ಆಕೆಗಿನ್ನೂ ಹದಿವಯಸ್ಸು… ಹುಚ್ಚು ಕೋಡಿ ಪ್ರೀತಿಗೆ ಬಿದ್ದಿದ್ದಳು. ಪ್ರೀತಿಗೆ ಬಿದ್ದವಳು ಪೋಷಕರನ್ನ ಧಿಕ್ಕರಿಸಿ ಓಡಿ ಹೋಗಿ ಮದುವೆಯನ್ನೂ ಆಗಿದ್ದಳು. ಇನ್ನೇನು ತನ್ನ ಇನಿಯನ ಬಾಹುಬಂಧನದಲ್ಲಿ ಬೆಚ್ಚಗೆ ಮಲಗಿ ಹೊಸ ಬದುಕನ್ನು ಎಂಜಾಯ್ ಮಾಡುವ ಕನಸು ಕಾಣ್ತಾ ಇದ್ಳು. ಆದ್ರೆ ವಿವಾಹವಾಗಿ ಕೇವಲ ನಾಲ್ಕೇ ದಿನಕ್ಕೆ ಪತಿಯ ಮನೆಯಲ್ಲೇ ನಿಗೂಢವಾಗಿ ಹೆಣವಾಗಿ ಹೋಗಿದ್ದಾಳೆ. ಈಕೆಯ ಸಾವಿನ ಸುತ್ತ ನೂರಾರು ಅನುಮಾನಗಳ ಹುತ್ತ ಎದ್ದಿದೆ. ಎಸ್ಸಿ ಜಾತಿಗೆ ಸೇರಿದ್ದೇ ಆಕೆಗೆ ಮುಳುವಾಯ್ತಾ ಅನ್ನೋ ಡೌಟು ಎಲ್ಲರನ್ನ ಕಾಡ್ತಾ ಇದೆ. ಕೇವಲ ಮೂರು ದಿನಗಳ ಹಿಂದಷ್ಟೇ ವಿವಾಹ ಆಗಿತ್ತು… ತನ್ನ ಇನಿಯನ ಜೊತೆಗೆ ನಡೆದ ವಿವಾಹಕ್ಕೆ ಕೈತುಂಬಾ ಹಾಕಿದ್ದ ಕಪ್ಪು ಗಾಜಿನ ಬಳೆಗಳನ್ನ ಕೂಡ ಆಕೆ ಇನ್ನೂ ಬಿಚ್ಚಿರಲಿಲ್ಲ. ಆದ್ರೆ ಅಷ್ಟೊತ್ತಿಗಾಗ್ಲೇ ನಡೆದುಹೋಗಿದೆ ಘನಘೋರ ದುರಂತ. ಹೌದು ಹೀಗೆ ಹೆಣವಾಗಿ ಮಲಗಿರೋಳು ರಕ್ಷಿತಾ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪದ ಆರನೇ ಹೊಸಕೋಟೆ ಗ್ರಾಮದ ನಿವಾಸಿ.
ರಕ್ಷಿತಾ ಶಿರಂಗಾದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ. ಈಕೆಗೆ ಅದೇ ಊರಿನ ಹೇಮಂತ ಎಂಬಾತನ ಜೊತೆ ಲವ್ ಆಗ್ಬಿಟ್ಟಿತ್ತು. ಇಬ್ಬರಿಗೂ ಹದಿವಯಸ್ಸು… ಯುವಕ ಹೇಮಂತ್ ಮೇಲ್ಜಾತಿಯವನಾದ್ರೆ ಯುವತಿ ಅಕ್ಷಿತಾ ಕೆಳಜಾತಿಯವಳಂತೆ. ಆದ್ರೂ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಇನ್ನು ತುಂಬಾ ಟೈಮ್ ಕಾಯಕ್ಕಾಗಲ್ಲಾ ಅಂತ ಡಿಸೈಡ್ ಮಾಡಿದ ಇವರಿಬ್ಬರೂ ಕಳೆದ ಶುಕ್ರವಾರ ಸ್ಥಳೀಯ ದೇವಸ್ಥಾನಕ್ಕೆ ತೆರಳಿ ಕದ್ದು ಮುಚ್ಚಿ ವಿವಾಹವಾಗಿದ್ದಾರೆ.
ಅಲ್ಲಿಂದ ಹೇಮಂತ್ ಈಕೆಯನ್ನ ನೇರವಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ರಂತೆ. ಆದ್ರೆ ನಿನ್ನೆ ಸಂಜೆ ರಕ್ಷಿತಾಳ ಪೋಷಕರಿಗೆ ಕರೆ ಮಾಡಿದ ಸ್ಥಳೀಯರು ರಕ್ಷಿತಾ ಮನೆಯಲ್ಲಿ ಪ್ರಜ್ಞೆ ಇಲ್ಲದೆ ಬಿದ್ದು ಹೋಗಿದ್ದಾಳೆ ಎಂದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಷಕರಿಗೆ ಕಂಡಿದ್ದು ಘನಘೋರ. ತೀವ್ರ ರಕ್ತಸ್ರಾವದಿಂದ ರಕ್ಷಿತಾ ಕುಸಿದುಬಿದ್ದಿದ್ದಳು. ಮರ್ಮಾಂಗದಿಂದ ವಿಪರೀತ ರಕ್ತಸ್ರಾವವಾಗಿತ್ತಂತೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆತಂದಾಗ ಆಕೆ ಆದಾಗಲೇ ಸತ್ತು ಹೋಗಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ.
ರಕ್ಷಿತಾಳ ಪೋಷಕರು ಹೇಳುವ ಪ್ರಕಾರ ಜಾತಿ ಕಾರಣಕ್ಕಾಗಿ ಹೇಮಂತನ ಪೋಷಕರೇ ರಕ್ಷಿತಾಳನ್ನ ಕೊಲೆ ಮಾಡಿದ್ದಾರೆ. ಮರ್ಮಾಂಗಕ್ಕೆ ಘಾಸಿಗೊಳಿಸಿ ಹತ್ಯೆ ಮಾಡಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ಇತ್ತ ಪತ್ನಿ ಸಾವನ್ನಪ್ಪುತ್ತಲೇ ಪತಿ ಹೇಮಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿ ಆತನನ್ನ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಪೊಲೀಸರಿಗೆ ನೂರಾರು ಪ್ರಶ್ನೆಗಳು ಕಾಡಲಾರಂಭಿಸಿವೆ. ಇದು ಕೊಲೆಯೋ ಅಥವಾ ಬೇರೆಯದ್ದೇ ಕಾರಣದಿಂದ ಆಕೆ ಸಾವನ್ನಪ್ಪಿರಬಹುದಾ ಅಂತ ತನಿಖೆ ನಡೆಸ್ತಾ ಇದ್ದಾರೆ. ಸ್ಥಳೀಯರು ಕೆಲವರು ಹೇಳುವ ಪ್ರಕಾರ ಋತುಮತಿಯಾಗಿದ್ದ ರಕ್ಷಿತಾ ಜೊತೆ ಅತಿಯಾಗಿ ಮಿಲನ ನಡೆಸಿದ್ದರಿಂದಲೇ ಆಕೆಗೆ ಅತಿಯಾಗಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ.
ಓದುತ್ತಾ ಆಟವಾಡುತ್ತಾ ಬೆಳೆಯುವ ವಯಸ್ಸಲ್ಲಿ ಹುಚ್ಚು ಕೋಡಿ ಪ್ರೀತಿಗೆ ಬಿದ್ದು ಇದೀಗ ತನ್ನ ಜೀವವನ್ನೇ ಅನ್ಯಾಯವಾಗಿ ಕಳೆದುಕೊಂಡಿದ್ದಾಳೆ. ಇತ್ತ ಪೋಷಕರು ತಮ್ಮ ಮುದ್ದಿನ ಮಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ಅತ್ತ ಹಠಕ್ಕೆ ಬಿದ್ದು ವಿವಾಹವಾದ ಪತಿ, ತನ್ನ ನಂಬಿ ಬಂದ ಪತ್ನಿಯ ಬಾಳಿಗೆ ತಾನೇ ಕೊಳ್ಳಿ ಇಟ್ಟು ಇದೀಗ ಆಸ್ಪತ್ರೆ ಸೇರಿದ್ದಾನೆ. ಆದ್ರೆ ಅತ್ತ ರಕ್ಷಿತಾ ಯಾಕೆ ಸತ್ತಳು ಅನ್ನೋದು ಮಾತ್ರ ಪೋಸ್ಟ್ ಮಾರ್ಟಂ ವರದಿಯಿಂದಲೇ ಬಹಿರಂಗವಾಗಬೇಕಿದೆ.
ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು