ಕೋಲಾರ: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಮುಂದೆ ಸಾಕಷ್ಟು ಜನರು ತಮ್ಮ ಕಷ್ಟಗಳನ್ನ ನಿವಾರಿಸುವಂತೆ ಅಹವಾಲು ತೆಗೆದುಕೊಂಡು ಬರುತ್ತಾರೆ. ವಾಸಕ್ಕೆ ಮನೆ ಮಾಡಿಕೊಡಿ, ಕೆಲಸ ಕೊಡಿಸಿ, ಚಿಕಿತ್ಸೆಗೆ ಸಹಾಯ ಮಾಡಿ ಅಂತೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಬರುತ್ತಾರೆ. ಆದ್ರೆ, ಇಲ್ಲೋರ್ವ ಯುವಕ ಮದುವೆಗೆ(marriage) ವಧು (bride) ಕೊರತೆ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ತಂದಿದ್ದಾನೆ. ಅಲ್ಲದೇ ಈ ಕೊರತೆಯನ್ನು ನೀಗಿಸುವಂತೆ ಅವಲತ್ತುಕೊಂಡಿದ್ದಾನೆ.
ಒಕ್ಕಲಿಗ ಸಮುದಾಯದ ಹೊಸ ಸಂಕಟ ತೆರೆದಿಟ್ಟ ಚುಂಚಾದ್ರಿ ವಧು-ವರರ ಸಮಾವೇಶ: ಯುವತಿಯರ ಸಂಖ್ಯೆ ಕುಸಿತ, ಹುಡುಗರ ಪರಿತಾಪ
ಹೌದು…. ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದಾನೆ.
ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕುಮಾರಸ್ವಾಮಿಗೆ ಮನವಿ ಮಾಡಿದ್ದಾನೆ.
ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕುಮಾರಸ್ವಾಮಿಗೆ ಧನಂಜಯ ಅವಲತ್ತುಕೊಂಡಿದ್ದಾನೆ
ಕುಮಾರಸ್ವಾಮಿ ಸಿಎಂ ಆಗುವುದು ಖಚಿತವಾಗಿದ್ದು, ಜೆಡಿಎಸ್ ಸರ್ಕಾರದಲ್ಲಿ ನಿಯಮ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಧನಂಜಯ ಮನವಿ ಮಾಡಿದ್ದಾರೆ. ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯದಿರುವ ಜಟಿಲ ಸಮಸ್ಯೆಯಾಗಿದೆ. ವಿಚಿತ್ರ ಆದರೂ ಸಾಮಾಜಿಕ ಸಮಸ್ಯೆ ಬಗ್ಗೆ ಧನಂಜಯ ಪತ್ರ ಬೆಳಕು ಚೆಲ್ಲಿದೆ.
ಬಾಳ ಸಂಗಾತಿಯನ್ನು ಅರಸಿ ಬಂದಿದ್ದ ಯುವಕರು
ಇತ್ತೀಚೆಗೆಷ್ಟೇ ನಾಗಮಂಲದ ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.ಸಾವಿರಾರು ಒಕ್ಕಲಿಗ ಹುಡುಗರು ವಧುವಿಗಾಗಿ ಮುಗಿಬಿದ್ದಿದ್ದು, ಅಕ್ಷರಶಃ ಜಾತ್ರೆಯಂತಾಗಿತ್ತು. ಕೇವಲ 200 ಹುಡುಗಿಯ ಬಂದಿದ್ರೆ, ಬರೋಬ್ಬರಿ 11,750 ಗಂಡು ಮಕ್ಕಳು ಬಾಳ ಸಂಗಾತಿಯನ್ನು ಅರಸಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:35 pm, Mon, 21 November 22