ಬಸ್​ ಟಿಕೆಟ್ ವಿಚಾರಕ್ಕೆ ಕಿರಿಕ್​​; ಕಂಡಕ್ಟರ್ ಮೇಲೆ ಹೋಂಗಾರ್ಡ್​ನಿಂದ ಹಲ್ಲೆ, ಇಬ್ಬರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 28, 2024 | 5:08 PM

ಕೋಲಾರ ಜಿಲ್ಲೆಯ ಮುಳಬಾಗಿಲು(Mulabagilu) ತಾಲೂಕಿನ ಅಗರ ಗ್ರಾಮದಲ್ಲಿ ಬಸ್​ ಟಿಕೆಟ್​ ಕೊಡುವ ವಿಚಾರದಲ್ಲಿ ಕಂಡಕ್ಟರ್​(Conductor) ಮತ್ತು ಹೋಂಗಾರ್ಡ್(Home guard)​ ನಡುವೆ ಗಲಾಟೆ​ ಆಗಿದ್ದು, ರಸ್ತೆ ನಡುವೆಯೇ ಹೋಂಗಾರ್ಡ್ ಮತ್ತು ಆತನ ಸಹೋದರ ಸೇರಿ ಕಂಡಕ್ಟರ್​​ನನ್ನು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕೋಲಾರ, ಮೇ.28: ಬಸ್​ ಟಿಕೆಟ್​ ಕೊಡುವ ವಿಚಾರದಲ್ಲಿ ಕಂಡಕ್ಟರ್​(Conductor) ಮತ್ತು ಹೋಂಗಾರ್ಡ್(Home guard)​ ನಡುವೆ ಗಲಾಟೆ​ ಆಗಿದ್ದು, ರಸ್ತೆ ನಡುವೆಯೇ ಹೋಂಗಾರ್ಡ್ ಅನುದೀಪ್ ಮತ್ತು ಆತನ ಸಹೋದರ ಪ್ರದೀಪ್ ಸೇರಿ ಕಂಡಕ್ಟರ್​​ನನ್ನು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು(Mulabagilu) ತಾಲೂಕಿನ ಅಗರ ಗ್ರಾಮದಲ್ಲಿ ನಡೆದಿದೆ. ಟಿಕೆಟ್​ ತೆಗೆದುಕೊಳ್ಳುವಂತೆ ಹೇಳಿದ್ದಕ್ಕೆ ಕಂಡಕ್ಟರ್​ ನಾಗರಾಜಪ್ಪನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಹೋಂಗಾರ್ಡ್​ ಅನುದೀಪ್​ ಹಾಗೂ ಆತನ ಸೋದರ ಪ್ರದೀಪ್ ಅವರನ್ನು​ ಬಂಧಿಸಿ, ಮುಳಬಾಗಿಲು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಹಲ್ಲೆಯ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ