ಕೋಲಾರ ಜಿಲ್ಲೆ ಶ್ರೀನಿವಾಸಪುರದ ಹೊಗಳಗೆರೆ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ( Congress leader) ಎಂ. ಶ್ರೀನಿವಾಸ ಎಂಬಾತನನ್ನು ಮೊನ್ನೆ ಆಯುಧ ಪೂಜೆಯ ದಿನವೇ ಮಾರಕ ಅಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣದಲ್ಲಿ ಕೊಲೆಯಾದ ಶ್ರೀನಿವಾಸ ಮತ್ತು ಆರೋಪಿ ವೇಣುಗೋಪಾಲ್ ನಡುವಣ ಈ ಹಿಂದಿನ ವಿಡಿಯೋ ಇದೀಗ ವೈರಲ್ ಆಗಿದೆ (Viral video). 2018ರಲ್ಲಿ ನಡೆದಿದೆ ಎನ್ನಲಾದ ರಾಜಿ ಪಂಚಾಯ್ತಿಯ ವಿಡಿಯೋ ಅದಾಗಿದೆ. 2018ರಲ್ಲಿ ಕೌನ್ಸಿಲರ್ ಶ್ರೀನಿವಾಸ ಮತ್ತು ವೇಣುಗೋಪಾಲ ಮಧ್ಯೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಕೆ.ಕೆ. ಮಂಜು ಮನೆಯಲ್ಲಿ ರಾಜಿ ಸಂಧಾನ (Mediation) ಏರ್ಪಡಿಸಲಾಗಿತ್ತು.
2018ರಲ್ಲೇ ಶ್ರೀನಿವಾಸನನ್ನು ಕೊಲೆ ಮಾಡಲು ಯತ್ನಿಸಿದ್ದ ವೇಣುಗೋಪಾಲ್. ಆ ವೇಳೆ ತಾನೇ ವಿಡಿಯೋ ರೆಕಾರ್ಡ್ ಮಾಡಿದ್ದಾಗಿ ವೇಣುಗೋಪಾಲ್ ಒಪ್ಪಿಕೊಂಡಿದ್ದ. ನಾನು ನಿನಗೆ ಹೊಡೆಯಬೇಕಿತ್ತು, ಆದರೆ ಆ ಏಟು ಬೇರೆಯವರಿಗೆ ಬಿತ್ತು. ಪರಸ್ಪರ ಚರ್ಚೆ ವೇಳೆ ಶ್ರೀನಿವಾಸ್ಗೆ ನೇರವಾಗಿ ಹೇಳಿದ್ದ ವೇಣುಗೋಪಾಲ್. ಕೊಲೆಯಾದ ಶ್ರೀನಿವಾಸ, ಆರೋಪಿ ವೇಣುಗೋಪಾಲ್ ನಡುವಣ ಆ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಮುಖಂಡ ಹತ್ಯೆ ಪ್ರಕರಣ; ಆರೋಪಿಗಳ ಮೇಲೆ ಫೈರಿಂಗ್
ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ವೇಣುಗೋಪಾಲ್ ಆರೋಪಿ A1 ಆಗಿದ್ದಾನೆ. ಸದ್ಯ ಮೂವರು ಆರೋಪಿಗಳು ಪೊಲೀಸರ ಗುಂಡೇಟು ತಿಂದು ಆಸ್ಪತ್ರೆಯಲ್ಲಿದ್ದಾರೆ. ಆರೋಪಿಗಳಾದ ವೇಣುಗೋಪಾಲ್, ಸಂತೋಷ್, ಮುನೀಂದ್ರಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಪಿಗಳು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ