AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಬೆಂಜ್ ಕಾರು; ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು

ಶಿವಮೊಗ್ಗದ ಮುರಳಿ ಎಂಬವರಿಗೆ ಸೇರಿದ ಬೆಂಜ್​ ಕಾರು ಅಗ್ನಿಗೆ ಆಹುತಿ ಆಗಿದೆ. ಗುಳಿಗುಳಿ ಶಂಕರ ದೇಗುಲದಿಂದ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಅದೃಷ್ಟವಶಾತ್​ ಕಾರಿನಲ್ಲಿ ಇದ್ದ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಬೆಂಜ್ ಕಾರು; ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು
ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಬೆಂಜ್ ಕಾರು
TV9 Web
| Updated By: ganapathi bhat|

Updated on:Aug 15, 2021 | 6:18 PM

Share

ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಬೆಂಜ್ ಕಾರ್ ಒಂದು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಸಮೀಪ ನಡೆದಿದೆ. ಆಕಸ್ಮಿಕ ಬೆಂಕಿಯಿಂದಾಗಿ ಕಾರು ರಸ್ತೆಯಲ್ಲೇ ಹೊತ್ತಿ ಉರಿದಿದೆ. ಶಿವಮೊಗ್ಗದ ಮುರಳಿ ಎಂಬವರಿಗೆ ಸೇರಿದ ಬೆಂಜ್​ ಕಾರು ಅಗ್ನಿಗೆ ಆಹುತಿ ಆಗಿದೆ. ಗುಳಿಗುಳಿ ಶಂಕರ ದೇಗುಲದಿಂದ ಹಿಂದಿರುಗುವಾಗ ಘಟನೆ ಸಂಭವಿಸಿದೆ. ಅದೃಷ್ಟವಶಾತ್​ ಕಾರಿನಲ್ಲಿ ಇದ್ದ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದಾರೆ. ರಿಪ್ಪನ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಸತೀಶ್ ರೆಡ್ಡಿ ಕಾರ್​ಗಳಿಗೆ ಬೆಂಕಿ ಪ್ರಕರಣ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರ ವಿಶೇಷ ತಂಡ ಆಗಸ್ಟ್ 13ರಂದು ಬಂಧಿಸಿತ್ತು. ಗಾರ್ವೆಬಾವಿಪಾಳ್ಯದ ಶಿವಕುಮಾರ, ಸಾಗರ್ ಮತ್ತು ನವೀನ್ ಎಂಬುವವರೇ ಬಂಧಿತರು. ಪೊಲೀಸರು ಬಂಧಿತರಿಂದ ಬಜಾಜ್ ಪ್ಲ್ಯಾಟಿನಾ ಬೈಕ್ ಕೆಎ 51, ಎಲ್ 4411 ಜಪ್ತಿ ಮಾಡಿದ್ದರು. ಆರೋಪಿಗಳು ಬಡವರು ಮತ್ತು ಶ್ರೀಮಂತರು ಎನ್ನುವ ಕಾರಣಕ್ಕೆ ಕೃತ್ಯವೆಸಗಿದ್ದರು ಎಂದು ಹೇಳಲಾಗಿತ್ತು. ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಿದ್ದರು. ದೊಡ್ಡವರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಸತೀಶ್ ರೆಡ್ಡಿ ಮನೆ ಆವರಣಕ್ಕೆ ನುಗ್ಗಿ ಕಾರಿಗೆ ಬೆಂಕಿ ಹಚ್ಚಿದ್ದರು ಎಂದು ಮೂಲಗಳು ತಿಳಿಸಿತ್ತು. ಆರೋಪಿಗಳು ಮೂವರು ಬಡವರಾಗಿದ್ದು, ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳನ್ನು ತಿರುಗುವುದನ್ನು ನೋಡಿ ಕೋಪಗೊಂಡಿದ್ದರು. ಇದೇ ಕಾರಣಕ್ಕೆ ದೊಡ್ಡವರಿಗೆ ಬುದ್ದಿ ಕಳಿಸಬೇಕು ಎಂಬ ಕಾರಣಕ್ಕೆ ಕಾರಿಗೆ ಬೆಂಕಿ ಇಟ್ಟಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.

ಈಕುರಿತು ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಆಗಸ್ಟ್ 11ರ ಮಧ್ಯರಾತ್ರಿ ಆರೋಪಿಗಳು ಕೃತ್ಯವೆಸಗಿದ್ದರು. ಶಾಸಕರ ಮನೆ ಆವರಣದಲ್ಲಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ತೆರಳಿದ್ದರು. ಸ್ಥಳ ಪರಿಶೀಲನೆ ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಕಲಾಗಿತ್ತು. ಪ್ರಕರಣ ಸಂಬಂಧ 5 ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿಟಿವಿ ದೃಶ್ಯ ಮಾತ್ರ ಸಿಕ್ಕಿತ್ತು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಸಂಜೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆಗ್ನೇಯ ಡಿಸಿಪಿ ಜೋಶಿ ನೇತೃತ್ವದಲ್ಲಿ ಆರೋಪಿಗಳ ಬಂಧಿಸಲಾಗಿದೆ. ಅರೋಪಿಗಳ ಪೈಕಿ ಸತೀಶ್ ರೆಡ್ಡಿ ಮನೆ ಕಾಂಪೌಂಡ್ ಒಳಗೆ ಬಂದು ಬೆಂಕಿ ಇಟ್ಟವನು ಒಬ್ಬ ಮಾತ್ರ, ಆತನೇ ಸಾಗರ್. ಉಳಿದ ಇಬ್ಬರು ಗೇಟ್ ಹೊರಗೆ ಇದ್ದಾರೆ. ಸಾಗರ್ ಎಂಬ ಬಂಧಿತ ಆರೋಪಿ ಮೂಲತಃ ನೇಪಾಳದವ, ಹುಟ್ಟಿಬೆಳೆದಿರೋದು ಬೆಂಗಳೂರಿನಲ್ಲಿ ಎಂದು ಕಮಲ್ ಪಂತ್ ತಿಳಿಸಿದ್ದರು.

ಇದನ್ನೂ ಓದಿ: ‘ಅಂದು ನನ್ನ ಜೀವನ ಮುಗಿಯಿತು ಅಂದುಕೊಂಡಿದ್ದೆ’; ಭೀಕರ ಅಪಘಾತ ನೆನಪಿಸಿಕೊಂಡ ಮಂಜು ಪಾವಗಡ

ಕೊಪ್ಪಳದಲ್ಲಿ ಎರಡು ಲಾರಿಗಳ ನಡುವೆ ಅಪಘಾತ; ಲಾರಿಗಳ ನಡುವಲ್ಲಿ ಸಿಕ್ಕಿಕೊಂಡ ನಾಲ್ವರು

Published On - 6:08 pm, Sun, 15 August 21