ಪಶ್ಚಿಮ ಬಂಗಾಳದಲ್ಲಿ ಅರ್ಜುನ್ ಸಿಂಗ್ ನಿವಾಸದ ಹೊರಗೆ ಮತ್ತೊಂದು ಬಾಂಬ್ ಸ್ಫೋಟ; ಟಿಎಂಸಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದ ಬಿಜೆಪಿ ಸಂಸದ

West Bengal: ಇದೊಂದು ಯೋಜಿತ ದಾಳಿ. ಟಿಎಂಸಿ ಇದರ ಹಿಂದಿದೆ ಅವರು ನನ್ನನ್ನು ಮತ್ತು ನನ್ನ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದು ಬಂಗಾಳದಲ್ಲಿ ಗೂಂಡಾರಾಜ್ ಎಂದು ಸಿಂಗ್ ಆರೋಪಿಸಿದ್ದಾರೆ. ಟಿಎಂಸಿಯ ಉತ್ತರ 24 ಪರಗಣಗಳ ಅಧ್ಯಕ್ಷ ಪಾರ್ಥ ಭೌಮಿಕ್ ಈ ಆರೋಪಗಳನ್ನು ಅಲ್ಲಗಳೆದರು ಮತ್ತು ಅವರ ಮನೆಯ ಹೊರಗಿನ ಸ್ಫೋಟಗಳಿಗೆ ಬಿಜೆಪಿ ಸಂಸದರೇ ಕಾರಣ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಅರ್ಜುನ್ ಸಿಂಗ್ ನಿವಾಸದ ಹೊರಗೆ ಮತ್ತೊಂದು ಬಾಂಬ್ ಸ್ಫೋಟ; ಟಿಎಂಸಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದ ಬಿಜೆಪಿ ಸಂಸದ
ಅರ್ಜುನ್ ಸಿಂಗ್
TV9kannada Web Team

| Edited By: Rashmi Kallakatta

Sep 14, 2021 | 5:25 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಅರ್ಜುನ್ ಸಿಂಗ್ (Arjun Singh) ನಿವಾಸದ ಮೇಲೆ ಎರಡು ಬಾಂಬ್‌ಗಳನ್ನು ಎಸೆದ ಕೆಲವು ದಿನಗಳ ನಂತರ ಮಂಗಳವಾರ ಬೆಳಿಗ್ಗೆ ಬರಾಕ್‌ಪೋರ್ ಸಂಸದರ ಮನೆಯ ಹೊರಗೆ ಮತ್ತೊಂದು ಸ್ಫೋಟ ಸಂಭವಿಸಿದೆ. ತೃಣಮೂಲ ಕಾಂಗ್ರೆಸ್ (TMC) ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.  ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿಯ ಪ್ರಕಾರ ಉತ್ತರ 24 ಪರಗಣದ ಭಟ್ಪಾರದಲ್ಲಿರುವ ಸಿಂಗ್ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಖಾಲಿ ಜಾಗದಲ್ಲಿ ಬೆಳಗ್ಗೆ 9:10 ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿದೆ. ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅಲ್ಲಿ ಇದ್ದಾರೆ” ಎಂದು ಅವರು ಹೇಳಿದರು.

ಸೆಪ್ಟೆಂಬರ್ 8 ರಂದು ಬಿಜೆಪಿ ಸಂಸದರ ನಿವಾಸದ ಗೇಟ್ ಭಾಗಶಃ ಹಾನಿಗೊಳಗಾದ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಹಿಸಿಕೊಂಡಿದೆ. ತೃಣಮೂಲ ಕಾಂಗ್ರೆಸ್ ನನ್ನನ್ನು ನನ್ನ ಕುಟುಂಬ ಸದಸ್ಯರನ್ನು ಮತ್ತು ನನ್ನ ಹತ್ತಿರದವರನ್ನು ಕೊಲ್ಲಲು ಈ ದಾಳಿಯನ್ನು ಯೋಜಿಸಿತ್ತು ಎಂದು ಸಿಂಗ್ ಹೇಳಿದ್ದಾರೆ.

ಇದೊಂದು ಯೋಜಿತ ದಾಳಿ. ಟಿಎಂಸಿ ಇದರ ಹಿಂದಿದೆ ಅವರು ನನ್ನನ್ನು ಮತ್ತು ನನ್ನ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದು ಬಂಗಾಳದಲ್ಲಿ ಗೂಂಡಾರಾಜ್ ಎಂದು ಸಿಂಗ್ ಆರೋಪಿಸಿದ್ದಾರೆ. ಟಿಎಂಸಿಯ ಉತ್ತರ 24 ಪರಗಣಗಳ ಅಧ್ಯಕ್ಷ ಪಾರ್ಥ ಭೌಮಿಕ್ ಈ ಆರೋಪಗಳನ್ನು ಅಲ್ಲಗಳೆದರು ಮತ್ತು ಅವರ ಮನೆಯ ಹೊರಗಿನ ಸ್ಫೋಟಗಳಿಗೆ ಬಿಜೆಪಿ ಸಂಸದರೇ ಕಾರಣ ಎಂದು ಹೇಳಿದರು.

ಸೆಪ್ಟೆಂಬರ್ 8 ರಂದು ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸಿಂಗ್ ಅವರ ಮುಂಭಾಗದ ಗೇಟ್ ಮೇಲೆ ಬಾಂಬ್ ಗಳನ್ನು ಎಸೆದು ಭೀತಿ ಹುಟ್ಟಿಸಿದ್ದರು. ಎರಡು ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಪೋಲಿಸ್ ವರದಿಯಲ್ಲಿ ಹೇಳಿದೆ. ವರದಿ ಪ್ರಕಾರ ಸಂಸದರ ನಿವಾಸದ ಗೇಟ್‌ನ ಮೇಲೆ ಮತ್ತು ಇನ್ನೊಂದು ನಿವಾಸದ ಎದುರು ಭಾಗದಲ್ಲಿರುವ ಕೇಂದ್ರೀಯ ಪಡೆಯ ಬ್ಯಾರಕ್‌ನ ಮೇಲೆ ಎಸೆಯಲಾಗಿದೆ.

“ಯಾರಿಗೂ ಗಾಯವಾಗದಿದ್ದರೂ, ಬ್ಯಾರಕ್‌ನ ಗೇಟ್ ಮತ್ತು ಭಾಗವು ಹಾನಿಗೊಳಗಾಗಿದೆ. ಅಪರಾಧಿಗಳನ್ನು ಗುರುತಿಸಲು ನಾವು ಸಿಸಿಟಿವಿ ದೃಶ್ಯಗಳನ್ನು ನೋಡುತ್ತಿದ್ದೇವೆ. ಎಂಪಿಎ ಭದ್ರತೆಯನ್ನು ಕೂಡ ಬಿಗಿಗೊಳಿಸಲಾಗಿದೆ” ಎಂದು ಬರಾಕ್‌ಪೋರ್ ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಬಿಜೆಪಿ ಸಂಸದರ ಮನೆ ಮೇಲೆ ನಡೆದ ದಾಳಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್ ಖಂಡಿಸಿದ್ದರು ಮತ್ತು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕೋರಿದ್ದರು. ರಾಜ್ಯದಲ್ಲಿ ಹಿಂಸಾತ್ಮಕ ಅಪರಾಧಗಳು ನಿರಂತರವಾಗಿ ಮುಂದುವರಿಯುತ್ತಿವೆ ಎಂದೂ ಅವರು ಹೇಳಿದ್ದರು.

“ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕ ಹಿಂಸಾಚಾರವು ಕಡಿಮೆಯಾಗುವ ಲಕ್ಷಣಗಳಿಲ್ಲ. ಸಂಸತ್ ಸದಸ್ಯರ ಅರ್ಜುನ್ ಸಿಂಗ್ ಅವರ ನಿವಾಸದ ಹೊರಗೆ ಇಂದು ಬೆಳಿಗ್ಗೆ ಬಾಂಬ್ ಸ್ಫೋಟಗಳ ನಡೆದಿದ್ದು ಇದು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಚಿಂತಾಜನಕವಾಗಿದೆ. ಪಶ್ಚಿಮ ಬಂಗಾಳ ಪೊಲೀಸರಿಂದ ತ್ವರಿತ ಕ್ರಮ ನಿರೀಕ್ಷಿಸಲಾಗಿದೆ. ಅವರ ಭದ್ರತೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಕ್ರಮ ಕೈಗೊಳ್ಳಬೇಕು ಎಂದು ಧನ್ಖರ್ ಸೆ.8ರಂದು  ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದ ವರದಾ ನದಿಯಲ್ಲಿ ದೋಣಿ ಮಗುಚಿ ಮೂರು ಸಾವು; ಹಲವರು ನಾಪತ್ತೆಯಾಗಿರುವ ಶಂಕೆ, ಮುಂದುವರಿದ ಶೋಧ

(West Bengal Another blast was reported outside the house of Barrackpore MP Arjun Singh)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada