ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ‌ ವಿದ್ಯಾರ್ಥಿಗಳ ಕಾರುಬಾರು, ತನಿಖೆಗೆ ಆದೇಶ: ನೂರಾರು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ!

| Updated By: ಆಯೇಷಾ ಬಾನು

Updated on: Nov 05, 2022 | 1:04 PM

ಪದವಿಗೆ ದಾಖಲಾಗಲು‌ ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದಿದ್ದಾರೆ. ಎಸ್​ಎಸ್​ಎಲ್‌ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲನೆ ವೇಳೆ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ.

ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ‌ ವಿದ್ಯಾರ್ಥಿಗಳ ಕಾರುಬಾರು, ತನಿಖೆಗೆ ಆದೇಶ: ನೂರಾರು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ!
ಬೆಂಗಳೂರು ಉತ್ತರ ವಿವಿಯಲ್ಲಿ ನಕಲಿ‌ ವಿದ್ಯಾರ್ಥಿಗಳ ಕಾರುಬಾರು
Follow us on

ಕೋಲಾರ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ನಕಲಿ ವಿದ್ಯಾರ್ಥಿಗಳ ಕಾರುಬಾರು ಹೆಚ್ಚಾಗಿದೆ. ಆ ಮೂಲಕ ನಕಲಿ ಜಾಲವೊಂದು ಉತ್ತರ ವಿಶ್ವವಿದ್ಯಾಲಯದಲ್ಲಿ ಬೇರೂರಿದೆಯಾ ಅನ್ನೋ ಅನುಮಾನ ಇದೀಗ ಮೂಡಿದೆ. ನಕಲಿ ಅಂಕಪಟ್ಟಿಗಳನ್ನ ನೀಡಿ ಮೊದಲ ವರ್ಷದ ಪದವಿ ತರಗತಿಗಳಿಗೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳ ನಕಲಿ ಆಟ ಪರಿಶೀಲನೆ ವೇಳೆ ಬಯಲಾಗಿದೆ.

ವಿವಿಯಿಂದ ವಿದ್ಯಾರ್ಥಿಗಳು ನೀಡಿದ ದಾಖಲಾತಿಗಳ ಪರಿಶೀಲನೆ ವೇಳೆ ಎಂಟು ವಿದ್ಯಾರ್ಥಿಗಳ ನಕಲಿ ಅಂಕ ಪಟ್ಟಿ ಪತ್ತೆಯಾಗಿದ್ದು, ಪದವಿಗೆ ದಾಖಲಾಗಲು ವಿದ್ಯಾರ್ಥಿಗಳು ಅಡ್ಡ ದಾರಿ ಹಿಡಿದ್ರಾ, ಇಲ್ಲಾ ನಕಲಿ ಅಂಕಪಟ್ಟಿ ಜಾಲ ತಲೆ ಎತ್ತಿದಿಯಾ ಅನ್ನೋ ಹತ್ತು ಹಲವು ಅನುಮಾನಗಳು ಇದೀಗ ಮೂಡಿದೆ. ವಿಶ್ವ ವಿದ್ಯಾಲಯದಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ಮೂಲ ಅಂಕಪಟ್ಟಿ ಪರಿಶೀಲನೆ ವೇಳೆ ನಕಲಿ ಅಂಕ ಪಟ್ಟಿ ನೀಡಿರುವುದು ಬಯಲಾಗಿದೆ. ಸುಮಾರು ಎಂಟು ನಕಲಿ ವಿದ್ಯಾರ್ಥಿಗಳ ಮೇಲೆ ತೂಗುಕತ್ತಿ ಎದುರಾಗಿದ್ದು, ಈಗ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿದರ ಪರಿಣಾಮ ಈಗ ನೂರಕ್ಕು ಹೆಚ್ಚು ನಕಲಿ ಅಂಕಪಟ್ಟಿಗಳು ಸಿಗುವ ಸಾಧ್ಯತೆ ಹೆಚ್ಚಾಗಿದೆ ಅನ್ನೋ ಮಾಹಿತಿ ವಿಶ್ವವಿದ್ಯಾಲಯದಿಂದ ಲಭ್ಯವಾಗಿದೆ.

ಬೆಂಗಳೂರು ಉತ್ತರ ವಿವಿಯ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆಯಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಸೇರಿದಂತೆ ವಿವಿದ ಕಾಲೇಜುಗಳಲ್ಲಿ ದಾಖಲಾತಿ ವೇಳೆ ನೀಡಿರುವ ಅಂಕಪಟ್ಟಿಗಳೂ ನಕಲಿಯಾಗಿರುವುದು ಕಂಡು ಬಂದಿದೆ. ಇನ್ನು ಹೆಚ್ಚಾಗಿ ಅಕ್ಕ ಪಕ್ಕದ ರಾಜ್ಯಗಳಿಂದಲೂ ನಕಲಿ ಅಂಕಪಟ್ಟಿ ಪ್ರಕರಣ ಬಯಲಾಗಿದ್ದು, ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೆ ಹೆಚ್ಚಾಗಿ ಕಂಡು ಬಂದಿದೆ, ಪರಿಣಾಮ ಖಾಸಗಿಯವರು ಹಣದಾಸೆಗೆ ಇಷ್ಟೆಲ್ಲಾ ನಕಲಿ ಮಾಡುತ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇಷ್ಟೇ ಅಲ್ಲದೆ ಇನ್ನೂ ನೂರಕ್ಕು ಹೆಚ್ಚು ನಕಲಿ ವಿದ್ಯಾರ್ಥಿಗಳು ಇರುವ ಸಾಧ್ಯತೆ ಹೆಚ್ಚಾಗಿದ್ದು, ವ್ಯಾಸಂಗ ಮಾಡಿದ ಕಾಲೇಜು ಶಾಲೆಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ ಆದೇಶ ನೀಡಿದ್ದಾರೆ.

ಸದ್ಯ ಪತ್ತೆಯಾಗಿರುವ ಅಂಕಪಟ್ಟಿಗಳನ್ನು ನೋಡಿದಾಗ ಹೆಚ್ಚಾಗಿ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದ ನೀಡಿರುವ ಅಂಕಪಟ್ಟಿಗಳು ಸಿಕ್ಕಿವೆ. ಇದರ ಜೊತೆಗೆ ರಾಜ್ಯದಲ್ಲೂ ನಕಲಿ ಅಂಕಪಟ್ಟಿ ತಯಾರು ಮಾಡುವ ಜಾಲ ಹಬ್ಬಿದ್ಯಾ, ಇಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹೀಗೆ ನಕಲಿ ಮಾಡಲು ಮುಂದಾದ್ರಾ ಅನ್ನೂ ಹಲವು ಪ್ರಶ್ನೆಗಳು ಇದೀಗ ಮೂಡಿದೆ. ಇನ್ನೂ ಉತ್ತರ ವಿವಿ ಕುಲಪತಿ ನಿರಂಜನ್ ವಾನಹಳ್ಳಿ ಸಂಪೂರ್ಣ ತನಿಖೆಗೆ ಆದೇಶ ನೀಡಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ವಿಶ್ವ ವಿದ್ಯಾಲಯ ಮಣಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:42 am, Sat, 5 November 22