ಮಾಲೂರು: ಆರು ಲಾರಿ ಲೋಡ್​ ಪುಸ್ತಕಗಳಿರುವ ಪುಸ್ತಕ ಮನೆ ಸೂರು ಇಲ್ಲದೆ ಸೊರಗುತ್ತಿದೆ!

ಬೆಂಗಳೂರಿನಿಂದ ಮಾಲೂರಿಗೆ ಪುಸ್ತಕ ಮನೆಯನ್ನು ಸ್ಥಳಾಂತರ ಮಾಡಿರುವ ಹರಿಹರಪ್ರಿಯಗೆ ಸದ್ಯ ತಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ತಮ್ಮ ಪುಸ್ತಕ ಉಳಿಸಿಕೊಳ್ಳಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರದಿಂದ ನಿರೀಕ್ಷಿತ ಸಹಾಯ ಸಿಗದೆ ಹೋದಲ್ಲಿ ಭಿಕ್ಷೆ ಬೇಡಿಯಾದರೂ ತಮ್ಮ ಪುಸ್ತಕಗಳನ್ನ ಉಳಿಸಿಕೊಳ್ಳುವ ಮಾತನ್ನಾಡಿದ್ದಾರೆ.

Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Jan 26, 2024 | 12:06 PM

ಅಲ್ಲಿ 400 ವರ್ಷಗಳಷ್ಟು ಹಳೆಯ ಹಾಗೂ ಎಲ್ಲೂ ಸಿಗದ ಪುಸ್ತಕಗಳ ಗಣಿಯೇ ಅಲ್ಲಿದೆ, 500 ಕ್ಕೂ ಹೆಚ್ಚು ಸಾಹಿತಿಗಳ ಸಮಗ್ರ ಕೃತಿಗಳು ಅಲ್ಲಿವೆ, ಕನ್ನಡ, ತೆಲುಗು, ತಮಿಳು, ಇಂಗ್ಲೀಷ್​, ಭಾಷೆಯ ಯಾವ ವಿಶ್ವವಿದ್ಯಾಲಯಗಳಲ್ಲೂ ಸಿಗದ ಪುಸ್ತಕ ಭಂಡಾರವೇ ಅಲ್ಲಿದೆ, ಆದರೆ ಅಂಥಾದೊಂದು ಪುಸ್ತಕ ಮನೆ ಸೂರು ಇಲ್ಲದೆ ಸೊರಗುತ್ತಿದೆ…

ಬಂಡಲ್ ಕಟ್ಟಿ ಹಾಕಲಾಗಿರುವ ಲಕ್ಷಾಂತರ ಪುಸ್ತಕಗಳು, ನೂರಾರು ವರ್ಷಗಳಷ್ಟು ಹಳೆಯದಾದ ಬೇರೆಲ್ಲೂ ಸಿಗದ ಸಾಹಿತ್ಯ, ಸಂಗೀತ, ರಂಗಭೂಮಿ, ಕಲೆ ವಸ್ತುಶಿಲ್ಪಿಕ್ಕೆ, ಇತಿಹಾಸ ಕುರಿತ ರಾಶಿ ರಾಶಿ ಪುಸ್ತಕಗಳು, ಒಂದಲ್ಲ ಎರಡಲ್ಲಾ ಸುಮಾರು 5 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿರುವ ಏಕೈಕ ಸ್ಥಳ, ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು,ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಹೊರವಲಯದ ಪುಸ್ತಕ ಮನೆಯಲ್ಲಿ.

ಪುಸ್ತಕ ಮನೆ ಸಂಸ್ಥಾಪಕ, ಸಾಹಿತಿ, ವಿದ್ವಾಂಸ, ಪ್ರವಚನಕಾರ ಹರಿಹರಪ್ರಿಯ ಅವರು ಕಳೆದ 40 ವರ್ಷಗಳ ಕಾಲ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬೃಹತ್ ಪುಸ್ತಕ ಗಣಿಯನ್ನು ಸ್ಥಾಪಿಸಿದ್ರು. ಆದ್ರೆ ಬೆಂಗಳೂರಿನಲ್ಲಿ ತಮ್ಮ ಪುಸ್ತಕ ಮನೆಗೆ ನಿರೀಕ್ಷಿಸಿದಷ್ಟು ಸಹಕಾರ ಸಿಗದೆ, ಓದುಗರ ಸಂಖ್ಯೆ ಕುಸಿತವಾದ ಹಿನ್ನೆಲೆ ತಾವು ಸಂಗ್ರಹಿಸಿದ್ದ ಲಕ್ಷಾಂತರ ಪುಸ್ತಕಗಳೊಂದಿಗೆ ತಮ್ಮ ಪುಸ್ತಕ ಮನೆಯನ್ನು ಮಾಲೂರಿಗೆ ಸ್ಥಳಾಂತರ ಮಾಡಿದ್ದಾರೆ.

ಇವರಲ್ಲಿರುವ ಪುಸ್ತಕಗಳಾದೂ ಎಷ್ಟು ಎಂದರೆ ಒಂದು ಅಂದಾಜಿನ ಪ್ರಕಾರ ಸುಮಾರು ಆರು ಲಾರಿ ಲೋಡ್​ ಪುಸ್ತಕ. ಅವರು ತಮ್ಮ ಅಷ್ಟೂ ಪುಸ್ತಕಗಳನ್ನು ಮಾಲೂರಿಗೆ ಸ್ಥಳಾಂತರಿಸಲು ಅವರಿಗೆ 65 ಸಾವಿರ ರೂಪಾಯಿ ಲಾರಿ ಬಾಡಿಗೆಗೆ ಖರ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಬೆಂಗಳೂರಿನಲ್ಲಿ ಹರಿಹರಪ್ರಿಯ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ಸಿಗದ ಹಿನ್ನೆಲೆ ಅವರು ತಮ್ಮ ಪುಸ್ತಕ ಮನೆಯನ್ನು ಮಾಲೂರಿನ ಕರ್ನಾಟಕ ಗೃಹಮಂಡಳಿ ಬಡಾವಣೆಯ ತಮ್ಮ ಮಗಳ ನಿವೇಶನದಲ್ಲಿ ಒಂದು ಪುಟ್ಟ ಮನೆಯನ್ನು ನಿರ್ಮಾಣ ಮಾಡಿ ಅಲ್ಲಿಗೆ ಸ್ಥಳಾಂತರ ಮಾಡಿಕೊಂಡಿದ್ದಾರೆ.

ಸಾಕಷ್ಟು ಜನ ಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಲೇಖಕರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಅಧ್ಯಯನ ವಿದ್ಯಾರ್ಥಿಗಳು, ಸಿನಿಮಾ ನಿರ್ದೇಶಕರು ಹೀಗೆ ಹತ್ತಾರು ಬಗೆಯ ಜನರು ಇಷ್ಟು ದಿನ ತಮಗೆ ಬೇಕಾದ ಪುಸ್ತಕಗಳನ್ನು ಹುಡುಕಿಕೊಂಡು ಬೆಂಗಳೂರಿನ ಪುಸ್ತಕ ಮನೆಗೆ ಬರುತ್ತಿದ್ದರು.

ಆದರೆ ಅವರು ಇನ್ನುಮುಂದೆ ಮಾಲೂರಿಗೆ ಬರಬೇಕಿದೆ. ಆದರೆ ಬೆಂಗಳೂರಿನಿಂದ ಮಾಲೂರಿಗೆ ಪುಸ್ತಕ ಮನೆಯನ್ನು ಸ್ಥಳಾಂತರ ಮಾಡಿರುವ ಹರಿಹರಪ್ರಿಯ ಅವರಿಗೆ ಸದ್ಯ ತಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಹೋಗಿದೆ. ಹಾಗಾಗಿ ಹರಿಹರಪ್ರಿಯ ಅವರು ತಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಸರ್ಕಾರದಿಂದ ನಿರೀಕ್ಷಿತ ಸಹಾಯ ಸಿಗದೆ ಹೋದಲ್ಲಿ ಕೊನೆ ಪಕ್ಷ ಭಿಕ್ಷೆ ಬೇಡಿಯಾದರೂ ತಮ್ಮ ಪುಸ್ತಕಗಳನ್ನ ಉಳಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ.

ಮೂಲತ: ಹರಿಹರಪ್ರಿಯ ಅವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಕೊತ್ತಪಲ್ಲಿ ಗ್ರಾಮದವರು, ತಮ್ಮ 13ನೇ ವಯಸ್ಸಿನಿಂದಲೇ ಪುಸ್ತಕ ಪ್ರೀತಿ ಬೆಳೆಸಿಕೊಂಡು, ಪುಸ್ತಕವನ್ನು ಸಂಗ್ರಹಿಸುವ ಕಾಯಕ ಶುರುಮಾಡಿದ್ರು, ನಂತರ ಇವರೇ ಸುಮಾರು 110 ವಿವಿಧ ಪುಸ್ತಕಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ಬಳಿ ವಿಶ್ವವಿದ್ಯಾಲಯಗಳಲ್ಲೂ, ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲೂ ಸಿಗದ ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ಜೊತೆಗೆ ಇವರು ಕೂಡಾ ಸ್ವತ: ಸಾಹಿತಿ ಮತ್ತು ಪ್ರವಚನಕಾರರಾಗಿದ್ದಾರೆ. ಇವರಿಗೆ ನೂರಾರು ಪ್ರಶಸ್ತಿಗಳು ಲಭಿಸಿವೆ, ಆದರೆ ಸದ್ಯ ತಮ್ಮಲ್ಲಿರುವ ಪುಸ್ತಕದ ಗಣಿಯನ್ನು ಉಳಿಸಿಕೊಳ್ಳೋದು ಹರಿಹರಪ್ರಿಯ ಅವರಿಗೆ ಸವಾಲಾಗಿದೆ. ಯಾರಾದ್ರೂ ಪುಸ್ತಕ ಪ್ರೇಮಿಗಳು, ದಾನಿಗಳು ಇವರ ನೆರವಿಗೆ ನಿಂತರ ಹೀಗೆ ರಾಶಿ ಹಾಕಲಾಗಿರುವ ಪುಸ್ತಕಗಳನ್ನು ಸಮರ್ಪಕ ರೀತಿಯಲ್ಲಿ ಜೋಡಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ಹಾಗೂ ಓದುಗರಿಗೆ, ಅಧ್ಯಯನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಅನ್ನೋದು ಸ್ಥಳೀಯರ ಮಾತು. ಹಾಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ಈ ಪುಸ್ತಕಗಳ ಸಂರಕ್ಷಣೆಗೆ ಕ್ರಮ ಕೈಗೊಂಡರೆ ನೂರಾರು ವರ್ಷಗಳಷ್ಟು ಹಳೆಯ ಕೋಟ್ಯಾಂತರ ರೂಪಾಯಿ ಬೆಲೆಯ ಪುಸ್ತಕಗಳನ್ನು ಉಳಿಸಿದಂತಾಗುತ್ತದೆ.

ಒಟ್ಟಾರೆ ಕೋಟ್ಯಾಂತರ ರೂಪಾಯಿ ಹಣ ಸಿಗಬಹುದು, ಆದರೆ ಬೆಲೆ ಬಾಳುವ ಪುಸ್ತಕಗಳು ನಮಗೆ ಸಿಗೋದಿಲ್ಲ, ಪುಸ್ತಕವನ್ನು ಸಂರಕ್ಷಿಸಿದರೆ ಅದು ತಲೆ ತಲೆಮಾರುಗಳಿಗೆ ಜ್ಞಾನವನ್ನು ಪಸರಿಸಬಹುದು. ಹಾಗಾಗಿ ಸರ್ಕಾರ ಈ ಪುಸ್ತಕ ಮನೆಯ ಸಂರಕ್ಷಣೆಗೆ ನೆರವು ನೀಡಬೇಕು. ಹಾಗಾದಲ್ಲಿ ಮಾತ್ರವೇ ಹರಿಹರಪ್ರಿಯ ಅವರ ನಾಲ್ಕು ದಶಕಗಳ ಶ್ರಮಕ್ಕೆ ಫಲಸಿಕ್ಕಂತಾಗುತ್ತದೆ.

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ