ಕೊಡಗಿನಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ! ಸೇನಾಧಿಕಾರಿಗಳಿಂದ ಡಿಸಿ, ಎಸ್​ಪಿಗೆ ಪತ್ರ

| Updated By: sandhya thejappa

Updated on: Jun 19, 2022 | 1:36 PM

ಲಿಂಗರಾಜು ಊರಿನ ಜನರಿಂದ ಇನ್ಸೂರೆನ್ಸ್ ಮಾಡಿಸಿದ್ದರು. ಆದರೆ ಕಾರಣಾಂತರಗಳಿಂದ ಇನ್ಸೂರೆನ್ಸ್ ಸಂಸ್ಥೆ ಮುಚ್ಚಿ ಹೋಗಿದೆ. ಹೀಗಾಗಿ ಇನ್ಸೂರೆನ್ಸ್ ಹಣ ಹಿಂದಿರುಗಿಸುವಂತೆ ಊರಿನ ಜನರು ಆಗ್ರಹಿಸುತ್ತಿದ್ದಾರೆ.

ಕೊಡಗಿನಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ! ಸೇನಾಧಿಕಾರಿಗಳಿಂದ ಡಿಸಿ, ಎಸ್​ಪಿಗೆ ಪತ್ರ
ಯೋಧ ಸಂಜಯ್ ಕುಟುಂಬ
Follow us on

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಗ್ರಾಮಸ್ಥರು (Villagers) ಯೋಧನ ಕುಟುಂಬಕ್ಕೆ ಬಹಿಷ್ಕಾರ (Ostracism) ಹಾಕಿದ್ದಾರೆ. ಊರಿನ ಯಾವುದೇ ಹಬ್ಬ- ಹರಿದಿನ, ಕಾರ್ಯಕ್ರಮಕ್ಕೆ ಬಾರದಂತೆ ಯೋಧನ ಕುಟುಂಬಕ್ಕೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಯೋಧನ ಮನೆಯ ಕಾರ್ಯಕ್ರಮಕ್ಕೂ ಬೇರೆಯವರು ಹೋಗದಂತೆ ನಿಷೇಧ ಹೇರಿದ್ದಾರೆ. ಕೂರ್ಗ್ ರೆಜಿಮೆಂಟ್​ನಲ್ಲಿ ಯೋಧನಾಗಿರುವ ಸಂಜಯ್ ಸದ್ಯ ಪಂಜಾಬ್ನಲ್ಲಿ ಕರ್ತವ್ಯದಲ್ಲಿದ್ದಾರೆ. ಯೋಧನ ತಂದೆ ಪಿಎಸಿಎಲ್ ಇನ್ಸೂರೆನ್ಸ್ ಕಂಪೆನಿ ಏಜೆಂಟ್ ಆಗಿದ್ದಾರೆ.

ಲಿಂಗರಾಜು ಊರಿನ ಜನರಿಂದ ಇನ್ಸೂರೆನ್ಸ್ ಮಾಡಿಸಿದ್ದರು. ಆದರೆ ಕಾರಣಾಂತರಗಳಿಂದ ಇನ್ಸೂರೆನ್ಸ್ ಸಂಸ್ಥೆ ಮುಚ್ಚಿ ಹೋಗಿದೆ. ಹೀಗಾಗಿ ಇನ್ಸೂರೆನ್ಸ್ ಹಣ ಹಿಂದಿರುಗಿಸುವಂತೆ ಊರಿನ ಜನರು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಯಡೂರು ಗ್ರಾಮಾಭಿವೃದ್ಧಿ ಸಮಿತಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದೆ. ಸದ್ಯ ಯೋಧ ಸಂಜಯ್ ಸೇನೆಯಲ್ಲಿ ಹಿರಿಯಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸೇನಾಧಿಕಾರಿಗಳು ಕೊಡಗು ಡಿಸಿ ಮತ್ತು ಎಸ್ಪಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ರಿಲೀಸ್​ ಸಮಯದಲ್ಲಿ ಸುದೀಪ್​ಗೆ ಸ್ಟ್ರೆಸ್​ ಇದೆಯಾ? ನೇರ ಉತ್ತರ ನೀಡಿದ ಕಿಚ್ಚ

ಇದನ್ನೂ ಓದಿ
ಪಿಎಸ್ಐ ಹಗರಣದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ; ಪರೀಕ್ಷೆಯ ಒಂದೊಂದು ವಿಧಾನಕ್ಕೆ ಒಂದೊಂದು ರೇಟ್ ಫಿಕ್ಸ್!
NEET PG 2022: ನೀಟ್ ಪರೀಕ್ಷೆ ಮುಂದೂಡಲು ಆರೋಗ್ಯ ಸಚಿವರಿಗೆ ಐಎಂಎ ಮನವಿ
Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್
ಬೆಂಗಳೂರಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ! ಕರ್ನಾಟಕದಲ್ಲಿ ಇಂದಿನಿಂದ 4 ದಿನ ಮಳೆ ಮುಂದುವರೆಯುವ ಸಾಧ್ಯತೆ

ಮನೆಯ ಕಾರ್ಮಿಕರಿಗೂ ಬಹಿಷ್ಕಾರ:
ಯೋಧನ ಕುಟುಂಬದ ಜೊತೆ ಅವರ ಮನೆ ಕೆಲಸ ಮಾಡುವ ಮನೆಯ ಕಾರ್ಮಿಕರಿಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಜೋಯಪ್ಪ, ರಾಮಣ್ಣ ಎಂಬುವರಿಗೆ ಬಹಿಷ್ಕಾರ ಹಾಕಿದ್ದಾರೆ. ರಾಮಣ್ಣ ಗ್ರಾ.ಪಂ ಸದಸ್ಯೆಯ ಪತಿ. ಯೋಧನ ಮನೆಯಲ್ಲಿ ಕೆಲಸ ಮಾಡದಂತೆ ಗ್ರಾಮ ಸಮಿತಿ ತಾಕೀತು ಮಾಡಿತ್ತು. ಹೀಗಿದ್ದೂ ಕಾರ್ಮಿಕರು ಯೋಧನ ಮನೆಯಲ್ಲಿ ‌ಕೆಲಸ‌ ಮುಂದುವರಿಸಿದ್ದರು. ಹಾಗಾಗಿ ಗ್ರಾಮ‌ ಸಮಿತಿ ಕಾರ್ಮಿಕರಿಬ್ಬರಿಗೆ ಬಹಿಷ್ಕಾರ ಹಾಕಿದೆ. ಕಾರ್ಮಿಕರಿಗೆ ಎಲ್ಲಿಯೂ ಕೆಲಸ ಕೊಡದಂತೆ ಸಮಿತಿ ಆದೇಶ ನೀಡಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Sun, 19 June 22