ಕೋಲಾರ: ಟ್ರಾಕ್ಟರ್‌ಗೆ ಆಂಧ್ರಪ್ರದೇಶದ ಎಂಎಲ್‌ಎ ಅವರ ಎಂಡೋವರ್ ಕಾರ್ ಡಿಕ್ಕಿಯಾದ ಪರಿಣಾಮ ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟರೆ ಟ್ರಾಕ್ಟರ್ ಛಿದ್ರ ಛಿದ್ರವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಆಂಧ್ರದ ಅನಂತಪುರ ಜಿಲ್ಲೆಯ ಮಡಕಸಿರ ಶಾಸಕ ತಿಪ್ಪೆಸ್ವಾಮಿಗೆ ಸೇರಿದ ಕಾರ್ ಇದಾಗಿದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಾಂತರಾಜ ವೃತ್ತದ ಬಳಿ ಶಾಸಕನ ಕಾರು ಅಪಘಾತವಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಮಡಕಸಿರ ಶಾಸಕ ಹಾಗೂ ಕಾರ್ ಚಾಲಕನಿಗೆ ಗಾಯಗಳಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ತಕ್ಷಣ ಕಾರು ಸ್ಥಳದಲ್ಲೆ ಬಿಟ್ಟು ಡ್ರೈವರ್ ಹಾಗೂ ಕಾರಿನಲ್ಲಿದ್ದ ಶಾಸಕ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇನ್ನೂ ಭೀಕರ ಅಪಘಾತದಲ್ಲಿ ಮುಳಬಾಗಿಲು ಮೂಲದ ಟ್ರಾಕ್ಟರ್ ಚಾಲಕ ಸುಬ್ರಮಣಿ (35) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಮುಳಬಾಗಿಲು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶಾಸಕನ ಕಾರ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇನ್ನೂ ತಿಪ್ಪೆಸ್ವಾಮಿ ಸಧ್ಯ ಆಂದ್ರಪ್ರದೇಶದ ಪ್ರಸ್ತುತ ಜಗನ್ ಸರ್ಕಾರದ ವೈಎಸ್‌ಅರ್ ಕಾಂಗ್ರೆಸ್‌ನ ಹಾಲಿ ಶಾಸಕನಾಗಿದ್ದು, ಶಾಸಕನು ಕಾರ್ ನಲ್ಲಿದ್ದು ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರಬಹುದು ಎನ್ನಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಭಾರತ್ ಪೇ ಮೊಬೈಲ್ ಆ್ಯಪ್ ಹಾಕಿಕೊಡುವ ನೆಪದಲ್ಲಿ ದೋಖಾ
ಕೋಲಾರ: ಭಾರತ್ ಪೇ ಮೊಬೈಲ್ ಆ್ಯಪ್ ಹಾಕಿಕೊಡುವ ನೆಪದಲ್ಲಿ ಅಂಗಡಿ ಮಾಲೀಕರಿಗೆ ದೋಖಾ ಆಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡಿಕೊಡುವುದಾಗಿ ಬೆಲೆ ಬಾಳುವ ಮೊಬೈಲ್ ಕಸಿದುಕೊಂಡು ಬಾಂಗ್ಲಾ ಗ್ಯಾಂಗ್ ಪರಾರಿಯಾಗಿದ್ದಾರೆ. ಕೋಲಾರ ನಗರದ ಹಲವು ಅಂಗಡಿಗಳಲ್ಲಿ ಬಾಂಗ್ಲಾ ಗ್ಯಾಂಗ್ನಿಂದ ಕೃತ್ಯ ನಡೆದಿದೆ. ಮೊಬೈಲ್ ಕಸಿದುಕೊಂಡು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Asia Cup 2022: ಏಷ್ಯಾ ಕಪ್ಗೆ ಡೇಟ್ ಫಿಕ್ಸ್: ಭಾರತ-ಪಾಕ್ ಮತ್ತೆ ಮುಖಾಮುಖಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕುಡಿದ ಮತ್ತಿನಲ್ಲಿ ಯುವಕ ಹುಚ್ಚಾಟ
ಕೋಲಾರ ನಗರದ ನಚಿಕೇತ ನಿಲಯ ಹಾಸ್ಟೆಲ್ ಮುಂಭಾಗ ಕುಡಿದ ಮತ್ತಿನಲ್ಲಿ ಯುವಕ ರಂಪಾಟ ಮಾಡಿದ್ದಾನೆ. ಕೋಲಾರ ತಾಲ್ಲೂಕು ಕೋಡಿ ರಾಮಸಂದ್ರ ಅಶೋಕ್ ಎಂಬ ಯುವಕ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನಗಳನ್ನ ತಡೆದು ರಂಪಾಟ ಮಾಡಿದ್ದು ಸ್ಥಳಕ್ಕೆ ಬಂದ ಗಲ್ ಪೇಟೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Published On - 3:21 pm, Tue, 31 May 22