ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ; ಘಟನೆ ಖಂಡಿಸಿ ನವೆಂಬರ್ 18 ರಂದು ಕೋಲಾರ ಬಂದ್​

| Updated By: ganapathi bhat

Updated on: Nov 16, 2021 | 9:01 PM

Kolar Bandh: ಇದಕ್ಕೂ ಮೊದಲು ಪ್ರತಿಭಟನೆ ಮಾಡಿ ಅರೋಪಿಗಳನ್ನು ಬಂಧಿಸುವಂತೆ ಮಾಲಾಧಾರಿಗಳು ಮನವಿ‌ ಮಾಡಿದ್ದರು. ಸದ್ಯ 10 ಜನರನ್ನು ಬಂಧಿಸಿ ಕೋಲಾರ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ; ಘಟನೆ ಖಂಡಿಸಿ ನವೆಂಬರ್ 18 ರಂದು ಕೋಲಾರ ಬಂದ್​
ಪ್ರಾತಿನಿಧಿಕ ಚಿತ್ರ
Follow us on

ಕೋಲಾರ: ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಪ್ರಕರಣ ಘಟನೆ ಖಂಡಿಸಿ ನವೆಂಬರ್ 18 ರಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ. ಕೋಲಾರ ಹಿಂದೂಗಳ ಒಕ್ಕೂಟದಿಂದ ಬಂದ್​ಗೆ ಕರೆ ನೀಡಲಾಗಿದೆ. ನವೆಂಬರ್ 13 ರಂದು ಬಸ್​ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದರು. ಕೋಲಾರದ ಕ್ಲಾಕ್ ಟವರ್ ಬಳಿ ಕಲ್ಲು ತೂರಾಟ ನಡೆದಿತ್ತು. ಈ ಘಟನೆ ಖಂಡಿಸಿ ಬಂದ್​ಗೆ ಕರೆ ನೀಡಲಾಗಿದೆ. ಇದಕ್ಕೂ ಮೊದಲು ಪ್ರತಿಭಟನೆ ಮಾಡಿ ಅರೋಪಿಗಳನ್ನು ಬಂಧಿಸುವಂತೆ ಮಾಲಾಧಾರಿಗಳು ಮನವಿ‌ ಮಾಡಿದ್ದರು. ಸದ್ಯ 10 ಜನರನ್ನು ಬಂಧಿಸಿ ಕೋಲಾರ ನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ನಾಪತ್ತೆಯಾಗಿದ್ದ ಬಾಲಕಿಯರಿಬ್ಬರನ್ನು ರಕ್ಷಿಸಿದ ಪೊಲೀಸರು
ನಾಪತ್ತೆಯಾಗಿದ್ದ ಬಾಲಕಿಯರಿಬ್ಬರನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರಿನ ಯಶವಂತಪುರ ಠಾಣೆ ಪೊಲೀಸರಿಂದ ಬಾಲಕಿಯರು ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಬಾಲಕಿಯರ ಜೊತೆಯಲ್ಲಿದ್ದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ನವೆಂಬರ್ 5 ರಂದು ಸುಬೇದಾರ್​ ಪಾಳ್ಯದಿಂದ ಬಾಲಕಿಯರು ತೆರಳಿದ್ದರು. ಯಶವಂತಪುರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು.

ಬೆಂಗಳೂರು: ವಂಚನೆ ಆರೋಪ ಬಿಡಿಎ ಅಧಿಕಾರಿಗಳ ವಿರುದ್ಧ ಎಫ್​ಐಆರ್
ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿರುವ ಆರೋಪದಲ್ಲಿ ಬಿಡಿಎ ಅಧಿಕಾರಿಗಳಾದ ಮಹೇಶ್ ಕುಮಾರ್, ಶಿವರಾಜ್, ಬಿಡಿಎ ಬ್ರೋಕರ್ ಮೋಹನ್ ಕುಮಾರ್ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಆರ್‌.ಟಿ. ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಹೇಮಾ ರಾಜು ನೀಡಿದ್ದ ದೂರಿನಂತೆ ಎಫ್​ಐಆರ್ ದಾಖಲು ಮಾಡಲಾಗಿದೆ.

ಹಾಸನ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಎಸಿಬಿ ಬಲೆಗೆ
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ 50,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಡಿಸಿ ಕಚೇರಿ ಆಪ್ತ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಭೂಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಜೀವ್​ ಎಂಬಾತನನ್ನು ಖಾಸಗಿ ಹೋಟೆಲ್​ನಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಬಂಧನ ಮಾಡಲಾಗಿದೆ. ಲಂಚ ಸ್ವೀಕರಿಸುತ್ತಿದ್ದ ಸಂಜೀವ್ ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಡಿವೈಎಸ್​ಪಿ ಸತೀಶ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ: ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ; ಒಂದೇ ನಿವೇಶನ ಹಲವರಿಗೆ ಮಾರಾಟ!

ಇದನ್ನೂ ಓದಿ: ಬೆಂಗಳೂರು: ಕಳ್ಳಸಾಗಣೆ ಮಾಡುತ್ತಿದ್ದ 170 ನಕ್ಷತ್ರ ಆಮೆಗಳ ರಕ್ಷಣೆ

Published On - 8:33 pm, Tue, 16 November 21