗಿ ಔಪಚಾರಿಕ ಬಿಡ್ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲವಾದರೂ, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್‌ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ. ಒಟಿಟಿ ದಾಖಲಾತಿಯು ವಿದೇಶಿ ಸಂಸ್ಥೆಯ ಬಿಡ್ ಯಶಸ್ವಿಯಾಗಬೇಕಾದರೆ ಭಾರತದಲ್ಲಿ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.

ಇದರ ನಡುವೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಅವರು ತಂಡವೊಂದರ ಪಾಲುದಾರನಾಗಲು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 300 ಕೋಟಿ ರೂ. ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದಾರೆ ಎಂಬ ಗಾಸಿಪ್ ಕೂಡ ಇದೆ.

Afghanistan vs Scotland: ಟಿ20 ವಿಶ್ವಕಪ್​ನಲ್ಲಿಂದು ಏಕೈಕ ಪಂದ್ಯ: ಸ್ಕಾಟ್ಲೆಂಡ್​ಗೆ ಅಫ್ಘಾನಿಸ್ತಾನ ಸವಾಲು

Pakistan T20 World cup: ಐತಿಹಾಸಿಕ ಗೆಲುವು ಕಂಡರೂ ಸಂಭ್ರಮಿಸಲೇ ಇಲ್ಲ ಪಾಕ್ ಆಟಗಾರರು: ಇಲ್ಲಿದೆ ಅಚ್ಚರಿ ಕಾರಣ

(BCCI is all Set to host the IPL Bedding for 2 new teams vivo ipl 2022 auction dateand more information is here)

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ