ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಮಿ ಕಂಪಿಸಿದೆ. ಶನಿವಾರ ರಾತ್ರಿ 8.28ರಲ್ಲಿ ಚೆಂಬು ಗ್ರಾಮದಲ್ಲಿ ಭೂ ಕಂಪನವಾಗಿದೆ. ಇದರೊಂದಿಗೆ ಗ್ರಾಮದಲ್ಲಿ ಇಂದು ಒಂದೇ ದಿನ 3 ಸಲ ಭೂಮಿ ಕಂಪಿಸಿದೆ. ಪೆರಾಜೆ, ಕರಿಕೆ ಸೇರಿದಂತೆ ಹಲವು ಗ್ರಾಮಗಳಲ್ಲೂ ಕಂಪನದ ಅನುಭವವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲೂ ಕಂಪನವಾಗಿದ್ದು ಗೂನಡ್ಕ, ಕಲ್ಲುಗುಂಡಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ.
ಇಂದು (ಜುಲೈ 2) ಚೆಂಬು ಗ್ರಾಮದಲ್ಲಿ ಮಧ್ಯಾಹ್ನ 1.24ರ ಸುಮಾರಿಗೆ ಮತ್ತೆ ಭೂಕಂಪನ ಸಂಭವಿಸಿದೆ. ಕಳೆದ ಒಂದು ವಾರದಲ್ಲಿ 6 ಬಾರಿ ಭೂಮಿ ಕಂಪಿಸಿತ್ತು. ಮಡಿಕೇರಿ ತಾಲ್ಲೂಕಿನ ಸಂಪಾಜೆ, ಚೆಂಬು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲಿ ಕೂಡ ಭೂಮಿ ಕಂಪಿಸಿದ ಅನುಭವವಾಗಿದೆ.ಜಿಲ್ಲೆಯಲ್ಲಿ ನಿರಂತರವಾಗಿ ಭೂಕಂಪನ ಆಗುತ್ತಿದ್ದು, ಜನರಿಗೆ ಆತಂಕ ಹೆಚ್ಚಾಗುತ್ತಿದೆ.
2018ರಲ್ಲಿ ಜಿಲ್ಲೆಯಲ್ಲಿ ಇದೇ ರೀತಿ ಭೂಕಂಪನ ಆಗಿತ್ತು. ಅದೇ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಈ ಬಾರಿಯೂ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಜನರಿಗೆ ಭಯ ಶುರುವಾಗಿದೆ. ಜೂನ್ 28ರಂದು ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ.
ಇದಕ್ಕೂ ಮೊದಲು ಅಂದರೆ ವಾರದ ಹಿಂದೆ ಜಿಲ್ಲೆಯಲ್ಲಿ ಆಗಿದ್ದ ಭೂಕಂಪನ ದೃಢವಾಗಿದೆ. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಕೊಡಗು-ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಮನೆ ಗೋಡೆಗಳು ಬಿರುಕು ಬಿಟ್ಟಿದ್ದವು. ಜೂನ್ 28 ರ ಬೆಳಗ್ಗೆ 7.45 ಕ್ಕೆ ಭೂಮಿ ಕಂಪಿಸಿತ್ತು. ಕಂಪನದ ತೀವ್ರತೆಗೆ ಮನೆಯ ಕಂಬಗಳು ಅಲುಗಾಡಿವೆ. ಜೂನ್ 28 ರಂದು ಮಡಿಕೇರಿ ಲೂಕಿನ ಕರಿಕೆ, ಪೆರಾಜೆ ಭಾಗಮಂಡಲ ಹಾಗೂ ಸಂಪಾಜೆ ಕರ್ಣಂಗೇರಿ ಸೇರಿ ಹಲವೆಡೆ ಭೂಕಂಪನ ಅನುಭವಾಗಿದೆ. ಇನ್ನು ಮಡಿಕೇರಿ ನಗರದಲ್ಲೂ ಲಘು ಭೂಕಂಪನ ಆಗಿತ್ತು.
ಅಣಶಿ ಗಟ್ಟದಲ್ಲಿ ಗುಡ್ಡ ಕುಸಿತ
ಕಾರವಾರ ತಾಲೂಕಿನ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕಳೆದ 2 ದಿನದಿಂದ ಸುರಿದ ಮಳೆಗೆ ಗುಡ್ಡ ಕುಸಿಯುತ್ತಿದೆ. ಗುಡ್ಡ ಕುಸಿದು ರಸ್ತೆಯ ಮೇಲೆ ಕಲ್ಲುಗಳು ಉರುಳುತ್ತಿವೆ.
Published On - 9:06 pm, Sat, 2 July 22