ಯಡಿಯೂರಪ್ಪ ಯಾರಿಗೆ ಮಾತು ಕೊಟ್ಟಿದ್ದಾರೋ ಅವ್ರನ್ನ ಮಂತ್ರಿ ಮಾಡ್ತಾರೆ: ಆರ್​. ಅಶೋಕ್

ನಾನು ಕೂಡ ದೆಹಲಿಗೆ ಹೋಗಿದ್ದೆ. ಮುಖ್ಯಮಂತ್ರಿ ಬದಲಾವಣೆ ಲಕ್ಷಣಗಳು ಇಲ್ಲ. ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಯಡಿಯೂರಪ್ಪ ಯಾರಿಗೆ ಮಾತು ಕೊಟ್ಟಿದ್ದಾರೋ ಅವ್ರನ್ನ ಮಂತ್ರಿ ಮಾಡ್ತಾರೆ. ಕೇಂದ್ರದ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಅಲ್ಲಿಯವರೆಗೆ ಸಮಾಧಾನ ಆಗಿರೋದು ಮುಖ್ಯ ಎಂದರು.

ಯಡಿಯೂರಪ್ಪ ಯಾರಿಗೆ ಮಾತು ಕೊಟ್ಟಿದ್ದಾರೋ ಅವ್ರನ್ನ ಮಂತ್ರಿ ಮಾಡ್ತಾರೆ: ಆರ್​. ಅಶೋಕ್
ಆರ್. ಅಶೋಕ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 5:34 PM

ಕೊಡಗು: ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯ ಬದಲಾವಣೆ ಮಾಡುವುದಿಲ್ಲ. ಮುಂದಿನ ಎರಡುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಅನ್ನೋದು ನನ್ನ ಅಭಿಪ್ರಾಯ ಎಂದು ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

ನಾನು ಕೂಡ ದೆಹಲಿಗೆ ಹೋಗಿದ್ದೆ. ಮುಖ್ಯಮಂತ್ರಿ ಬದಲಾವಣೆ ಲಕ್ಷಣಗಳು ಇಲ್ಲ. ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಯಡಿಯೂರಪ್ಪ ಯಾರಿಗೆ ಮಾತು ಕೊಟ್ಟಿದ್ದಾರೋ ಅವ್ರನ್ನ ಮಂತ್ರಿ ಮಾಡ್ತಾರೆ. ಕೇಂದ್ರದ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಅಲ್ಲಿಯವರೆಗೆ ಸಮಾಧಾನವಾಗಿರಬೇಕು ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಆತ್ಮಹತ್ಯೆ ಯತ್ನದ ವಿಚಾರ ಅವ್ರ ವೈಯುಕ್ತಿಕ. ಎರಡು ದಿನಗಳ ಬಳಿಕ ಸಂತೋಷ್ ಮಾಧ್ಯಮಗಳ ಮುಂದೆ ಬರಲಿದ್ದಾರೆ. ಆತ್ಮಹತ್ಯೆ ಬಗ್ಗೆ ವಿರೋಧ ಪಕ್ಷದವ್ರು ಕಾರಣವಿಲ್ಲದೆ ಏನೆನೋ ಮಾತನಾಡುತ್ತಾರೆ. ಅವರಿಗೆ ಮಾತನಾಡುವ ಚಟ ಇದೆ. ಆಧಾರವಿಲ್ಲದೆ ಮಾತನಾಡೋದು ಸರಿಯಲ್ಲ ಎಂದು ಡಿಕೆಶಿಯವರ ಹೇಳಿಕೆ ಬಗ್ಗೆ ಆರ್​ ಅಶೋಕ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.