Kolar News: ಕೌಟುಂಬಿಕ ಕಲಹ, ಪತ್ನಿಯನ್ನು ಕೊಂದು ಎಸ್ಕೇಪ್ ಆದ ಪತಿ

| Updated By: ಆಯೇಷಾ ಬಾನು

Updated on: Jul 19, 2023 | 1:30 PM

ತಡರಾತ್ರಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಜಗಳ ವಿಪರೀತಕ್ಕೆ ಹೋಗಿ ರಫಿಕ್ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

Kolar News: ಕೌಟುಂಬಿಕ ಕಲಹ, ಪತ್ನಿಯನ್ನು ಕೊಂದು ಎಸ್ಕೇಪ್ ಆದ ಪತಿ
ಸಾಂದರ್ಭಿಕ ಚಿತ್ರ
Follow us on

ಕೋಲಾರ, ಜುಲೈ 19: ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ಪತ್ನಿಯನ್ನು ಕೊಂದ ಧಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಜೀವ್ ನಗರದಲ್ಲಿ ನಡೆದಿದೆ(Husband Killed Wife). ಪತ್ನಿ ಶಹನಾಜ್​(30)ನನ್ನು ಪತಿ ರಫೀಕ್(40) ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ರಫೀಕ್​ಗಾಗಿ ಮಾಲೂರು ಪೊಲೀಸರು(Malur police) ಹುಡುಕಾಟ ನಡೆಸುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡರಾತ್ರಿ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಜಗಳ ವಿಪರೀತಕ್ಕೆ ಹೋಗಿ ರಫಿಕ್ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ರಫಿಕ್ ಜೆಸಿಬಿ ಆಪರೇಟರ್ ಆಗಿದ್ದರು.

ಬಂಡೆ ಕುಸಿದು ಬಿದ್ದು ಕಲ್ಲು ಕುಟುಕ ಸಾವು

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿ ಬಳಿ ಬಂಡೆ ಕೆಲಸ ಮಾಡುವ ವೇಳೆ ಬಂಡೆ ಕುಸಿದು ಬಿದ್ದು ಕಲ್ಲು ಕುಟುಕ ಮೃತಪಟ್ಟಿದ್ದಾರೆ. ಮಗನ ಎದುರೆ ತಂದೆ ಮೃತಪಟ್ಟಿದ್ದು ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಕ್ರಮವಾಗಿ ಬಂಡೆ ಹೊಡೆಯುವ ವೇಳೆ ಬಂಡೆ ಬಿದ್ದು ದುರ್ಘಟನೆ ಸಂಭವಿಸಿದೆ. ಆಂಧ್ರ ಮೂಲದ ಬಂಗಾರಪೇಟೆ ನಿವಾಸಿ ಕಲ್ಲು ಕುಟುಕ ನಾರಾಯಣಪ್ಪ (52) ಮೃತ ದುರ್ದೈವಿ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮಾಸ್ತಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಉಪವಿಭಾಗಧಿಕಾರಿ ವೆಂಕಟಲಕ್ಷ್ಮಿ ಕೂಡ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಹೆಂಡತಿಯ ಅನೈತಿಕ ಸಂಬಂಧದಿಂದ ಮನನೊಂದ ಗಂಡ; ಸಾವಿನ ಆಡಿಯೋ ರೆಕಾರ್ಡ್​ ಮಾಡಿ ಆತ್ಮಹತ್ಯೆಗೆ ಶರಣು

ಜಿಲ್ಲಾಸ್ಪತ್ರೆ 4ನೇ ಮಹಡಿಯಿಂದ ಬಿದ್ದು ರೋಗಿ ಸಾವು

ಕೊಡಗು ಜಿಲ್ಲಾಸ್ಪತ್ರೆ 4ನೇ ಮಹಡಿಯಿಂದ ಬಿದ್ದು ರೋಗಿ ಮೃತಪಟ್ಟ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯೊಂದರ ವೈದ್ಯನಾಗಿದ್ದ ಪೂಣಚ್ಚ(80) ಮೃತ ದುರ್ದೈವಿ. ರಾತ್ರಿ ನಿದ್ದೆ ಮಂಪರಿನಲ್ಲಿ ಆಕಸ್ಮಿಕವಾಗಿ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಣ್ಣಿನಪೊರೆ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಡಾ.ಪೂಣಚ್ಚ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ