ಕೊಡಗು: ಅಪಘಾತಕ್ಕೆ ಸಿಲುಕಿ ಕಾಡು ಬೆಕ್ಕು ರಸ್ತೆಯಲ್ಲೇ ಮೃತಪಟ್ಟಿರುವ ಮನಕಲುಕುವ ಘಟನೆ ಮಡಿಕೇರಿಯ ಆರ್ಮಿ ಕ್ಯಾಂಟೀನ್ ಬಳಿ ನಡೆದಿದೆ. ಈ ಕಾಡು ಬೆಕ್ಕು ಚಿರತೆಯನ್ನು ಹೋಲುತ್ತದೆ. ನೋಡಲು ಮರಿ ಚಿರತೆಯಂತೆ ಕಾಣುತ್ತದೆ. ಆದರೆ ನಿನ್ನೆ ರಾತ್ರಿ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟಿದೆ.
ಮೃತ ಕಾಡು ಬೆಕ್ಕು ನೋಡಿದ ಜನ ಮರಿ ಚಿರತೆ ಸತ್ತಿದೆ ಎಂದು ಆತಂಕಕ್ಕೀಡಾಗಿದ್ದರು ಆದರೆ ಅದು ಚಿರತೆ ಮರಿಯಲ್ಲ, ದೊಡ್ಡ ಗಾತ್ರದ ಕಾಡು ಬೆಕ್ಕು ಎಂದು ಮಡಿಕೇರಿ ಡಿಸಿಎಫ್ ಪ್ರಭಾಕರನ್ ಸ್ಪಷ್ಟಪಡಿಸಿದ್ದಾರೆ. ನೋಡಲು ಮುದ್ದು ಮದ್ದಾಗಿರುವ ಕಾಡು ಬೆಕ್ಕು ವಾಹನಕ್ಕೆ ಸಿಲುಕಿ ಮೃತಪಟ್ಟಿದೆ. ವಾಹನ ಸವಾರರು ರಾತ್ರಿ ವೇಳೆ ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ಈ ರೀತಿಯ ಘಟನೆಗಳು ಸಾಮಾನ್ಯವಾಗಿವೆ.