ಬಳ್ಳಾರಿ ಬೆನ್ನಲ್ಲೆ ಕೋಲಾರದಲ್ಲೂ ಬ್ಯಾನರ್​​ ಗಲಾಟೆ: ಬಿಜೆಪಿಗರ ನಡೆಗೆ ಕಾಂಗ್ರೆಸ್​​ ಕೆಂಡ

Edited By:

Updated on: Jan 07, 2026 | 11:10 AM

ಮಾಜಿ ಶಾಸಕರ ಹುಟ್ಟುಹಬ್ಬದ ನಿಮಿತ್ತ ಹಾಕಲಾಗಿದ್ದ ಬ್ಯಾನರ್​​ನಲ್ಲಿ ನಮ್ಮ ಶಾಸಕ ಎಂದು ಸಂಬೋಧಿಸಿರೋದು ಕೋಲಾರದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್​​ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಟಾಕ್​​ವಾರ್​​ ಕೂಡ ನಡೆದಿದೆ. ಈ ನಡುವೆ ವಿವಾದಿತ ಬ್ಯಾನರ್​​ನ ನಗರಸಭೆ ತೆರವುಗೊಳಿಸಿದೆ.

ಕೋಲಾರ, ಜನವರಿ 07: ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ ಮಅಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ಸದ್ದುಮಾಡಿದೆ. ಕೋಲಾರದ ಮಾಲೂರು ತಾಲೂಕಿನ ಕಾಂಗ್ರೆಸ್ ಹಾಗೂ BJP ಕಾರ್ಯಕರ್ತರ ನಡುವೆ ಬ್ಯಾನರ್ ಗಲಾಟೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಟಾಕ್ ಫೈಟ್​​ ನಡೆದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಪಟ್ಟಣದಲ್ಲಿ ಬ್ಯಾನರ್ ಅಳವಡಿಸಿದ್ದು, ನಮ್ಮ ಶಾಸಕರು ಎಂದು ಸಂಬೋಧಿಸಿ ಅದರಲ್ಲಿ ಶುಭಾಶಯ ಕೋರಿದ್ದಾರೆ. ಇದಕ್ಕೆ ಹಾಲಿ ಶಾಸಕ ನಂಜೇಗೌಡ ಬೆಂಬಲಿಗರು ಕೆಂಡಾಮಂಡಲರಾಗಿದ್ದು, BJP ಕಾರ್ಯಕರ್ತರು ಹಾಕಿದ್ದ ಬ್ಯಾನರ್​​ನ ಮಾಲೂರು ನಗರಸಭೆ ತೆರವುಗೊಳಿಸಿದೆ. ಇದಾದ ಬಳಿಕ ನಗರಸಭೆ ಪೌರಾಯುಕ್ತ ಪ್ರದೀಪ್ ಎದುರು ಕಚೇರಿಯಲ್ಲಿ ಹೈಡ್ರಾಮ ನಡೆದಿದ್ದು, ಪೌರಾಯುಕ್ತರನ್ನು ಬಿಜೆಪಿ ಮುಖಂಡರು ಏಕವಚನದ್ದಲಿ ತರಾಟೆಗೆ ಪಡೆದ ಪ್ರಸಂಗ ಕೂಡ ನಡೆದಿದೆ. ಬಳ್ಳಾರಿ ರೀತಿ ಅವಘಡ ಆಗದಿರಲಿ ಎಂಬ ಕಾರಣಕ್ಕೆ ಬ್ಯಾನರ್​​ ತೆರವು ಮಾಡಿದ್ದೇವೆ ಎಂದು ಪೌರಾಯುಕ್ತರು ಕೂಡ ಈ ವೇಳೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More