ದಾವಣಗೆರೆ: ಕೊರೊನಾದಿಂದ ಸಾವನ್ನಪ್ಪಿದ ಆರ್ಎಸ್ಎಸ್ ಸಂಘಟನೆಯ ಸಕ್ರಿಯ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಕೋಲಾರದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಸಾಂತ್ವನ ಹೇಳಿದ್ದಾರೆ. ಈ ವೇಳೆ ಮುನಿಯಪ್ಪಗೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸಾಥ್ ನೀಡಿದರು.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ದಾವಣಗೆರೆ ನಗರದ ದುರ್ಗಾಂಭಿಕಾ ದೇವಸ್ಥಾನದ ಬಳಿ ಇರುವ ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತ ಹಾದಿಮನಿ ಗಣೇಶ್ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದರು.
ಹಾದಿಮನಿ ಗಣೇಶ್ ಅವರು ಕೊರೊನಾ ಸೋಂಕಿನಿಂದ ಇತ್ತೀಚಿಗೆ ಸಾವನ್ನಪ್ಪಿದ್ದರು. ಕೆಲ ಹೊತ್ತು ಕುಟುಂಬ ಸದಸ್ಯರ ಜೊತೆ ಕೆ.ಎಚ್. ಮುನಿಯಪ್ಪ ಮಾತಾಡಿದರು. ಇದೇ ವೇಳೆ ಹಾದಿಮನಿ ಗಣೇಶ್ ಬಗ್ಗೆ ಮುನಿಯಪ್ಪಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ್ಲಿಕಾರ್ಜುನ ಮಾಹಿತಿ ನೀಡಿದರು.
ಹಿರಿಯ ಕನ್ನಡ ಕಟ್ಟಾಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ವಿಧಿವಶ
(kolar congress leaders kh muniyappa consoles rss worker who died due to coronavirus in davanagere)
Published On - 4:26 pm, Wed, 7 July 21