ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳುವ ಬದಲು ಉದ್ಯೋಗಕ್ಕೆ ಸೇರಿದ್ದ ವಿವಾಹಿತ ಮಹಿಳೆಗೆ ಕಿರುಕುಳ, ಆತ್ಮಹತ್ಯೆ, ಆರೋಪಿ ಪರಾರಿ

| Updated By: ಆಯೇಷಾ ಬಾನು

Updated on: Mar 16, 2023 | 1:23 PM

ತನ್ನ ಪತ್ನಿಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಯ್ ಕಿರುಕುಳ ನೀಡುತ್ತಿದ್ದ ಎಂದು ಸೌಮ್ಯಾ ಪತಿ, ನಿವೃತ್ತ ಸೇನಾ ಯೋಧ ದೂರಿದ್ದಾರೆ. ಈ ಕುರಿತು ಸೌಮ್ಯ ತಾಯಿ ಭವಾನಿ ದೂರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಕೈಗೊಂಡು ಎಇಇ ವಿನಯ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳುವ ಬದಲು ಉದ್ಯೋಗಕ್ಕೆ ಸೇರಿದ್ದ ವಿವಾಹಿತ ಮಹಿಳೆಗೆ ಕಿರುಕುಳ, ಆತ್ಮಹತ್ಯೆ, ಆರೋಪಿ ಪರಾರಿ
ವಿವಾಹಿತ ಮಹಿಳೆಗೆ ಕಿರುಕುಳ, ಆತ್ಮಹತ್ಯೆ
Follow us on

ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು, ವಿದ್ಯೆ ಇದೆಯೆಂದು ಉದ್ಯೋಗಕ್ಕೆ ಸೇರಿದ ಮಹಿಳೆಗೆ ಹಿರಿಯ ಅಧಿಕಾರಿ ಕಿರುಕುಳ ನೀಡಿದರು ಎಂದು ಆರೋಪಿಸಿ, ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿ ಎಂಜಿನಿಯರ್ ಪರಾರಿಯಾಗಿದ್ದಾರೆ. ಕೊಡಗು (Kodagu) ಜಿಲ್ಲೆಯ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದವರಾದ ಸೌಮ್ಯಾ (39) ಮನೆಯಲ್ಲಿ ಖಾಲಿಯಾಗಿರುವುದು ಬೇಡವೆಂದು ಕೆಲಸಕ್ಕೆ ಸೇರಿಕೊಂಡರು. ಮೇ ತಿಂಗಳಲ್ಲಿ ಮಡಿಕೇರಿ (Madikeri) ಸೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಸೇರಿದ್ದರು.

ಆದರೆ ಅದೇ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಕಣ್ಣು ಈಕೆಯ ಮೇಲೆ ಬಿದ್ದಿದೆ. ಆಕೆಗೆ ಲೈಂಗಿಕ ಕಿರುಕುಳ (harassment) ನೀಡಲು ಆರಂಭಿಸಿದ್ದಾನೆ. ವಾಟ್ಸಾಪ್ ನಲ್ಲಿ ಚಾಟ್ ಮಾಡುವಂತೆ ಸೌಮ್ಯಾಗೆ ಕಿರುಕುಳ ನೀಡಲಾರಂಭಿಸಿದ್ದ ಎಂದು ದೂರಲಾಗಿದೆ. ಕೊನೆಗೆ, ಕಿರುಕುಳ ತಾಳಲಾರದೆ ಸೌಮ್ಯಾ ಮಂಗಳವಾರ ಮನೆಯಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಹದಿವಯಸ್ಸಲ್ಲಿ ಹುಚ್ಚು ಕೋಡಿ ಪ್ರೀತಿಗೆ ಬಿದ್ದು ಮದುವೆಯಾದ ಮೂರೇ ದಿನಕ್ಕೆ ಮೃತಪಟ್ಟಳು, ಕಾರಣ ನಿಗೂಢ!

ತನ್ನ ಪತ್ನಿಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಯ್ ಕಿರುಕುಳ ನೀಡುತ್ತಿದ್ದ ಎಂದು ಸೌಮ್ಯಾ ಪತಿ, ನಿವೃತ್ತ ಸೇನಾ ಯೋಧ ದೂರಿದ್ದಾರೆ. ಈ ಕುರಿತು ಸೌಮ್ಯ ತಾಯಿ ಭವಾನಿ ದೂರು ಮಡಿಕೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಕೈಗೊಂಡು ಎಇಇ ವಿನಯ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:17 am, Thu, 16 March 23