ಕೋಲಾರದಲ್ಲಿ ಠಿಕಾಣಿ ಹೂಡಿ ಅಪಾರ ಆಸ್ತಿಪಾಸ್ತಿ ಮಾಡಿಕೊಂಡಿದ್ದ ಆರೋಗ್ಯಾಧಿಕಾರಿ ಕೊನೆಗೂ ಸಸ್ಪೆಂಡ್

ಡಿಹೆಚ್​ಒ ಕಚೇರಿಯಲ್ಲಿ 22 ಎಸಿಬಿ ಅಧಿಕಾರಿಗಳಿಂದ ತಲಾಶ್ ನಡೆದಿತ್ತು: ಕಳೆದ ಜನವರಿ 2ರಂದು ಡಾ. ವಿಜಯಕುಮಾರಗೆ ಸೇರಿದ ಹಲವಾರು ಜಾಗಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಿಢೀರ್​ ದಾಳಿ ನಡೆಸಿತ್ತು. ಆ ವೇಳೆ ಐದು ವರ್ಷದಿಂದ ಕೋಲಾರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಭ್ರಷ್ಟಾತಿಭ್ರಷ್ಟ ಡಾ. ವಿಜಯಕುಮಾರ್ ಸಿಕ್ಕಿಬಿದ್ದಿದ್ದರು.

ಕೋಲಾರದಲ್ಲಿ ಠಿಕಾಣಿ ಹೂಡಿ ಅಪಾರ ಆಸ್ತಿಪಾಸ್ತಿ ಮಾಡಿಕೊಂಡಿದ್ದ ಆರೋಗ್ಯಾಧಿಕಾರಿ ಕೊನೆಗೂ ಸಸ್ಪೆಂಡ್
ಕೋಲಾರದಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿ ಅಪಾರ ಆಸ್ತಿಪಾಸ್ತಿ ಮಾಡಿಕೊಂಡಿದ್ದ ಆರೋಗ್ಯಾಧಿಕಾರಿ ಕೊನೆಗೂ ಸಸ್ಪೆಂಡ್
Updated By: Digi Tech Desk

Updated on: May 15, 2021 | 7:21 PM

ಕೋಲಾರ: ಕೋಲಾರದಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿ, ಅಪಾರ ಆಸ್ತಿಪಾಸ್ತಿ ಮಾಡಿಕೊಂಡಿದ್ದ ಆರೋಗ್ಯಾಧಿಕಾರಿ ಕೊನೆಗೂ ಸಸ್ಪೆಂಡ್ ಆಗಿದ್ದಾರೆ. ಕೋಲಾರ ಡಿಹೆಚ್‌ಒ ಡಾ. ವಿಜಯಕುಮಾರ್ ಅಮಾನತುಗೊಂಡ ಭ್ರಷ್ಟ ಮನುಷ್ಯ. ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 2ರಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಭ್ರಷ್ಟ ವಿಜಯಕುಮಾರ್ ಆದಾಯಕ್ಕಿಂತ 343 ಪಟ್ಟು ಹೆಚ್ಚು ಆಸ್ತಿಪಾಸ್ತಿ ಮಾಡಿಕೊಂಡಿರುವುದು ಪತ್ತೆಯಾಗಿತ್ತು.

ಡಿಹೆಚ್​ಒ ಕಚೇರಿಯಲ್ಲಿ 22 ಎಸಿಬಿ ಅಧಿಕಾರಿಗಳಿಂದ ತಲಾಶ್ ನಡೆದಿತ್ತು: ಕಳೆದ ಜನವರಿ 2ರಂದು ಡಾ. ವಿಜಯಕುಮಾರಗೆ ಸೇರಿದ ಹಲವಾರು ಜಾಗಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಿಢೀರ್​ ದಾಳಿ ನಡೆಸಿತ್ತು. ಆ ವೇಳೆ ಐದು ವರ್ಷದಿಂದ ಕೋಲಾರದಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಭ್ರಷ್ಟಾತಿಭ್ರಷ್ಟ ಡಾ. ವಿಜಯಕುಮಾರ್ ಸಿಕ್ಕಿಬಿದ್ದಿದ್ದರು. ಅವರಲ್ಲಿ ಡಾ. ವಿಜಯಕುಮಾರ್ ಸಹ ಒಬ್ಬರು. ಈತ ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಡಾ. ವಿಜಯಕುಮಾರ್​ನನ್ನು ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ತನ್ನ ಅಧಿಕೃತ ಆದಾಯಕ್ಕಿಂತ ಶೇ.343 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವ ಆಪಾದನೆ ಈತನ ಮೇಲಿತ್ತು.

(kolar dho dr vijaykumar suspended after acb raid on him on january 2)

Published On - 5:46 pm, Sat, 15 May 21