ಕೊಡಗು: ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಯ್ನರಿ ಜುಮಾ ಮಸೀದಿ ರಸ್ತೆಯಲ್ಲಿ ಪ್ರತಿದಿನ ನೂರಾರು ಜನರು ಓಡಾಡುತ್ತಾರೆ. ಆದರೆ ಗ್ರಾಮ ಪಂಚಾಯಿತಿ ಈ ರಸ್ತೆಯನ್ನು ದಶಕಗಳಿಂದ ದುರಸ್ತಿಗೊಳಿಸದೆ ಹಾಗೇ ನಿರ್ಲಕ್ಷ್ಯ ತೋರಿತ್ತು. ಊರಿನ ವೃದ್ಧರೂ, ಗರ್ಭಿಣಿಯರು, ರೋಗಿಗಳು ಈ ರಸ್ತೆಯಲ್ಲಿ ಸಂಚರಿಸುವಂತೆಯೇ ಇರಲಿಲ್ಲ. ವಾಹನಗಳಂತೂ ಈ ರಸ್ತೆಯಲ್ಲಿ ತೆರಳಿದರೆ ಸೀದಾ ಗ್ಯಾರೇಜ್ಗೆ
ಸೇರಬೇಕಿತ್ತು. ದ್ವಿಚಕ್ರ ವಾಹನ ಸವಾರರಂತೂ ಇಲ್ಲಿ ಉರುಳಿ ಬಿದ್ದಿದ್ದಕ್ಕೆ ಲೆಕ್ಕವೇ ಇಲ್ಲ. ಹೀಗಾಗಿ ಬೇಸತ್ತ ಯುವಕರೇ ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ.
ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಯ್ನರಿ ಜುಮಾ ಮಸೀದಿ ರಸ್ತೆಯ ರಸ್ತೆಯನ್ನು ದುರಸ್ತಿಪಡಿಸುವಂತೆ ಊರಿನವರು ಬಹಳಷ್ಟು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತಕ್ಕೂ ಹಲವು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಕೂಡ ಕ್ಯಾರೇ ಅಂದಿಲ್ಲ. ಹಾಗಾಗಿ ಬೇಸತ್ತ ಗ್ರಾಮದ ಯುವಕರು ಗುದ್ದಲಿ ಹಿಡಿದು ರಸ್ತೆ ದುರಸ್ತಿ ಮಾಡಿದ್ದಾರೆ.
ಗುಂಡಿ ಬಿದ್ದ ರೆಸ್ತೆಗೆ ಮಣ್ಣು ತುಂಬಿಸಿ, ಸದ್ಯ ವಾಹನ ಓಡಾಡಲು ಅನುಕೂಲವಾಗುವ ಹಾಗೆ ಮಾಡಿದ್ದಾರೆ. ಇಷ್ಟಾದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಸ್ಥಳಕ್ಕೆ ಬಂದು ಸಹಾಯ ಮಾಡಲಿಲ್ಲ ಅಂತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರೂ ಜನರ ಸೇವೆ ಮಾಡಲು ಸಿದ್ಧರಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ಬೆಳಗಾವಿಯಲ್ಲಿ ಆಸ್ತಿಗಾಗಿ ಸೋದರನನ್ನೇ ಕಟ್ಟಡದಿಂದ ತಳ್ಳಿ ಕೊಲ್ಲಲು ಯತ್ನ; ವೈರಲ್ ವಿಡಿಯೋ ಇಲ್ಲಿದೆ
(youth have been working on the road repair work of the Kakkabbe gram panchayat)