ಕೋಲಾರ: ಎರಡು ತಿಂಗಳಿಂದ ವೇತನ ನೀಡಿಲ್ಲವೆಂದು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ; ಇಲ್ಲಿದೆ ವಿವರ
ಕೋಲಾರ ನಗರಸಭೆ ಕಚೇರಿ ಬಳಿಯೇ ವಿಷ ಕುಡಿದು ಬಿದ್ದಿದ್ದ ಪೌರಕಾರ್ಮಿಕ ಶಿವಕುಮಾರ್ನನ್ನು ಸದ್ಯ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಕುಮಾರ್ಗೆ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಕೋಲಾರ,ಅ.10: ಎರಡು ತಿಂಗಳಿಂದ ವೇತನ ನೀಡಿಲ್ಲವೆಂದು ಪೌರಕಾರ್ಮಿಕನೊಬ್ಬ ಕೋಲಾರ (Kolar) ನಗರಸಭೆ ಕಚೇರಿ ಬಳಿಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಪೌರ ಕಾರ್ಮಿಕ. ಇನ್ನು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರಮ್ಮ ಬಡಾವಣೆ ನಿವಾಸಿಯಾಗಿರುವ ಶಿವಕುಮಾರ್ ಎರಡು ತಿಂಗಳಿಂದ ವೇತನ ಸಿಕ್ಕಿಲ್ಲ, ಕೆಲಸಕ್ಕೆ ಹೋಗಿದ್ದರೂ ಗೈರು ಹಾಜರಿ ಎಂದು ಹಾಕಿದ್ದಾರೆ. ಜೊತೆಗೆ ಆರೋಗ್ಯ ನಿರೀಕ್ಷಕ ಹಾಗೂ ಆಯುಕ್ತರು ಪತಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆತನ ಪತ್ನಿ ರುಕ್ಮಿಣಿ ಆರೋಪಿಸಿದ್ದಾರೆ.
ಇಂದು ಮಧ್ಯಾಹ್ನ ನಗರಸಭೆ ಕಚೇರಿ ಬಳಿಯೇ ವಿಷ ಕುಡಿದು ಬಿದ್ದಿದ್ದ ಪೌರಕಾರ್ಮಿಕ ಶಿವಕುಮಾರ್ನನ್ನು ಸದ್ಯ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಕುಮಾರ್ಗೆ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಪತಿ 25 ರಿಂದ 30 ವರ್ಷಗಳಿಂದ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇತ್ತ ಆತನ ಪತ್ನಿ ರುಕ್ಮಿಣಿ ಕೂಡ ನಗರಸಭೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆ ಕುರಿತು ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ವಯೋವೃದ್ಧರಿಗೆ ಕಪಾಳಮೋಕ್ಷ ಮಾಡಿದ ಯುವಕ
ಯಾದಗಿರಿ: ಗಾರ್ಡನ್ನಲ್ಲಿ ಸಿಗರೇಟ್ ಸೇದಬೇಡಿ ಎಂದು ಹೇಳಿದ್ದಕ್ಕೆ ಯುವಕನೋರ್ವ ವಯೋವೃದ್ಧರಿಗೆ ಕಪಾಳಮೋಕ್ಷ ಮಾಡಿದ ಘಟನೆ ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿ ನಡೆದಿದೆ. ‘ನಾವು ಏನ್ ಬೇಕಾದ್ರು ಮಾಡುತ್ತೀವಿ, ನೀವು ಯಾರು ಕೇಳುವುದಕ್ಕೆ ಎಂದು ಉದ್ದಟನ ಮೆರೆದಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 pm, Tue, 10 October 23