ಆಕಸ್ಮಿಕ ಬೆಂಕಿಗೆ ಫ್ರಿಡ್ಜ್ ಸ್ಫೋಟ: ಮೂವರಿಗೆ ಗಂಭೀರ ಗಾಯ
ಆಟೋ ಚಾಲಕ ಚಂದ್ರು ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ. ಈ ಅವಗಡದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.
ಮೈಸೂರು: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ ಫ್ರಿಡ್ಜ್ ಸ್ಫೋಟಗೊಂಡ ಘಟನೆ ಮೈಸೂರಿನ ಲಾಲ್ ಬಂದ್ ಬೀದಿಯಲ್ಲಿ ನಡೆದಿದೆ. ಆಟೋ ಚಾಲಕ ಚಂದ್ರು ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ. ಈ ಅವಘಡದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.
ಈ ಬೆಂಕಿ ಅವಘಡದಲ್ಲಿ ಅನಾಹುತ ತಪ್ಪಿಸಲು ತೆರಳಿದ ನೆರೆ ಮನೆ ನಿವಾಸಿ ಮೊಹಮ್ಮದ್ ಉರ್ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಸೂಕ್ತ ಸಮಯಕ್ಕೆ ಬಂದು ಭಾರಿ ಅನಾಹುತ ತಪ್ಪಿಸಿದ್ದಾರೆ.
ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಮೆಕ್ಕೆಜೋಳ ನಾಶ