
ಕೋಲಾರ: ಸಾಗುವಳಿ ಚೀಟಿ ನೀಡದ ಹಿನ್ನೆಲೆ ಅಧಿಕಾರಿಗಳ ಎದುರೆ ರೈತ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕಳೆದ ಐದು ದಿನಗಳ ಹಿಂದೆಯಷ್ಟೆ ತಂದೆ ನಾಗಪ್ಪ ಹಾಗೂ ಮಗ ಅಶ್ವಥ್ ನಾರಾಯಣ ಕೋಲಾರ ಡಿಸಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು, ಪರಿಣಾಮ ಇಂದು ಸ್ಥಳ ಮಹಜರಿಗೆ ತೆರಳಿದ್ದ ತಹಶೀಲ್ದಾರ್ ನಾಗರಾಜ್ ತೆರಳಿದ್ದರು ಈ ವೇಳೆ ತಹಶೀಲ್ದಾರ್ ಸ್ಥಳೀಯ ರೈತರು ಹಾಗೂ ಇವರ ಭೂಮಿಯ ಅಕ್ಕ ಪಕ್ಕದ ರೈತರ ಹೇಳಿಕೆ ಪಡೆಯುವ ವೇಳೆಗೆ ಮಗ ಆಶ್ವತ್ಥ ನಾರಾಯಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇನ್ನೂ ಕೋಲಾರ ತಾಲ್ಲೂಕಿನ ನರಸಾಪುರ ಹೋಬಳಿ ದೊಡ್ಡವಲ್ಲಭಿ ಗ್ರಾಮದ ಸರ್ವೇ ನಂ. 158 ರಲ್ಲಿ ನಾಗಪ್ಪ ಬಿನ್ ಮುನಿಶಾಮಪ್ಪ ಎಂಬುವವರಿಗೆ 3.16 ಗುಂಟೆಗೆ ಮಂಜೂರಾತಿ ನೀಡಲಾಗಿದೆ. ಆದ್ರೆ ಗ್ರಾಮಸ್ಥರ ತಕರಾರು ಅರ್ಜಿ ಸಲ್ಲಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ತೆರಳಿದ್ದ ಕೋಲಾರ ತಹಶೀಲ್ದಾರ್ ನಾಗರಾಜ್ ಎದುರು ಅಶ್ವತ್ಥ ನಾರಾಯಣ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾನೆ. ಐದು ದಿನಗಳ ಹಿಂದೆ ತಂದೆ ನಾಗಪ್ಪ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ರು, ಈ ಹಿನ್ನೆಲೆ ಇಂದು ತಹಶೀಲ್ದಾರ್ ಜಮೀನು ಮಹಜರು ಮಾಡಲು ತೆರಳಿದ್ರು. ಆದ್ರೆ ಜಮೀನು ಮಹಜರು ವೇಳೆ ನಾಗಪ್ಪ ಮಗ ಅಶ್ವತ್ಥ ನಾರಾಯಣ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾನೆ. ಸದ್ಯ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ರೈತ ಚಿಕಿತ್ಸೆ ಪಡೆಯುತ್ತಿದ್ದು, ಕೆಲ ಪ್ರಭಾವಿಗಳ ಒತ್ತಡದಿಂದ ಜಮೀನು ಮಂಜೂರು ಮಾಡಿದ್ರು, ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿದ್ರು ರೈತರಿಗೆ ಭೂಮಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.
Published On - 7:37 pm, Wed, 17 August 22