ಹೈಕಮಾಂಡ್ ನಿರ್ಧಾರ ಒಪ್ಪಲೇಬೇಕಿದೆ, ಪಕ್ಷೇತರ ಸ್ಪರ್ಧೆ ಮಾಡಲ್ಲ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ

| Updated By: Rakesh Nayak Manchi

Updated on: Mar 23, 2024 | 3:47 PM

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಅದರಂತೆ, ಜೆಡಿಎಸ್​ ಪಕ್ಷಕ್ಕೆ ಹಾಸನ, ಮಂಡ್ಯ ಕ್ಷೇತ್ರಗಳ ಜೊತೆಗೆ ಇದೀಗ ಕೋಲಾರ ಕ್ಷೇತ್ರವನ್ನೂ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಇದರಿಂದಾಗಿ ಹಾಲಿ ಸಂಸದ ಎಸ್ ಮುನಿಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ದೆಹಲಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ನಿರ್ಧಾರ ಒಪ್ಪಲೇಬೇಕಿದೆ, ಪಕ್ಷೇತರ ಸ್ಪರ್ಧೆ ಮಾಡಲ್ಲ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ
ಹೈಕಮಾಂಡ್ ನಿರ್ಧಾರ ಒಪ್ಪಲೇಬೇಕಿದೆ, ಪಕ್ಷೇತರ ಸ್ಪರ್ಧೆ ಮಾಡಲ್ಲ ಎಂದ ಕೋಲರ ಬಿಜೆಪಿ ಸಂಸದ ಮುನಿಸ್ವಾಮಿ
Follow us on

ನವದೆಹಲಿ, ಮಾ.23: ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಅದರಂತೆ, ಜೆಡಿಎಸ್​ ಪಕ್ಷಕ್ಕೆ ಹಾಸನ, ಮಂಡ್ಯ ಕ್ಷೇತ್ರಗಳ ಜೊತೆಗೆ ಇದೀಗ ಕೋಲಾರ (Kolar Lok Sabha Constituency) ಕ್ಷೇತ್ರವನ್ನೂ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಇದರಿಂದಾಗಿ ಹಾಲಿ ಸಂಸದ ಎಸ್ ಮುನಿಸ್ವಾಮಿ (S Muniswamy) ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ದೆಹಲಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಹೈಕಮಾಂಡ್ ನಾಯಕರ ನಿರ್ಧಾರವನ್ನು ನಾನು ಒಪ್ಪಲೇಬೇಕಿದೆ. ಅನೇಕ ನಾಯಕರು ಪಕ್ಷಕ್ಕೆ ತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕು. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿದೆ. ನನ್ನನ್ನು ಏನು ಮಾಡಬೇಕೆಂದು ಪಕ್ಷ ನಿರ್ಧಾರ ಮಾಡಲಿದೆ. ಕೋಲಾರದ ಸದ್ಯದ ಪರಿಸ್ಥಿತಿಯನ್ನು ದೇವೇಗೌಡರಿಗೆ ವಿವರಿಸಿದ್ದೇನೆ. ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚು ಪ್ರಚಾರ ನಾನು ಮಾಡುತ್ತೇನೆ ಎಂದು ಟಿವಿ9ಗೆ ಮುನಿಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ ಟಿಕೆಟ್ ಮಿಸ್: ನಡ್ಡಾ ಭೇಟಿ ಬಳಿಕ ಟಿವಿ9ಗೆ ಖಚಿತಪಡಿಸಿದ ಸಂಸದ ಮುನಿಸ್ವಾಮಿ

ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಬಿಜೆಪಿ ಹೈಕಮಾಂಡ್ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಆದರೆ, ನಾಲ್ಕೈದು ಕ್ಷೇತ್ರಗಳನ್ನು ಕೇಳಿದ್ದರೂ ಕೇವಲ ಎರಡು ಕೊಟ್ಟರೆ ಹೇಗೆ ಎಂದು ಜೆಡಿಎಸ್ ಅಸಮಾಧಾನ ಹೊರಹಾಕಿದ್ದು, ಕೋಲಾರ ಕ್ಷೇತ್ರವನ್ನಾದರೂ ಕೊಡಿ ಎಂದು ಬೇಡಿಕೆ ಇಟ್ಟಿತ್ತು.

ಈ ಸಂಬಂಧ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಇದೀಗ ಅಂತಿಮವಾಗಿ ಕೋಲಾರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಈ ಬಗ್ಗೆ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿದ್ದ ಮುನಿಸ್ವಾಮಿ ಅವರಿಗೆ ಮಾಹಿತಿ ನೀಡಲಾಗಿದೆ.

ಜೆಡಿಎಸ್ ಜೊತೆ ಮೈತ್ರಿಯಿಂದ ನಿಮಗೆ ಟಿಕೆಟ್ ಕೈತಪ್ಪಿದೆ ಎಂದು ನಡ್ಡಾ ಅವರು ಮುನಿಸ್ವಾಮಿಗೆ ಸ್ಪಷ್ಟವಾಗಿ ಹೇಳಿದ್ದು, ಸೂಕ್ತ ಸಮಯದಲ್ಲಿ ಪಕ್ಷ ನಿಮಗೆ ಸ್ಥಾನಮಾನ ನೀಡಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭರವಸೆ ನೀಡಿದ್ದಾರೆ ಎಂದು ಮುನಿಸ್ವಾಮಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sat, 23 March 24