ಕೊಡಗು: ಪೂರ್ವಿಕಾ ಮೊಬೈಲ್ ಮಳಿಗೆಯಲ್ಲಿ ಭಾರೀ ಅಗ್ನಿ ಅವಗಡ ಸಂಭವಿಸಿದೆ. ಸೋಮವಾರ ತಡ ರಾತ್ರಿ ಕೊಡಗು ಜಿಲ್ಲೆಯ ಕುಶಾಲನಗರ ಮಳಿಗೆಗೆ ತಗುಲಿದ ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಆಕಸ್ಮಿಕಕ್ಕೆ ಖಚಿತ ಕಾರಣ ಇನ್ನೂ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶೋ ರೂಂ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ದಾರಿ ಹೋಕರು ಗಮನಿಸಿದ್ದಾರೆ. ತಕ್ಷಣವೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಅಗ್ನಿಶಾಮಕ ತಂಡ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಆದರೆ ಅಷ್ಟು ಹೊತ್ತಿಗಾಗಲೆ, ಮಳಿಗೆಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಸದ್ಯ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮಂಗಳೂರು:ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣು
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಎರಡನೇ ಅಲೆಗೆ ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ತಂದೆ-ತಾಯಿ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಮಹಾಮಾರಿ ಕೊರೊನಾದಿಂದಾದ ನಷ್ಟ ಅಷ್ಟಿಷ್ಟಲ್ಲ. ಈ ನಡುವೆ ಮಂಗಳೂರಿನಲ್ಲಿ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರು ಹೊರವಲಯದ ಚಿತ್ರಾಪುರದ ರಹೆಜಾ ಅಪಾರ್ಟ್ಮೆಂಟ್ನಲ್ಲಿ ರಮೇಶ್ ಕುಮಾರ್ ಮತ್ತು ಗುಣ ದಂಪತಿ ಆತ್ನಹತ್ಯಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೆ ಮುನ್ನ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತಿ ರಮೇಶ್ ಕರೆ ಮಾಡಿದ್ದರು. ಪತ್ನಿ ಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನೂ ಕೂಡಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಮೇಶ್ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ಗೆ ಇಂದು (ಆಗಸ್ಟ್ 17) ಬೆಳಗ್ಗೆ ಕರೆ ಮಾಡಿದ್ದರು. ಬಳಿಕ ಲೊಕೇಷನ್ ಟ್ರೇಸ್ ಮಾಡಿ ಪೊಲೀಸ್ ಆಯುಕ್ತರು ಸಿಬ್ಬಂದಿಯನ್ನು ಕಳುಹಿಸಿದ್ದರು.
ಲಾಕ್ ಆಗಿದ್ದ ಫ್ಲ್ಯಾಟ್ ಬಾಗಿಲು ಒಡೆದು ಸಿಬ್ಬಂದಿ ಒಳಗೆ ಹೋಗುತ್ತಾರೆ. ಅಷ್ಟರಲ್ಲೇ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಒಂದು ವಾರದಿಂದ ರಮೇಶ್ ದಂಪತಿ ಕೊವಿಡ್ ಸೋಂಕಿನಿಂದ ಬಳಲುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ತೀರ್ಮಾನಿಸಿದ್ದಾರೆ. ಪೊಲೀಸ್ ಆಯುಕ್ತ ಮತ್ತು ಹಿಂದೂ ಸಂಘಟನೆ ಮುಖಂಡರಿಗೆ ಅಂತ್ಯಕ್ರಿಯೆಗೆ 1 ಲಕ್ಷ ರೂ. ಹಣ ಇಟ್ಟಿರುವುದಾಗಿ ವಾಯ್ಸ್ ಮೆಸೇಜ್ ಮಾಡಿದ್ದಾರೆ. ಅಲ್ಲದೇ ಮನೆಯಲ್ಲಿರುವ ವಸ್ತು ಮಾರಿ ಬರುವ ಹಣವನ್ನು ಬಡವರಿಗೆ ನೀಡಬೇಕು ಅಂತ ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಹರಿರಾಂ ಶಂಕರ್, ಬೆಳಗ್ಗೆ 6.40ರ ಹೊತ್ತಿಗೆ ಕಮಿಷನರ್ಗೆ ವಾಟ್ಸಾಪ್ ಮೆಸೇಜ್ ಮತ್ತು ಕಾಲ್ ಬಂದಿದೆ. ಕೊರೊನಾ ಭಯದಿಂದ ನಾನು ಮತ್ತು ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಕಾಲ್ ಬಂದಿತ್ತು. ತಕ್ಷಣ ಕಮಿಷನರ್ ಕಾಲ್ ಮಾಡಿದ್ರೂ ಅವರು ಎತ್ತಲಿಲ್ಲ. ವಾಯ್ಸ್ ಮೆಸೇಜ್ ಮಾಡಿ ಧೈರ್ಯ ತುಂಬಿದ್ರೂ ರಿಪ್ಲೈ ಮಾಡಿಲ್ಲ. ನಂತರ ಲೊಕೇಶನ್ ಟ್ರೇಸ್ ಮಾಡಿ ನಮ್ಮ ತಂಡ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಡೆತ್ ನೋಟಲ್ಲಿ ನಮಗೆ ಕೊರೊನಾ ಇದೆ. ಬ್ಲಾಕ್ ಫಂಗಸ್ ಬಂದ್ರೆ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೊನಾ ಇರುವ ಬಗ್ಗೆ ಮಾಹಿತಿಯಿಲ್ಲ. ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಸಲ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದು, ಇದರ ಖಿನ್ನತೆ ಇರಬಹುದು. ಆದರೆ ಇವರು ಯಾರ ಜೊತೆಗೂ ಹೆಚ್ಚಾಗಿ ಬೆರೆತಿರುವ ಬಗ್ಗೆ ಮಾಹಿತಿಯಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ:
ಆಕಸ್ಮಿಕ ಬೆಂಕಿಗೆ ಫ್ರಿಡ್ಜ್ ಸ್ಫೋಟ: ಮೂವರಿಗೆ ಗಂಭೀರ ಗಾಯ
ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಬೆಂಜ್ ಕಾರು; ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು
Published On - 12:10 pm, Tue, 17 August 21